ETV Bharat / international

ಪುಟಿನ್ ವಿರುದ್ಧ ನೈತಿಕ ಆಕ್ರೋಶ ಹೊರಹಾಕಿದ್ದೇನೆ ಅಷ್ಟೇ: ಬೈಡನ್

ಪುಟಿನ್ ಅಧಿಕಾರದಲ್ಲಿ ಉಳಿಯಬಾರದು ಎಂಬ ಹೇಳಿಕೆಯಿಂದ ನಾನು ಹಿಂದೆ ಸರಿಯುವುದಿಲ್ಲ. . ನಾನು ನನ್ನ ನೈತಿಕ ಆಕ್ರೋಶವನ್ನು ಹೊರಹಾಕಿದ್ದೇನೆ ಅಷ್ಟೇ ಎಂದು ಜೋ ಬೈಡನ್ ಹೇಳಿದ್ದಾರೆ.

biden-says-remark-on-putins-power-was-about-moral-outrage-no-change-in-us-policy
ಪುಟಿನ್ ವಿರುದ್ಧ ನೈತಿಕ ಆಕ್ರೋಶವನ್ನು ಹೊರಹಾಕಿದ್ದೇನೆ ಅಷ್ಟೇ: ಬೈಡನ್
author img

By

Published : Mar 29, 2022, 6:57 AM IST

ವಾಷಿಂಗ್ಟನ್(ಅಮೆರಿಕ): ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧಿಕಾರದಲ್ಲಿ ಉಳಿಯಬಾರದು ಎಂದು ಹೇಳಿಕೆ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈಗ ಆ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ನಾನು ಈ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ. ನಾನು ನನ್ನ ನೈತಿಕ ಆಕ್ರೋಶವನ್ನು ಹೊರಹಾಕಿದ್ದೇನೆ ಅಷ್ಟೇ. ಉಕ್ರೇನ್ ವಿರುದ್ಧ ರಷ್ಯಾ ಆಕ್ರಮಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದೇನೆ ಎಂದು ಜೋ ಬೈಡನ್ ಹೇಳಿದ್ದಾರೆ.

ಶ್ವೇತಭವನದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಕ್ರೂರತೆಯಾಗಿದೆ. ಉಕ್ರೇನ್‌ನ ಸಂತ್ರಸ್ತ ಮಕ್ಕಳೊಂದಿಗೆ ಮತ್ತು ಕುಟುಂಬಗಳೊಂದಿಗೆ ನಾನಿದ್ದೇನೆ. ಈ ಹೇಳಿಕೆಗೆ ಸಂಬಂಧಿಸಿದಂತೆ ನಾನು ಕ್ಷಮೆಯಾಚಿಸುವುದಿಲ್ಲ. ಅಮೆರಿಕದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪುಟಿನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಾವು ಯಾವುದೇ ರೀತಿಯಲ್ಲಿ ಪ್ರಯತ್ನಿಸುತ್ತೇವೆ ಎಂಬುದು ನನ್ನ ಹೇಳಿಕೆಯ ಅರ್ಥವಲ್ಲ ಎಂದು ಬೈಡನ್ ಹೇಳಿದ್ದಾರೆ.

ಕಳೆದ ವಾರವಷ್ಟೇ ಪೋಲೆಂಡ್‌ನ ವಾರ್ಸಾ ನಗರದಲ್ಲಿ ಉಕ್ರೇನ್‌ನ ಸಚಿವರೊಂದಿಗೆ ಉಕ್ರೇನ್ ಪರ ಒಗ್ಗಟ್ಟನ್ನು ಪ್ರದರ್ಶಿಸುವ ಸಲುವಾಗಿ ಮಾಡಿದ ಭಾಷಣವೊಂದರಲ್ಲಿ ಜೋ ಬೈಡನ್ ಪುಟಿನ್ ವಿರುದ್ಧ ಕಿಡಿ ಕಾರಿದ್ದರು. ಪುಟಿನ್ ವಿಶ್ವದಾದ್ಯಂತ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಬೆಂಬಲದ ವಿಚಾರದಲ್ಲಿ ತಮ್ಮ ದೇಶದಲ್ಲಿಯೂ ಏನಾಗುತ್ತಿದೆ ಎಂಬುದು ಪುಟಿನ್​ಗೆ ಗೊತ್ತು. ದೇವರ ಇಚ್ಛೆಯಂತೆ, ಪುಟಿನ್ ಅಧಿಕಾರದಲ್ಲಿ ಉಳಿಯುವುದು ಸಾಧ್ಯವಿಲ್ಲ ಎಂದು ಜೋ ಬೈಡನ್ ಹೇಳಿದ್ದರು.

ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಶ್ವೇತಭವನದ ವಕ್ತಾರರು ಬೈಡನ್ ಹೇಳಿಕೆಗೆ ತಕ್ಕಂತೆ ಸಮರ್ಥನೆ ನೀಡಲು ಮುಂದಾಗಿತ್ತು. ಪುಟಿನ್ ಆಡಳಿತವು ಬದಲಾಗಲಿ ಎಂದು ಅಮೆರಿಕ ಬಯಸುತ್ತಿಲ್ಲ. ಪುಟಿನ್ ಅವರ ಆಕ್ರಮಣಕಾರಿ ನೀತಿ ಮತ್ತು ಪುಟಿನ್ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಮೆರಿಕದ ನೀತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಶ್ವೇತಭವನವು ಹೇಳಿಕೊಂಡಿತ್ತು.

ರಷ್ಯಾದ ಅಧ್ಯಕ್ಷರ ಮೇಲೆ ವೈಯಕ್ತಿಕ ಟೀಕೆಯಿಂದ ಬಿಕ್ಕಟ್ಟು ನಿವಾರಣೆ ಆಗುವುದಿಲ್ಲ. ದ್ವಿಪಕ್ಷೀಯ ಸಂಬಂಧಗಳನ್ನು ತಹಬದಿಗೆ ತರಲು ಇರುವ ಅವಕಾಶಗಳೂ ಮತ್ತಷ್ಟು ಕ್ಷೀಣಿಸಲಿವೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಪಾಕ್ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿಲುವಳಿ ಮಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.