ETV Bharat / international

ಟೈಮ್ಸ್​ ಕವರ್​ ಪುಟದಲ್ಲಿ ಕಾಣಿಸಿಕೊಂಡ ಬಾಂಗ್ಲಾದೇಶ ಪ್ರಧಾನಿ ಶೇಖ್​ ಹಸೀನಾ - ಬಾಂಗ್ಲಾದೇಶ ಪ್ರಧಾನ ಮಂತ್ರಿ ಶೇಖ್​ ಹಸೀನಾ

Bangladesh PM Sheikh Hasina appears on Time Cover: ಚುನಾವಣೆ ಹೊಸ್ತಿಲಲ್ಲಿರುವ ಬಾಂಗ್ಲಾದೇಶದ ರಾಜಕೀಯ ಕುರಿತು ಪ್ರಧಾನಿ ಮಾತನಾಡಿದ್ದು, ತಮ್ಮನ್ನು ಉರುಳಿಸುವುದು ಕಠಿಣ ಎಂದು ತಿಳಿಸಿದ್ದಾರೆ.

http://10.10.50.80:6060//finalout3/odisha-nle/thumbnail/04-November-2023/19937702_117_19937702_1699068168411.png

author img

By ETV Bharat Karnataka Team

Published : Nov 4, 2023, 11:51 AM IST

ವಾಷಿಂಗ್ಟನ್​: ನಮ್ಮ ಸರ್ಕಾರವನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಮೂಲಕ ಉರುಳಿಸುವುದು ಅತ್ಯಂತ ಕಷ್ಟದಾಯಕ ಎಂದು ಬಾಂಗ್ಲಾದೇಶ ಪ್ರಧಾನ ಮಂತ್ರಿ ಶೇಖ್​ ಹಸೀನಾ ತಿಳಿಸಿದ್ದಾರೆ. ಟೈಮ್ಸ್​ ಮ್ಯಾಗಜೀನ್​ ಮುಖಪುಟದಲ್ಲಿ ಕಾಣಿಸಿಕೊಂಡು ಅವರು ಮಾತನಾಡಿದ್ದಾರೆ. 2024 ಜನವರಿಯಲ್ಲಿ ಬಾಂಗ್ಲಾದೇಶದಲ್ಲಿ ಚುನಾವಣೆ ನಿಗದಿಯಾಗಿರುವ ಹಿನ್ನೆಲೆ ಅವರು ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ.

ನಾನು ನನ್ನ ಜನರ ಬಗ್ಗೆ ಹೆಚ್ಚಿನ ನಂಬಿಕೆಯನ್ನು ಹೊಂದಿದ್ದೇನೆ. ಅವರೇ ನನ್ನ ಬಲ. ಪ್ರಜಾಪ್ರಭುತ್ವದ ಮೂಲಕ ನನ್ನನ್ನು ಉರುಳಿಸುವುದು ಸಾಧ್ಯವಿಲ್ಲ. ಇರುವ ಒಂದು ಅವಕಾಶ ಎಂದರೆ, ಅವರು ನನ್ನನ್ನು ತೆಗೆದು ಹಾಕಬಹುದು. ನನ್ನ ಜನರಿಗಾಗಿ ನಾನು ಸಾಯಲು ಸಿದ್ಧವಾಗಿದ್ದೇನೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ನ್ಯೂಯಾರ್ಕ್​ ಮೂಲದ ಟೈಮ್ಸ್​ ಮ್ಯಾಗಜೀನ್​ ನವೆಂಬರ್​ 20ರ ಸಂಚಿಕೆಯಲ್ಲಿ ಮುಖಪುಟದಲ್ಲಿ ಹಸೀನಾ ಅವರ ಸಂದರ್ಶನವನ್ನು ಪ್ರಕಟಿಸಲಾಗಿದೆ. 76 ವರ್ಷದ ರಾಜಕೀಯ ನಾಯಕಿಯಾಗಿರುವ ಹಸೀನಾ ಅವರು ಕಳೆದೊಂದು ದಶಕದಿಂದ ಏಷ್ಯಾ ಫೆಸಿಫಿಕ್​ನಲ್ಲಿ ಅತ್ಯಂತ ವೇಗವಾಗಿ ವಿಸ್ತರಿಸುವ ಸೆಣಬಿನ ಉತ್ಪಾದನೆಯಲ್ಲಿ ತಮ್ಮ ದೇಶಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.

2009ರಿಂದ ಮತ್ತು ಅದಕ್ಕಿಂತ ಮೊದಲು 1996ರಿಂದ 2001ರ ವರಗೆ ದೀರ್ಘಕಾಲದ ಸರ್ಕಾರ ಮುನ್ನಡೆಸಿದ ಮಹಿಳಾ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಆಡಳಿತದಲ್ಲಿ ಮಧ್ಯ ಪ್ರವೇಶಿಸುವ ಇಸ್ಲಾಮಿಸ್ಟ್​​ ಮತ್ತ ಸೇನೆಯನ್ನು ನಿಗ್ರಹಿಸಿದ ಕೀರ್ತಿಯನ್ನು ಹೊಂದಿದ್ದಾರೆ. ಟಾರ್ಗೆಟ್​ ಥ್ಯಾಚರ್​ ಅಥವಾ ಇಂದಿರಾ ಗಾಂಧಿ ಈಗಾಗಲೇ ಹಲವು ಚುನಾವಣೆಗಳಲ್ಲಿ ಗೆಲುವು ಕಂಡಿದ್ದಾರೆ. ಇದೀಗ ಹಸೀನಾ ಅವರು ಕೂಡ ಅದೇ ನಿಟ್ಟಿನಲ್ಲಿ ಸಾಗಿದ್ದು, ಮತ್ತೊಮ್ಮೆ ಜನವರಿಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸಂದರ್ಶನ ನಡೆಸಿರುವ ಟೈಮ್ಸ್​​ನ ಚಾರ್ಲಿ ಕ್ಯಾಮ್ಪೆಲ್​​ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಹಸೀನಾ ಅವರ ಮೇಲೆ 19 ಹತ್ಯೆ ದಾಳಿಗಳು ನಡೆದಿವೆ. ಇತ್ತೀಚಿನ ತಿಂಗಳಲ್ಲಿ, ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್​ ಪಾರ್ಟಿ (ಬಿಎನ್​ಪಿ) ಬೆಂಬಲಿಗರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು. ನೂರಾರು ಜನರ ಬಂಧನವನ್ನು ಮಾಡಲಾಯಿತು. ಪೊಲೀಸ್ ವಾಹನಗಳು ಮತ್ತು ಸಾರ್ವಜನಿಕ ಬಸ್ಸುಗಳಿಗೆ ಬೆಂಕಿ ಹಚ್ಚಲಾಯಿತು. ಅನೇಕ ಮಂದಿಯನ್ನು ಕೊಲ್ಲಲಾಯಿತು. ಹಸೀನಾ ಅವರು ಚುನಾವಣೆಯನ್ನು ಕಾಯ್ದುಕೊಳ್ಳಲು ಉಸ್ತುವಾರಿ ಸರ್ಕಾರಕ್ಕೆ ಅಧಿಕಾರವನ್ನು ಹಸ್ತಾಂತರಿಸದ ಹೊರತು 2014 ಮತ್ತು 2018 ಎರಡರಲ್ಲೂ ಮಾಡಿದಂತೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬಿಎನ್​ಪಿ ಪ್ರತಿಜ್ಞೆ ಮಾಡಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.

ಹವಾಮಾನ ಸ್ಥಿತಿಸ್ಥಾಪಕತ್ವಕ್ಕಾಗಿ 2025 ರ ವರೆಗೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಾರ್ಷಿಕವಾಗಿ 100 ಶತಕೋಟಿ ಡಾಲರ್​​ ನೀಡಬೇಕೆಂದು ಶೇಖ್​ ಅವರು ಒತ್ತಾಯಿಸುವ ಬಗ್ಗೆ ಕೇಳಿದಾಗ, ಇದುವರೆಗೆ ಈಡೇರದ ಪ್ರತಿಜ್ಞೆ, ಶೇಖ್ ಹಸೀನಾ ತಿಳಿಸಿದರು. ಅಭಿವೃದ್ಧಿ ಹೊಂದಿದ ದೇಶಗಳು ಮುಂದೆ ಬರಬೇಕಾದ ಭರವಸೆಗಳನ್ನು ಮಾತ್ರ ಸ್ವೀಕರಿಸಲು ನಾವು ಬಯಸುವುದಿಲ್ಲ. ಬಾಂಗ್ಲಾದೇಶವು ಬೂದು ವಲಯದ ಅಸ್ತಿತ್ವ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವವು ದೇಶದಿಂದ ದೇಶಕ್ಕೆ ಬದಲಾಗುವ ವಿಭಿನ್ನ ವ್ಯಾಖ್ಯಾನವನ್ನು ಹೊಂದಿದೆ.

ಮುಕ್ತ ಚುನಾವಣೆಗಾಗಿ ನಮ್ಮ ಸರ್ಕಾರವೂ ಪಾರದರ್ಶಕ ಬ್ಯಾಲೆಟ್​ ಬಾಕ್ಸ್​​ ಮತ್ತು ದಾಖಲಾತಿ ಪೇಪರ್​​ಗಳನ್ನು ಐಡಿ ಕಾರ್ಡ್​ ಮತ್ತು ಬಯೋಮೆಟ್ರಿಕ್​ ದತ್ತಾಂಶವನ್ನು ಸಂಪರ್ಕಿಸುವ ಭರವಸೆ ನೀಡಿದೆ. ಮತದಾನದ ಹಕ್ಕು, ಆಹಾರದ ಹಕ್ಕು ನಮ್ಮ ಹೋರಾಟವಾಗಿದೆ. ಇದೇ ನಮ್ಮ ಘೋಷಣೆ ಆಗಿದೆ ಎಂದರು

ಶೇಖ್​ ಹಸೀನಾ ಅಂಡ್​ ದಿ ಫೀಚರ್​ ಆಫ್​​ ಡೆಮಾಕ್ರಸಿ ಇನ್​ ಬಾಂಗ್ಲಾದೇಶ ಎಂಬ ಸ್ಟೋರಿ ಟೈಟಲ್​ನಲ್ಲಿ ಸುದ್ದಿ ಪ್ರಕಟವಾಗಿದೆ. ಕಳೆದೆರಡು ದಶಕದಿಂದ ಹಸೀನಾ ಅವರ ಅವಾಮಿ ಲೀಗಲ್​ ಪಾರ್ಟಿ ಅಡಿ ರಾಷ್ಟ್ರದಲ್ಲಿ ಸರ್ವಾಧಿಕಾರಿಯಾಗಿ ರೂಪುಗೊಂಡಿದೆ. ಕಳೆದೆರಡು ಚುನಾವಣೆಗಳನ್ನು ಗಮನಾರ್ಹ ಅಕ್ರಮ ಕಂಡು ಬಂದಿದೆ ಎಮದು ಅಮೆರಿಕ ಮತ್ತು ಯುರೋಪಿಯನ್​ ಯುನಿಯನ್​ ಕೂಡ ಟೀಕಿಸಿತು.

ಇದನ್ನೂ ಓದಿ: ಇಸ್ರೇಲ್​ - ​ಹಮಾಸ್​ ಸಂಘರ್ಷ : ಗಾಜಾದಲ್ಲಿ ನೀರು, ಆಹಾರಕ್ಕಾಗಿ ಹಾಹಾಕಾರ, ವಿಶ್ವಸಂಸ್ಥೆ ಕಳವಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.