ETV Bharat / international

ಆಧ್ಯಾತ್ಮದ ಹೆಸರಲ್ಲಿ ಚೆಲುವೆಯರಿಗೆ ಬಲೆ.. ಹೀಗಿದೆ ಬಿಕಿನಿ ಕಿಲ್ಲರ್ ಚಾರ್ಲ್ಸ್​ ಶೋಭರಾಜ್ ಕ್ರೈಮ್​​ ಹಿಸ್ಟರಿ - ಆಧ್ಯಾತ್ಮದ ಹೆಸರಲ್ಲಿ ಚೆಲುವೆಯರಿಗೆ ಬಲೆ

ಬಾಲ್ಯದಲ್ಲಿಯೇ ತುಂಬಾ ಕಿಲಾಡಿಯಾಗಿದ್ದ ಮತ್ತು ಅಪರಾಧ ಮನೋಭಾವನೆ ಹೊಂದಿದ್ದ ಶೋಭರಾಜ್ ಚಿಕ್ಕ ಪುಟ್ಟ ಅಪರಾಧಗಳಿಗಾಗಿ ಫ್ರಾನ್ಸ್​ ಜೈಲುಗಳಲ್ಲಿ ಅನೇಕ ಬಾರಿ ಶಿಕ್ಷೆ ಅನುಭವಿಸಿದ್ದ. 1970ರ ಸುಮಾರಿಗೆ ಪ್ರಪಂಚದಾದ್ಯಂತ ಸುತ್ತಾಡಲು ಆರಂಭಿಸಿದ ಆತ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ಇರಲಾರಂಭಿಸಿದ್ದ.

ಬಿಕಿನಿ ಕಿಲ್ಲರ್ ಚಾರ್ಲ್ಸ್​ ಶೋಭರಾಜ್ ನೇಪಾಳ ಜೈಲಿನಿಂದ ಬಿಡುಗಡೆ
Bikini killer Charles Shobharaj released from Nepal jail
author img

By

Published : Dec 22, 2022, 3:56 PM IST

Updated : Dec 22, 2022, 6:34 PM IST

ಕಠ್ಮಂಡು(ನೇಪಾಳ): ಫ್ರೆಂಚ್ ಸೀರಿಯಲ್ ಕಿಲ್ಲರ್ ಚಾರ್ಲ್ಸ್​ ಶೋಭರಾಜ್​ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ನೇಪಾಳದ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. 1970ರ ದಶಕದಲ್ಲಿ ಏಷ್ಯಾದಲ್ಲಿ ನಡೆದ ಹಲವಾರು ಸರಣಿ ಕೊಲೆಗಳಿಗೆ ಕಾರಣನಾಗಿದ್ದ ಶೋಭರಾಜ್ ಜೀವನವನ್ನು ಆಧರಿಸಿ ಚಿತ್ರಿಸಲಾದ "ದಿ ಸರ್ಪೆಂಟ್" ವೆಬ್ ಸಿರೀಸ್​ ನೆಟ್​ಫ್ಲಿಕ್ಸ್​​ನಲ್ಲಿ ಪ್ರದರ್ಶಿತವಾಗಿದೆ.

ಇಬ್ಬರು ಉತ್ತರ ಅಮೆರಿಕನ್ನರ ಕೊಲೆ ಅಪರಾಧದಲ್ಲಿ 2003 ರಿಂದ ನೇಪಾಳದ ಜೈಲಿನಲ್ಲಿರುವ ಶೋಭರಾಜ್​ನನ್ನು ಆರೋಗ್ಯ ಸಮಸ್ಯೆಗಳ ಕಾರಣದಿಂದ ಜೈಲಿನಿಂದ ಬಿಡುಗಡೆ ಮಾಡಲು ಕೋರ್ಟ್ ಆದೇಶಿಸಿದೆ. ಆತನನ್ನು ನಿರಂತರವಾಗಿ ಜೈಲಿನಲ್ಲಿ ಇಡುವುದು ಕೈದಿಯೊಬ್ಬನ ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ ಎಂದು ಕೋರ್ಟ್​ ಆದೇಶದಲ್ಲಿ ಹೇಳಿದೆ.

ಆತನ ವಿರುದ್ಧ ಯಾವುದೇ ಬಾಕಿ ಪ್ರಕರಣಗಳಿಲ್ಲದಿದ್ದರೆ, ಈ ನ್ಯಾಯಾಲಯವು ಅವನನ್ನು ಇಂದಿನೊಳಗೆ ಬಿಡುಗಡೆ ಮಾಡುವಂತೆ ಮತ್ತು 15 ದಿನಗಳಲ್ಲಿ ಶೋಭರಾಜ್​ನನ್ನು ಅವನ ದೇಶಕ್ಕೆ ಹಿಂತಿರುಗಿ ಕಳುಹಿಸಲು ಆದೇಶಿಸುತ್ತದೆ ಎಂದು ಕೋರ್ಟ್ ಹೇಳಿದೆ.

ಆಧ್ಯಾತ್ಮದ ಹೆಸರಲ್ಲಿ, ಡ್ರಗ್ಸ್​ ಬಲೆಗೆ ಬೀಳಿಸುತ್ತಿದ್ದ ಚಾಲಾಕಿ.. ಬಾಲ್ಯದಲ್ಲಿಯೇ ತುಂಬಾ ಕಿಲಾಡಿಯಾಗಿದ್ದ ಮತ್ತು ಅಪರಾಧ ಮನೋಭಾವನೆ ಹೊಂದಿದ್ದ ಶೋಭರಾಜ್ ಚಿಕ್ಕ ಪುಟ್ಟ ಅಪರಾಧಗಳಿಗಾಗಿ ಫ್ರಾನ್ಸ್​ ಜೈಲುಗಳಲ್ಲಿ ಅನೇಕ ಬಾರಿ ಶಿಕ್ಷೆ ಅನುಭವಿಸಿದ್ದ. 1970ರ ಸುಮಾರಿಗೆ ಪ್ರಪಂಚದಾದ್ಯಂತ ಸುತ್ತಾಡಲು ಆರಂಭಿಸಿದ ಆತ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ಇರಲಾರಂಭಿಸಿದ್ದ. ಈತ ಆಧ್ಯಾತ್ಮದ ಹೆಸರಿನಲ್ಲಿ ಶ್ರೀಮಂತ ಹಾಗೂ ಚೆಲುವೆಯರನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಅವರಿಗೆ ಡ್ರಗ್ಸ್​ ಚಟ ಅಂಟಿಸುತ್ತಿದ್ದ. ನಂತರ ಅವರ ಬಳಿಯ ಹಣ ಲೂಟಿ ಮಾಡಿ ಕೊಂದು ಹಾಕುತ್ತಿದ್ದ.

ಬಿಕಿನಿ ಕಿಲ್ಲರ್​ ಹೆಸರು ಬಂದಿದ್ದು ಹೀಗೆ.. ಮೃದುಭಾಷಿ ಮತ್ತು ಆಧುನಿಕ ಯುವಕನಂತೆ ಕಾಣುತ್ತಿದ್ದ ಆತ ತಾನು ಮಾಡಿದ ಮೊದಲನೇ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ. 1975 ರಲ್ಲಿ ಈತ ಮೊದಲ ಬಾರಿ ಅಮೆರಿಕ ಮೂಲದ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ್ದ. ಆಕೆಯ ಬಿಕಿನಿ ಧರಿಸಿದ್ದ ಮೃತದೇಹ ಪಟ್ಟಾಯಾ ಕಡಲತೀರದಲ್ಲಿ ಪತ್ತೆಯಾಗಿತ್ತು. ಇದಕ್ಕಾಗಿಯೇ ಈತನಿಗೆ ಬಿಕಿನಿ ಕಿಲ್ಲರ್ ಎಂಬ ಕುಖ್ಯಾತಿಯೂ ಬಂದಿತ್ತು.

ಒಟ್ಟಾರೆ 20ಕ್ಕೂ ಹೆಚ್ಚು ಕೊಲೆಗಳ ಹಿಂದೆ ಶೋಭರಾಜ್ ಕೈವಾಡವಿದೆ ಎನ್ನಲಾಗ್ತಿದೆ.

1976 ರಲ್ಲಿ ದೆಹಲಿಯ ಹೋಟೆಲ್‌ನಲ್ಲಿ ಫ್ರೆಂಚ್ ಪ್ರವಾಸಿಗೆ ವಿಷ ಉಣಿಸಿ ಸಾಯಿಸಿದ ಪ್ರಕರಣದಲ್ಲಿ ಶೋಭರಾಜ್​ನನ್ನು ಭಾರತದಲ್ಲಿ ಬಂಧಿಸಲಾಯಿತು ಮತ್ತು ಕೊಲೆ ಅಪರಾಧಕ್ಕಾಗಿ 12 ವರ್ಷ ಶಿಕ್ಷೆ ವಿಧಿಸಲಾಗಿತ್ತು.

1986 ರಲ್ಲಿ ಸ್ವಲ್ಪ ಸಮಯ ಹೊರತುಪಡಿಸಿದರೆ ಶೋಭರಾಜ್ ತನ್ನ ಜೀವನದಲ್ಲಿ ಒಟ್ಟು 21 ವರ್ಷ ಜೈಲಿನಲ್ಲಿ ಕಳೆದಿದ್ದಾನೆ. 1986ರಲ್ಲಿ ತಪ್ಪಿಕೊಂಡಿದ್ದ ಆತ ಭಾರತದ ಕರಾವಳಿ ರಾಜ್ಯ ಗೋವಾದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. 1997 ರಲ್ಲಿ ಬಿಡುಗಡೆಯಾದ ಶೋಭರಾಜ್​ ಪ್ಯಾರಿಸ್‌ಗೆ ಹೋಗಿ ನಿವೃತ್ತ ಜೀವನ ನಡೆಸುತ್ತಿದ್ದ. ಆದರೆ 2003 ರಲ್ಲಿ ನೇಪಾಳದಲ್ಲಿ ಮತ್ತೆ ಕಾಣಿಸಿಕೊಂಡ ಈತ ಕಠ್ಮಂಡು ಜಿಲ್ಲೆಯಲ್ಲಿ ಬಂಧಿಸಲ್ಪಟ್ಟಿದ್ದ.

1975 ರಲ್ಲಿ ಅಮೆರಿಕ ಪ್ರವಾಸಿ ಕೋನಿ ಜೋ ಬ್ರೋಂಜಿಚ್‌ನನ್ನು ಕೊಂದಿದ್ದಕ್ಕಾಗಿ ಅಲ್ಲಿನ ನ್ಯಾಯಾಲಯವು ಅವನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

2008 ರಲ್ಲಿ ಜೈಲಿನಲ್ಲಿರುವಾಗಲೇ ಶೋಭರಾಜ್ ತನಗಿಂತ 44 ವರ್ಷ ಕಿರಿಯ ಮತ್ತು ನೇಪಾಳದಲ್ಲಿ ತನ್ನ ವಕೀಲನ ಮಗಳಾದ ನಿಹಿತಾ ಬಿಸ್ವಾಸ್ ಅವರನ್ನು ವಿವಾಹವಾಗಿದ್ದ.

ಇದನ್ನೂ ಓದಿ: 25 ವರ್ಷದ ಹಿಂದೆ ಕೊಲೆ ಮಾಡಿ ಪರಾರಿ: ಕಲಬುರಗಿಯಲ್ಲಿ ಸುಪಾರಿ ಕಿಲ್ಲರ್​ ಕೊನೆಗೂ ಅಂದರ್​

Last Updated : Dec 22, 2022, 6:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.