ETV Bharat / international

ಹಮಾಸ್ ಕಪಿಮುಷ್ಠಿಯಿಂದ ತಾಯಿ ಮಗಳು ಬಿಡುಗಡೆ... ಅಮೆರಿಕ ಅಧ್ಯಕ್ಷರಿಂದ ಸ್ವಾಗತ

ಅಮೆರಿಕದ ತಾಯಿ ಮತ್ತು ಮಗಳನ್ನು ಹಮಾಸ್​ ಬಿಡುಗಡೆ ಮಾಡಿರುವುದನ್ನು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಸ್ವಾಗತಿಸಿದ್ದಾರೆ. ಹಮಾಸ್ ಇನ್ನೂ 200 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿದೆ.

Release of two American hostages by Hamas  Hamas releases two US hostages  Biden welcomes release of two US hostages  Israel Hamas war  Middle East conflict  ಅಮೆರಿಕದ ತಾಯಿ ಮಗಳು ಬಿಡುಗಡೆ  ಸ್ವಾಗತಿಸಿದ ಅಮೆರಿಕ ಅಧ್ಯಕ್ಷ  ಅಮೆರಿಕಾದ ಅಧ್ಯಕ್ಷ ಜೋ ಬೈಡನ್  ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್  ಅಮೆರಿಕದ ತಾಯಿ ಮತ್ತು ಮಗಳ ಹಮಾಸ್​ ಬಿಡುಗಡೆ  ಹಮಾಸ್ ಇನ್ನೂ 200 ಕ್ಕೂ ಹೆಚ್ಚು ಜನರನ್ನು ಒತ್ತೆ  ಇಸ್ರೇಲ್ ದಾಳಿಯ ನಂತರ ಹಮಾಸ್ ಇಬ್ಬರನ್ನೂ ಒತ್ತೆ  ಹಮಾಸ್ ಕಪಿಮುಷ್ಠಿಯಿಂದ ತಾಯಿ ಮಗಳು ಬಿಡುಗಡೆ
ಹಮಾಸ್ ಕಪಿಮುಷ್ಠಿಯಿಂದ ತಾಯಿ ಮಗಳು ಬಿಡುಗಡೆ
author img

By ETV Bharat Karnataka Team

Published : Oct 21, 2023, 7:20 AM IST

ಇಲಿನಾಯ್ಸ್: ಇಸ್ರೇಲ್‌ನೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆ ಅಮೆರಿಕ ಮೂಲದ ಓರ್ವ ಮಹಿಳೆ ಮತ್ತು ಅವರ ಪುತ್ರಿಯನ್ನು ಹಮಾಸ್ ಬಿಡುಗಡೆ ಮಾಡಿದೆ. ಎರಡು ವಾರಗಳ ಹಿಂದೆ ಅಂದ್ರೆ ಅಕ್ಟೋಬರ್ 7 ರಂದು ಇಸ್ರೇಲ್ ದಾಳಿಯ ನಂತರ ಅಮೆರಿಕಾದ ತಾಯಿ, ಮಗಳನ್ನು ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿತ್ತು. ಹಮಾಸ್‌ನಿಂದ ಬಿಡುಗಡೆಗೊಂಡ ಅಮೆರಿಕದ ತಾಯಿ ಮತ್ತು ಮಗಳು ಕೂಡ ಇಸ್ರೇಲ್ ಪೌರತ್ವವನ್ನು ಹೊಂದಿದ್ದಾರೆ. ಈ ಇಬ್ಬರೂ ಪ್ರಸ್ತುತ ಇಸ್ರೇಲ್‌ನಲ್ಲಿ ಇಸ್ರೇಲಿ ಅಧಿಕಾರಿಗಳೊಂದಿಗೆ ಸುರಕ್ಷಿತವಾಗಿದ್ದಾರೆ. ಕತಾರ್ ಸರ್ಕಾರದೊಂದಿಗಿನ ಒಪ್ಪಂದದ ಅಡಿಯಲ್ಲಿ ಅವರನ್ನು ಬಿಡುಗಡೆ ಮಾಡುತ್ತಿರುವುದಾಗಿ ಹಮಾಸ್ ಹೇಳಿದೆ.

ಹಮಾಸ್ ಕಪಿಮುಷ್ಠಿಯಿಂದ ತಾಯಿ-ಮಗಳು ಬಿಡುಗಡೆಯಾದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಂತಸ ವ್ಯಕ್ತಪಡಿಸಿ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ರೇಲ್ ವಿರುದ್ಧ ಭೀಕರ ದಾಳಿಯ ಸಂದರ್ಭದಲ್ಲಿ ಹಮಾಸ್ ಒತ್ತೆಯಾಳಾಗಿದ್ದ ಇಬ್ಬರು ಅಮೆರಿಕನ್ನರು ಬಿಡುಗಡೆಯಾಗಿದ್ದಾರೆ. ನಮ್ಮ ನಾಗರಿಕರು ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಕಳೆದ 14 ದಿನಗಳಲ್ಲಿ ಭಯಾನಕ ಅಗ್ನಿಪರೀಕ್ಷೆ ನಂತರ ಅವರು ಶೀಘ್ರದಲ್ಲೇ ತಮ್ಮ ಕುಟುಂಬಸ್ಥರನ್ನು ಸೇರಲಿದ್ದಾರೆ ಎಂಬುದು ನನಗೆ ತುಂಬಾ ಸಂತೋಷವಾಗಿದೆ ಎಂದು ಎಕ್ಸ್​ನಲ್ಲಿ ಬೈಡನ್​ ಬರೆದುಕೊಂಡಿದ್ದಾರೆ.

ತನ್ನ ಪ್ರಜೆಗಳನ್ನು ಬಿಡುಗಡೆ ಮಾಡಿರುವುದನ್ನು ಅಮೆರಿಕ ಸ್ವಾಗತಿಸಿದೆ. ಅವರ ಬಿಡುಗಡೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ. ಆದರೆ ಈ ಯುದ್ಧದಲ್ಲಿ 10 ಅಮೆರಿಕನ್ ನಾಗರಿಕರು ಇನ್ನೂ ಕಾಣೆಯಾಗಿದ್ದಾರೆ. ಅವರಲ್ಲಿ ಕೆಲವರನ್ನು ಹಮಾಸ್ ಒತ್ತೆಯಾಳಾಗಿ ಇರಿಸಿರಬಹುದು ಎಂದು ನಮಗೆ ತಿಳಿದಿದೆ. ಹಮಾಸ್ ಇನ್ನೂ 200 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿದೆ. ಇವರಲ್ಲಿ ಅನೇಕ ದೇಶಗಳ ಪುರುಷರು, ಮಹಿಳೆಯರು, ಯುವಕರು, ಬಾಲಕಿಯರು, ವೃದ್ಧರು ಸೇರಿದ್ದಾರೆ ಎಂದು ಬ್ಲಿಂಕನ್ ಹೇಳಿದರು.

ಉಳಿದ ಒತ್ತೆಯಾಳುಗಳು ತಮ್ಮ ಮನೆಗಳಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಇಡೀ ಯುಎಸ್ ಸರ್ಕಾರವು ಪ್ರತಿದಿನ.. ಪ್ರತಿ ನಿಮಿಷವೂ.. ಕೆಲಸ ಮಾಡುತ್ತದೆ. ಒತ್ತೆಯಾಳುಗಳ ಬಿಡುಗಡೆಯನ್ನು ಖಾತ್ರಿಪಡಿಸಿದ್ದಕ್ಕಾಗಿ ಕತಾರ್ ಸರ್ಕಾರಕ್ಕೆ ನಮ್ಮ ಧನ್ಯವಾದಗಳು ಎಂದು ಬ್ಲಿಂಕನ್ ಹೇಳಿದರು.

ಪ್ರವಾಸದಲ್ಲಿದ್ದ ತಾಯಿ-ಮಗಳು: ಜುಡಿತ್ ಮತ್ತು ನಟಾಲಿ ರಾನಾನ್ ಅವರು ಯಹೂದಿಗಳ ರಜಾ ದಿನಗಳನ್ನು ಆಚರಿಸಲು ಇವಾನ್‌ಸ್ಟನ್‌ನ ಚಿಕಾಗೋ ಉಪನಗರದಲ್ಲಿರುವ ತಮ್ಮ ಮನೆಯಿಂದ ಇಸ್ರೇಲ್‌ಗೆ ಪ್ರವಾಸದಲ್ಲಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅವರು ಅಕ್ಟೋಬರ್ 7 ರಂದು ಯಹೂದಿಗಳ ಹಬ್ಬದ ರಜಾದಿನವಾದ ಸಿಮ್ಚಾಟ್ ಟೋರಾಗಾಗಿ ಗಾಜಾದ ಸಮೀಪವಿರುವ ನಹಾಲ್ ಓಜ್‌ನಲ್ಲಿದ್ದರು. ದಕ್ಷಿಣ ಇಸ್ರೇಲಿ ಪಟ್ಟಣಗಳಿಗೆ ಹಮಾಸ್ ನುಗ್ಗಿ ನೂರಾರು ಜನರನ್ನು ಕೊಂದು ಇತರರನ್ನು ಅಪಹರಿಸಿದರು. ದಾಳಿಯ ನಂತರ ಅವರ ಕುಟುಂಬವನ್ನು ಗಾಜಾದಲ್ಲಿ ಬಂಧಿಸಲಾಗಿತ್ತು ಎಂದು ಯುಎಸ್ ಮತ್ತು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದರು ಅಂತಾ ನಟಾಲಿಯ ಸಹೋದರ ಬೆನ್ ಈ ಹಿಂದೆ ಹೇಳಿದ್ದರು.

ಜುಡಿತ್ ಮತ್ತು ನಟಾಲಿಯನ್ನು ಹಮಾಸ್ ಕೈಯಿಂದ ಬಿಡುಗಡೆ ಮಾಡಲಾಗಿದೆ ಎಂಬ ಸುದ್ದಿ ಸಂತಸ ತಂದಿದೆ. ಈ ಅದ್ಭುತ ಪವಾಡಕ್ಕೆ ದೇವರಿಗೆ ಮತ್ತು ಸಹಾಯ ಮಾಡಿದ ಎಲ್ಲರಿಗೂ ಅಪಾರವಾದ ಕೃತಜ್ಞತೆಗಳು ಎಂದು ರಾನಾನ್​ ಕುಟುಂಬಸ್ಥರು ಹೇಳಿದರು.

ಕಳೆದ 14 ದಿನಗಳಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಇಲ್ಲಿಯವರೆಗೆ ಎರಡೂ ಕಡೆಯಿಂದ 5500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ 1400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ರೆ, ಗಾಜಾದಲ್ಲಿ 3000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಯುದ್ಧದಲ್ಲಿ 12,000 ಕ್ಕೂ ಹೆಚ್ಚು ಪ್ಯಾಲೆಸ್ತೇನಿಯರು ಮತ್ತು ಇಸ್ರೇಲ್​ನಲ್ಲಿ 4800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಓದಿ: ಇಸ್ರೇಲ್, ಉಕ್ರೇನ್‌ಗೆ ನೀಡಿರುವ ಬೆಂಬಲವು ಅಮೆರಿಕ ಭದ್ರತೆಗೆ ಪ್ರಮುಖವಾಗಿದೆ: ಜೋ ಬೈಡನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.