ETV Bharat / international

ಭಾರತೀಯ ಅಮೆರಿಕನ್ನರು ಎಷ್ಟು ಕೊಡುಗೆ ನೀಡುತ್ತಾರೆ ಎಂಬುದನ್ನ ಬೈಡನ್ ಅರ್ಥಮಾಡಿಕೊಂಡಿದ್ದಾರೆ: ಅಫ್ತಾಬ್ ಪುರೆವಲ್

ಜೋ ಬೈಡನ್ ಅವರು ಇಂಡೋ- ಅಮೆರಿಕನ್​ ಸಮುದಾಯವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನಾವು ಎಷ್ಟು ವಿಶೇಷವಾಗಿದ್ದೇವೆ ಮತ್ತು ದೇಶಕ್ಕೆ ಹೇಗೆ ಸೇವೆ ಸಲ್ಲಿಸುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ ಅಂತಾ ಸಿನ್ಸಿನಾಟಿ ಸಿಟಿ ಮೇಯರ್ ಅಫ್ತಾಬ್ ಪುರೆವಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

biden
ಬೈಡನ್
author img

By

Published : Jan 21, 2023, 7:05 AM IST

ವಾಷಿಂಗ್ಟನ್( ಅಮೆರಿಕ): ಅತಿ ಹೆಚ್ಚು ಸಂಖ್ಯೆಯಲ್ಲಿ ಭಾರತ - ಅಮೆರಿಕನ್ನರನ್ನು ಹೊಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ದೇಶದ ಸಾರ್ವಜನಿಕ ಸೇವೆಯಲ್ಲಿ ಸಮುದಾಯವು ಎಷ್ಟು ಕೊಡುಗೆಗಳನ್ನು ನೀಡುತ್ತಿದೆ ಮತ್ತು ಎಷ್ಟು ವಿಶೇಷವಾಗಿದೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಸಿನ್ಸಿನಾಟಿ ಸಿಟಿ ಮೇಯರ್ ಅಫ್ತಾಬ್ ಪುರೆವಾಲ್ ಹೇಳಿದ್ದಾರೆ. ಶುಕ್ರವಾರ ಶ್ವೇತಭವನದಲ್ಲಿ ಅಮೆರಿಕದ ಮೇಯರ್‌ಗಳ ಚಳಿಗಾಲದ ಸಭೆಯಲ್ಲಿ ಮಾತನಾಡಿದ ಅವರು, "ಅಧ್ಯಕ್ಷ ಜೋ ಬೈಡನ್ ಅವರು ಇಂಡೋ- ಅಮೆರಿಕನ್​ ಸಮುದಾಯವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನಾವು ಎಷ್ಟು ವಿಶೇಷವಾಗಿದ್ದೇವೆ ಮತ್ತು ದೇಶಕ್ಕೆ ಹೇಗೆ ಸೇವೆ ಸಲ್ಲಿಸುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊಂಡ ಅವರು, "ಉಭಯಪಕ್ಷೀಯ ಮೂಲಸೌಕರ್ಯ ಮಸೂದೆ ಮತ್ತು ಅಆರ್​ಪಿ (ಅಮೇರಿಕನ್ ಪಾರುಗಾಣಿಕಾ ಯೋಜನೆ) ನಗರಗಳನ್ನು ಹೇಗೆ ರಕ್ಷಿಸಿದೆ ಮತ್ತು ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹೇಗೆ ಕ್ರಮ ಕೈಗೊಳ್ಳಲಾಗಿತ್ತು ಎಂಬುದರ ಕುರಿತು ಅಧ್ಯಕ್ಷ ಬೈಡನ್‌ಗೆ ಖುದ್ದು ಮಾಹಿತಿ ನೀಡಲು ನಾನು ಸೇರಿದಂತೆ ಅನೇಕ ಮೇಯರ್‌ಗಳು ಇಲ್ಲಿಗೆ ಆಗಮಿಸಿದ್ದೇವೆ. ಅಧ್ಯಕ್ಷರೊಂದಿಗೆ ಬಿಕ್ಕಟ್ಟು ನಿವಾರಣೆಯ ಪ್ರಯತ್ನಗಳು ಹಾಗೂ ಪರಿಹಾರದ ಕ್ರಮಗಳನ್ನು ಹಂಚಿಕೊಳ್ಳಲು ಭಾರಿ ಉತ್ಸುಕನಾಗಿದ್ದೇನೆ' ಎಂದರು.

ಪುರೆವಲ್ ಅವರು ಸಿನ್ಸಿನಾಟಿಯ ಮೇಯರ್ ಆಗಿ ಆಯ್ಕೆಯಾದ ಮೊದಲ ಭಾರತೀಯ - ಅಮೆರಿಕನ್. ಜನವರಿ 4 ರಂದು ನಗರದ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕಳೆದ ವಾರ ಸಿನ್ಸಿನಾಟಿಯಲ್ಲಿ ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರನ್ನು ಮೇಯರ್ ಭೇಟಿ ಮಾಡಿದ್ದರು. ಇಬ್ಬರೂ ಪಂಜಾಬ್‌ ಮೂಲದವರು.

ಇದನ್ನೂ ಓದಿ: ಭಾರತ - ಅಮೆರಿಕ ಸಂಬಂಧ ಬಲಪಡಿಸುವುದೇ ನಮ್ಮ ಗುರಿ: ಡೇನಿಯಲ್​ ಸ್ಮಿತ್​

'ನಮ್ಮ ಸಮುದಾಯ, ಭಾರತೀಯ ಮತ್ತು ಟಿಬೆಟಿಯನ್ ಸಮುದಾಯಗಳ ಬಗ್ಗೆ ನಾನು ತುಂಬಾ ಹೆಮ್ಮೆಪಡುತ್ತೇನೆ. ಇತ್ತೀಚೆಗೆ ಧರ್ಮಶಾಲಾದಲ್ಲಿರುವ ದಲೈ ಲಾಮಾ ಅವರನ್ನು ಭೇಟಿ ಮಾಡಿದ್ದೆ. ತರಂಜಿತ್ ಸಿಂಗ್ ಸಂಧು ಅವರನ್ನು ಭೇಟಿ ಮಾಡಿದಾಗ ನಮ್ಮ ಕುಟುಂಬದ ಇತಿಹಾಸದ ಬಗ್ಗೆ ಮಾತನಾಡಿದ್ದೆವು. ನಮ್ಮ ನಗರದಲ್ಲಿ ಮಾತ್ರವಲ್ಲದೇ ಮೂರು ರಾಜ್ಯಗಳ ಹಲವು ಪ್ರದೇಶಗಳಲ್ಲಿ ಸಾಕಷ್ಟು ಭಾರತೀಯ ವಲಸಿಗರನ್ನು ಹೊಂದಿದ್ದೇವೆ. ಸಿನ್ಸಿನಾಟಿಯ ಮೊದಲ ಏಷ್ಯನ್-ಅಮೇರಿಕನ್ ಮೇಯರ್ ಆಗಿರುವುದು ದೊಡ್ಡ ಜವಾಬ್ದಾರಿ. ಸಿನ್ಸಿನಾಟಿಯ ನಿವಾಸಿಗಳಿಗಾಗಿ ಹೋರಾಡುವುದು ನನ್ನ ಮೊದಲ ಆದ್ಯತೆ. ಹಾಗೆಯೇ, ನಾನೇ ಸಿನ್ಸಿನಾಟಿಯ ಕೊನೆಯ ದಕ್ಷಿಣ ಏಷ್ಯಾದ ಅಥವಾ ಕೊನೆಯ ಟಿಬೆಟಿಯನ್ ಮೇಯರ್ ಆಗದಂತೆ ನೋಡಿಕೊಳ್ಳುವುದು ಸಹ ಮುಖ್ಯವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಬೈಡನ್ ನೀವು ನಮಗೆ ದ್ರೋಹ ಮಾಡಿದ್ದೀರಿ: ಶ್ವೇತ ಭವನದ ಮುಂದೆ ಅಫ್ಘಾನ್ ಪ್ರಜೆಗಳ ಪ್ರತಿಭಟನೆ

ಬೈಡನ್ ಆಡಳಿತದ ಮೊದಲ ಎರಡು ವರ್ಷಗಳು ಭಾರಿ ದೊಡ್ಡ ಪ್ರಮಾಣದಲ್ಲಿ ಯಶಸ್ಸನ್ನು ಪಡೆದಿದೆ. ಸಾಮರ್ಥ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಎಲ್ಲರಿಗೂ ಅಧ್ಯಕ್ಷ ಬೈಡನ್ ಸೂಕ್ತ ಉತ್ತರ ಕೊಟ್ಟಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ದೇಶವನ್ನು ಪುನರ್​ ನಿರ್ಮಿಸಲು ಮೂಲಸೌಕರ್ಯ ಮಸೂದೆಯನ್ನು ಮತ್ತು ಕುಟುಂಬಗಳು, ಮಧ್ಯಮ ವರ್ಗದ ಕುಟುಂಬಗಳು, ಕಡಿಮೆ ಆದಾಯದ ಕುಟುಂಬಗಳನ್ನು ಬೆಂಬಲಿಸಲು ARP ಅನ್ನು ಪಟ್ಟಿ ಮಾಡಿದೆ.

ಹಾಗೆಯೇ COVID-19 ಲಾಕ್‌ಡೌನ್ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. CHIPS ಕಾಯ್ದೆಯು ದೇಶದಲ್ಲಿ ಅರೆವಾಹಕಗಳನ್ನು ತಯಾರಿಸುವ ವಿಧಾನವನ್ನು ಪರಿವರ್ತಿಸುತ್ತಿದೆ. ಓಹಿಯೋದಲ್ಲಿ ವಿಶ್ವದ ಅತಿದೊಡ್ಡ ಅರೆವಾಹಕ ಸ್ಥಾವರಗಳಲ್ಲಿ ಒಂದನ್ನು ನಿರ್ಮಿಸಲು ಇದು ದಾರಿ ಮಾಡಿಕೊಟ್ಟಿತು. ಇದು ನಮ್ಮ ಸ್ಥಳೀಯ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.