ETV Bharat / international

ಸಾಯುವ ಕಾಲಕ್ಕೆ ಜೊತೆಯಲ್ಲಿದ್ದ 33 ವರ್ಷದ ಗೆಳತಿಗೆ 900 ಕೋಟಿ ಮೌಲ್ಯದ ಆಸ್ತಿ ಕೊಟ್ಟ ಇಟಲಿ ಮಾಜಿ ಪ್ರಧಾನಿ - ETV Bharath Kannada news

ಇಟಲಿಯಲ್ಲಿ ಮೂರು ಬಾರಿ ಪ್ರಧಾನಿ ಆಗಿ ಆಳಿದ ಬೆರ್ಲುಸ್ಕೋನಿ 86ನೇ ವಯಸ್ಸಿನಲ್ಲಿ ಲ್ಯುಕೇಮಿಯಾ ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಜೂನ್ 12, 2023 ರಂದು ನಿಧನರಾದರು.

ಇಟಲಿ ಮಾಜಿ ಪ್ರಧಾನಿ ಬೆರ್ಲುಸ್ಕೋನಿ
ಇಟಲಿ ಮಾಜಿ ಪ್ರಧಾನಿ ಬೆರ್ಲುಸ್ಕೋನಿ
author img

By

Published : Jul 10, 2023, 3:41 PM IST

ರೋಮ್ (ಇಟಲಿ): ಸಾವಿನ ನಂತರ ಆಸ್ತಿಯನ್ನು ಮನೆಯವರಿಗೆ ಹಂಚುವುದು ಸಾಮಾನ್ಯ. ಆದರೆ ಇತ್ತೀಚೆಗೆ ಮರಣ ಹೊಂದಿದ ಇಟಲಿಯ ಪ್ರಧಾನಿ ತಮ್ಮ 33 ವರ್ಷದ ಗೆಳತಿಗೆ 900 ಕೋಟಿ ಮೌಲ್ಯದ ಆಸ್ತಿಯನ್ನು ಬರೆದಿದ್ದಾರೆ. ಅವರ ಮರಣದ ನಂತರ ಓದಲಾದ ವಿಲ್​ನಲ್ಲಿ ಈ ಮಹಿತಿ ಬಹಿರಂಗವಾಗಿದೆ.

ಜೂನ್ 12 ರಂದು ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ನಿಧನರಾದರು. ಇಟಲಿಯ ಮೂರು ಬಾರಿ ಪ್ರಧಾನಿಯಾಗಿದ್ದ ಬರ್ಲುಸ್ಕೋನಿ ಅವರು 100 ಮಿಲಿಯನ್ ಯುರೋಗಳಷ್ಟು ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಇದರಲ್ಲಿ ಸುಮಾರು 906.29 ಕೋಟಿ ರೂ.ಗಳನ್ನು ಇಟಲಿಯ ಡೆಪ್ಯೂಟಿ ಆಗಿರುವ ಮಾರ್ಟಾ ಫಾಸಿನಾ ಅವರಿಗೆ ನೀಡಿದ್ದಾರೆ.

ಬೆರ್ಲುಸ್ಕೋನಿಯ ಅವರ ಆಸ್ತಿ 6 ಬಿಲಿಯನ್ ಯುರೋಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಫಾಸಿನಾ ಮತ್ತು ಬೆರ್ಲುಸ್ಕೋನಿ ನಡುವಿನ ಸಂಬಂಧವು ಮಾರ್ಚ್ 2020 ರಲ್ಲಿ ಪ್ರಾರಂಭವಾಯಿತು. ಇಬ್ಬರೂ ಅವಿವಾಹಿತರಾಗಿದ್ದರೂ, ಮಾಜಿ ಇಟಾಲಿಯನ್ ಪ್ರಧಾನಿ ಅವರು ಮರಣಶಯ್ಯೆಯಲ್ಲಿದ್ದಾಗ ಫಾಸಿನಾ ಅವರನ್ನು ಅವರ "ಪತ್ನಿ" ಎಂದು ಉಲ್ಲೇಖಿಸಿದ್ದರು. 33 ವರ್ಷ ವಯಸ್ಸಿನ ಫಾಸಿನಾ 2018 ರ ಚುನಾವಣೆಯಿಂದ ಇಟಾಲಿಯನ್ ಸಂಸತ್ತಿನ ಚೇಂಬರ್ ಆಫ್ ಡೆಪ್ಯೂಟೀಸ್‌ ಸದಸ್ಯೆಯಾಗಿದ್ದರು.

ಬರ್ಲುಸ್ಕೋನಿ 1965 ರಲ್ಲಿ ಕಾರ್ಲಾ ಡಾಲ್'ಒಗ್ಲಿಯೊ ಅವರನ್ನು ವಿವಾಹವಾದರು. ಕಾರ್ಲಾಗೆ ಮರೀನಾ, ಪಿಯರ್ಸಿಲ್ವಿಯೊ ಎಂಬ ಮಕ್ಕಳಿದ್ದಾರೆ. 1990ರಲ್ಲಿ ವೆರೋನಿಕಾ ಲ್ಯಾರಿಯೊ ಅವರೊಂದಿಗೆ ಎರಡನೇ ಮದುವೆ ನಡೆಯಿತು. ವೆರೋನಿಕಾ ಲ್ಯಾರಿಯೊಗೆ ಬಾರ್ಬರಾ, ಎಲಿಯೊನೊರಾ ಮತ್ತು ಲುಯಿಗಿ ಎಂಬ ಮೂವರು ಮಕ್ಕಳಿದ್ದಾರೆ.

1994 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಬೆರ್ಲುಸ್ಕೋನಿ, ಫೋರ್ಜಾ ಇಟಾಲಿಯಾ ಎಂಬ ಸೆಂಟರ್ ರೈಟ್ ಲಿಬರಲ್ ಕನ್ಸರ್ವೇಟಿವ್ ಪಕ್ಷವನ್ನು ಸ್ಥಾಪಿಸಿದ್ದರು. ಮಾರ್ಟಾ ಫಾಸಿನಾ ಫೋರ್ಜಾ ಇಟಾಲಿಯಾ ಸದಸ್ಯೆಯಾಗಿದ್ದರು. ಬೆರುಸ್ಕೋನಿಯ ಅವರ ವ್ಯಾಪಾರ ವ್ಯವಹಾರಗಳನ್ನು ಇಬ್ಬರು ಮಕ್ಕಳಾದ ಮರೀನಾ ಮತ್ತು ಪಿಯರ್ ಸಿಲ್ವಿಯೊ ನೋಡಿಕೊಳ್ಳುತ್ತಿದ್ದರು. ಅವರು ಬೆರುಸ್ಕೋನಿಯ ಮರಣಕ್ಕೂ ಮುನ್ನವೇ ಸಂಸ್ಥೆಯ ಕಾರ್ಯನಿರ್ವಾಹಕರಾಗಿದ್ದರು. ಇವರಿಬ್ಬರು ಫಿನ್‌ಇನ್‌ವೆಸ್ಟ್ ಕುಟುಂಬದ ಹಿಡುವಳಿಯಲ್ಲಿ 53 ಪ್ರತಿಶತ ಪಾಲನ್ನು ಹೊಂದಿರುತ್ತಾರೆ.

ವಿಲ್​ನಲ್ಲಿ ಇಟಲಿಯ ಮಾಜಿ ಪ್ರಧಾನಿ ತಮ್ಮ ಸಹೋದರ ಪಾವೊಲೊಗೆ 100 ಮಿಲಿಯನ್ ಯುರೋಗಳನ್ನು (ರೂ. 900 ಕೋಟಿಗಿಂತ ಹೆಚ್ಚು) ಮತ್ತು ಮಾಜಿ ಸೆನೆಟರ್ ಆಗಿದ್ದ 81 ವರ್ಷದ ಮಾರ್ಸೆಲ್ಲೊ ಡೆಲ್'ಉಟ್ರಿಗೆ 30 ಮಿಲಿಯನ್ ಯುರೋಗಳನ್ನು (ರೂ. 270 ಕೋಟಿಗಿಂತ ಹೆಚ್ಚು) ಕೊಟ್ಟಿದ್ದಾರೆ.

ಚಲನಚಿತ್ರ ಹಕ್ಕುಗಳ ಮಾರಾಟ ತೆರಿಗೆ ವಂಚನೆ ಮಾಡಿದ ಪ್ರಕರಣದ ಸಂಬಂಧ ಕೋರ್ಟ್ ಅವರಿಗೆ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಪ್ರಕಟವಾಗುವ ವೇಳೆಗೆ ವಯಸ್ಸು 76 ಆಗಿದ್ದ ಕಾರಣ, ಅವರಿಗೆ ಜೈಲು ಶಿಕ್ಷೆ ಬದಲು ಅಲ್ಝೈಮರ್ ರೋಗಿಗಳಿಗೆ ಸಹಾಯ ಮಾಡುವ ಸಮುದಾಯ ಸೇವೆಗೆ ಆದೇಶಿಸಲಾಗಿತ್ತು. ಅಲ್ಲದೇ ಬೆರ್ಲುಸ್ಕೋನಿ ಅವರನ್ನು ಆರು ವರ್ಷಗಳ ಕಾಲ ರಾಜಕೀಯದಿಂದ ನಿಷೇಧಿಸಲಾಯಿತು. ಅವರು ಇಟಲಿಯಲ್ಲಿ ಅತಿ ಹೆಚ್ಚು ಸೇವೆ ಸಲ್ಲಿಸಿದ ಪ್ರಧಾನಿಯಾಗಿದ್ದರು.

86 ವರ್ಷದ ಬೆರ್ಲುಸ್ಕೋನಿ ಜೂನ್ 12, 2023 ರಂದು ನಿಧನರಾದರು. ಅವರು ಬಿಲಿಯನೇರ್ ಉದ್ಯಮಿ ಮತ್ತು ರಾಜಕಾರಣಿಯಾಗಿದ್ದರು. ಅವರು ಯುರೋಪಿಯನ್ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು.

ಮಾಜಿ ಪ್ರಧಾನಿ ತಮ್ಮ ಉಯಿಲಿನಲ್ಲಿ " ನಾನು ಷೇರುಗಳನ್ನು ನನ್ನ ಮಕ್ಕಳಾದ ಮರೀನಾ ಮತ್ತು ಪಿಯರ್ ಸಿಲ್ವಿಯೊಗೆ ಸಮಾನ ಭಾಗಗಳಲ್ಲಿ ಬಿಡುತ್ತೇನೆ. ಉಳಿದ ಎಲ್ಲವನ್ನು ನನ್ನ ಐದು ಮಕ್ಕಳಾದ ಮರೀನಾ, ಪಿಯರ್ ಸಿಲ್ವಿಯೊ, ಬಾರ್ಬರಾ, ಎಲಿಯೊನೊರಾ ಮತ್ತು ಲುಯಿಗಿಗೆ ಸಮಾನ ಭಾಗಗಳಲ್ಲಿ ಬಿಡುತ್ತೇನೆ" ಎಂದು ಬರೆದಿದ್ದರು.

ಲ್ಯುಕೇಮಿಯಾದಿಂದ ಬಳಲುತ್ತಿದ್ದ ಬೆರ್ಲುಸ್ಕೋನಿ ಕೊನೆಯವರೆಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರು ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿಯ ಬಲಪಂಥೀಯ ಸರ್ಕಾರದಲ್ಲಿ ಸೆನೆಟರ್ ಮತ್ತು ಪಾಲುದಾರರಾಗಿದ್ದರು. ಸೆಪ್ಟೆಂಬರ್ 2020 ರಲ್ಲಿ ಅವರು ಕೋವಿಡ್ -19 ಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಏಪ್ರಿಲ್ 2023 ರಲ್ಲಿ ಲ್ಯುಕೇಮಿಯಾ ಮತ್ತು ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 12 ಕೊನೆಯುಸಿರೆಳೆದರು.

ಇದನ್ನೂ ಓದಿ: ಡ್ರೋನ್ ದಾಳಿ​ ಮೂಲಕ ಐಸಿಸ್‌ ನಾಯಕ ಒಸಾಮಾ ಅಲ್-ಮುಹಾಜರ್ ಹತ್ಯೆಗೈದ ಅಮೆರಿಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.