ವಾಷಿಂಗ್ಟನ್(ಅಮೆರಿಕ): ಜೋ ಬೈಡನ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ದೇಶವನ್ನು ಪರಿವರ್ತಿಸುವ ಸಲುವಾಗಿ ನಾನು ಗೆದ್ದಿದ್ದೇನೆ ಎಂದು ಜೋ ಬೈಡನ್ ಅಂದುಕೊಂಡರೆ ಅದು ತಪ್ಪಾಗುತ್ತದೆ. ಅಮೆರಿಕದ ಜನರು 'ಕಡಿಮೆ ನಾಟಕವಾಡುವವರನ್ನು' ಬಯಸಿದ್ದ ಕಾರಣದಿಂದ ಜೋ ಬೈಡನ್ ಗೆದ್ದಿದ್ದಾರೆ ಎಂದು ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದ್ದಾರೆ.
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ಗಿಂತ ಕಡಿಮೆ ಭಿನ್ನಾಭಿಪ್ರಾಯಗಳು ಇರುವ ವ್ಯಕ್ತಿಗೆ ನಾನು ಆದ್ಯತೆ ನೀಡುತ್ತೇನೆ ಎಂದಿರುವ ಎಲಾನ್ ಮಸ್ಕ್, 'ಚುನಾವಣೆಯಲ್ಲಿ ಕಡಿಮೆ ಭಿನ್ನಾಭಿಪ್ರಾಯ ಹೊಂದಿರುವ ಅಭ್ಯರ್ಥಿ ಉತ್ತಮ ಎಂದು ನಾನು ಭಾವಿಸುತ್ತೇನೆ. ಟ್ರಂಪ್ ಅವರನ್ನು ಮತ್ತೆ ಟ್ವಿಟರ್‌ಗೆ ತರಬೇಕೆಂದು ನಾನು ಬಯಸುತ್ತೇನೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.
-
Biden’s mistake is that he thinks he was elected to transform the country, but actually everyone just wanted less drama
— Elon Musk (@elonmusk) May 12, 2022 " class="align-text-top noRightClick twitterSection" data="
">Biden’s mistake is that he thinks he was elected to transform the country, but actually everyone just wanted less drama
— Elon Musk (@elonmusk) May 12, 2022Biden’s mistake is that he thinks he was elected to transform the country, but actually everyone just wanted less drama
— Elon Musk (@elonmusk) May 12, 2022
ದೇಶವನ್ನು ಪರಿವರ್ತಿಸಲು ಚುನಾಯಿತರಾಗಿದ್ದಾರೆಂದು ಬೈಡನ್ ಭಾವಿಸುತ್ತಾರೆ. ಅದು ತಪ್ಪು, ವಾಸ್ತವವಾಗಿ ಪ್ರತಿಯೊಬ್ಬರೂ ಕಡಿಮೆ ನಾಟಕವಾಡುವವರನ್ನು ಬಯಸಿದ್ದರು ಎಂದು ಮಸ್ಕ್ ಹೇಳಿದ್ದಾರೆ. ಇದಕ್ಕೂ ಮುನ್ನ ಕೆಲವು ವಾರಗಳ ಹಿಂದೆ ಟ್ವೀಟ್ ಮಾಡಿದ್ದ ಮಸ್ಕ್ ಟ್ರಂಪ್ ಅವರ ಖಾತೆಯನ್ನು ನಿಷೇಧಿಸುವ ಟ್ವಿಟರ್ ನಿರ್ಧಾರವು ತಪ್ಪಾಗಿದೆ. ಟ್ವಿಟರ್ ಅನ್ನು ಸ್ವಾಧೀನ ಪಡಿಸಿಕೊಂಡರೆ, ಟ್ರಂಪ್ ಅವರನ್ನು ಮತ್ತೆ ಟ್ವಿಟರ್‌ಗೆ ವಾಪಸ್ ತರುತ್ತೇನೆ ಎಂದು ಮಸ್ಕ್ ಹೇಳಿದ್ದರು.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ವಿರುದ್ಧ ಟ್ವಿಟರ್ ನಿಷೇಧ ಹಿಂತೆಗೆದುಕೊಳ್ಳುವೆ: ಎಲಾನ್ ಮಸ್ಕ್