ಇಸ್ಲಾಮಾಬಾದ್: ಪಾಕ್ ಪ್ರಮುಖ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ನಾಯಕ ಶಾ ಮಹಮೂದ್ ಖುರೇಷಿ 2019ರಲ್ಲಿ ಭಾರತ ನಡೆಸಿದ್ದ ಬಾಲಾಕೋಟ್ ದಾಳಿಯನ್ನು ಅಲ್ಲಿನ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಪುಲ್ವಾಮಾ ಆತ್ಮಾಹುತಿ ದಾಳಿಯ ನಂತರ ಭಾರತ ಬಾಲಾಕೋಟ್ ದಾಳಿ ಮಾಡಿತು. ಈ ವೇಳೆ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರು ಭಾರತಕ್ಕೆ ತಕ್ಕ ಉತ್ತರ ನೀಡಿದರು ಎಂದರು.
ದಾಳಿಯ ಪಾಕ್ ಸೇನೆಗೆ ಸಿಕ್ಕಿಬಿದ್ದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ರನ್ನು ಬಂಧಿಸಿತ್ತು. ಈ ವೇಳೆ ಅವರನ್ನು ಭಾರತಕ್ಕೆ ಮರಳಿ ಕಳುಹಿಸಿ ರಾಜತಾಂತ್ರಿಕತೆಯನ್ನು ಮೆರೆದರು. ಇದು ಇಡೀ ದೇಶವೇ ಮೆಚ್ಚಬೇಕಾದ ಸಂಗತಿ ಎಂದು ಇಮ್ರಾನ್ ಖಾನ್ ಕಾರ್ಯವನ್ನು ಹೊಗಳಿಸಿದರು.
ಜಮ್ಮು -ಕಾಶ್ಮೀರದ ಪುಲ್ವಾಮಾದಲ್ಲಿ ಕಾನ್ವಾಯ್ ಹೊರಟಿದ್ದ ಸಿಆರ್ಪಿಎಫ್ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿದ ಉಗ್ರರು ಹಲವಾರು ಯೋಧರ ಬಲಿ ತೆಗೆದುಕೊಂಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಉಗ್ರರ ಅಡಗುದಾಣಗಳ ಮೇಲೆ ರಾತ್ರೋರಾತ್ರಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಸೇಡು ತೀರಿಸಿಕೊಂಡಿತ್ತು.
ಇದನ್ನೂ ಓದಿ: 'ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಕಾಶ್ಮೀರ ವಿವಾದ ಇತ್ಯರ್ಥವಾಗ್ಬೇಕು': ಪಾಕ್ ನಿಯೋಜಿತ ಪ್ರಧಾನಿ