ಹ್ಯಾರಿಸ್ ಪಾರ್ಕ್ (ಆಸ್ಟ್ರೇಲಿಯಾ): ಭಾರತದ ಸ್ಟ್ರೀಟ್ ಫುಡ್ಗೆ ಮನಸೋಲದವರೇ ಇಲ್ಲ. ಇದೀಗ ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬನಿಸ್ ಅವರ ಸರದಿ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬನಿಸ್ ಅವರು ಭಾರತದ ಸ್ಟ್ರೀಟ್ ಫುಡ್ ಸವಿದರು. ಆಸ್ಟ್ರೇಲಿಯಾದ ಲಿಟ್ಲ್ ಇಂಡಿಯಾ ಎಂದೇ ಕರೆಯಲ್ಪಡುವ ಹ್ಯಾರಿಸ್ ಪಾರ್ಕ್ಗೆ ಶುಕ್ರವಾರ ಆಂಟನಿ ಅಲ್ಬೇನಿಸ್ ತೆರಳಿ ರಸ್ತೆ ಬದಿ ನಿಂತು ಭಾರತದ ಚಾಟ್ಸ್ ಮತ್ತು ಜಿಲೇಬಿ ರುಚಿ ಸವಿದರು.
-
Great Friday night in Little India, Harris Park with @Charlton_AB. We tried out Prime Minister @narendramodi's recommendations of chaat at Chatkazz and jalebi at Jaipur Sweets - a winner! pic.twitter.com/biy3Fo4aKQ
— Anthony Albanese (@AlboMP) June 23, 2023 " class="align-text-top noRightClick twitterSection" data="
">Great Friday night in Little India, Harris Park with @Charlton_AB. We tried out Prime Minister @narendramodi's recommendations of chaat at Chatkazz and jalebi at Jaipur Sweets - a winner! pic.twitter.com/biy3Fo4aKQ
— Anthony Albanese (@AlboMP) June 23, 2023Great Friday night in Little India, Harris Park with @Charlton_AB. We tried out Prime Minister @narendramodi's recommendations of chaat at Chatkazz and jalebi at Jaipur Sweets - a winner! pic.twitter.com/biy3Fo4aKQ
— Anthony Albanese (@AlboMP) June 23, 2023
'ಹ್ಯಾರಿಸ್ ಪಾರ್ಕ್ ಲಿಟ್ಲ್ ಇಂಡಿಯಾದಲ್ಲಿ ಶುಕ್ರವಾರದ ರಾತ್ರಿ ಅದ್ಭುತ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಇಲ್ಲಿನ ಚಾಟ್ಕಾಜ್ಅಲ್ಲಿ ಚಾಟ್ಸ್ ಮತ್ತು ಜಿಲೇಬಿ ಸವಿದೆವು. ಅದ್ಭುತ' ಎಂದು ಆಂಟೋನಿ ಅಲ್ಬನಿಸ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಭಾರತದ ಸ್ಟ್ರೀಟ್ ಚಾಟ್ಸ್ ಮತ್ತು ಜಿಲೇಬಿ ರುಚಿ ಸವಿಯುವ ವಿಡಿಯೋವನ್ನು ಆಸ್ಟ್ರೇಲಿಯಾ ಪ್ರಧಾನಿ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
-
Sounds like a memorable Friday night, imbibing the best of Indian culture and culinary diversity. A winner indeed, like the India-Australia friendship. https://t.co/ySAiGBzgjJ
— Narendra Modi (@narendramodi) June 23, 2023 " class="align-text-top noRightClick twitterSection" data="
">Sounds like a memorable Friday night, imbibing the best of Indian culture and culinary diversity. A winner indeed, like the India-Australia friendship. https://t.co/ySAiGBzgjJ
— Narendra Modi (@narendramodi) June 23, 2023Sounds like a memorable Friday night, imbibing the best of Indian culture and culinary diversity. A winner indeed, like the India-Australia friendship. https://t.co/ySAiGBzgjJ
— Narendra Modi (@narendramodi) June 23, 2023
ಶುಕ್ರವಾರ ರಾತ್ರಿ ಸ್ಮರಣೀಯ: ಆಂಟೋನಿ ಅಲ್ಬನಿಸ್ ವಿಡಿಯೋಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಭಾರತೀಯ ಸಂಸ್ಕೃತಿ ಮತ್ತು ಪಾಕಶಾಲೆಯ ವೈವಿಧ್ಯತೆಯ ಅದ್ಭುತವನ್ನು ಸವಿದಿರುವುದು ಸ್ಮರಣೀಯವಾಗಿರಲಿದೆ. ನಿಜಕ್ಕೂ ಅದ್ಭುತ, ಭಾರತ-ಆಸ್ಟ್ರೇಲಿಯಾ ಸ್ನೇಹದಂತೆ' ಎಂದು ಟ್ವೀಟ್ ಮಾಡಿದ್ದಾರೆ.
ವಡಾ ಪಾವ್, ಮೀಸಲ್ ಪಾವ್ ಸವಿದಿದ್ದ ಜಪಾನ್ ರಾಯಭಾರಿ: ಇನ್ನು ಇತ್ತೀಚೆಗಷ್ಟೇ ಭಾರತದಲ್ಲಿನ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಅವರು ಪತ್ನಿ ಜೊತೆ ಪುಣೆಯಲ್ಲಿ ಸ್ಟ್ರೀಟ್ ಫುಡ್ ಸವಿದಿದ್ದರು. ಪುಣೆಯ ಫೇಮಸ್ ವಡಾ ಪಾವ್ ಮತ್ತು ಮೀಸಲ್ ಪಾವ್ ರುಚಿಗೆ ಆಸ್ಟ್ರೇಲಿಯಾ ರಾಯಭಾರಿ ದಂಪತಿಗಳು ಮನಸೋತು ವಿಡಿಯೋ ಹಂಚಿಕೊಂಡಿದ್ದರು. ಜೊತೆಗೆ ಭಾರತೀಯ ಆಹಾರ ತಿನ್ನುವ ಸ್ಪರ್ಧೆಯಲ್ಲಿ ನನ್ನ ಹೆಂಡತಿ ನನ್ನನ್ನು ಸೋಲಿಸಿದಳು ಎಂದು ರಾಯಭಾರಿ ಬರೆದುಕೊಂಡಿದ್ದರು. ಆಗ ಈ ವಿಡಿಯೋಗೆ ಪ್ರಧಾನಿ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ಹ್ಯಾಟ್ರಿಕ್ ಹಿರೋ ಶಿವಣ್ಣನಿಗೆ ಸ್ಟ್ರೀಟ್ ಫುಡ್ ಅಂದ್ರೆ ಬಲು ಇಷ್ಟನಂತೆ!
'ರಾಯಭಾರಿಗಳೇ, ನೀವು ಸೋಲಲು ಇಷ್ಟವಿಲ್ಲದ ಒಂದು ಸ್ಪರ್ಧೆ ಇದಾಗಿದೆ. ಭಾರತದ ಪಾಕಶಾಲೆಯ ವೈವಿಧ್ಯತೆಯನ್ನು ಆನಂದಿಸುತ್ತಿರುವುದನ್ನು ಮತ್ತು ವಿನೂತನ ರೀತಿಯಲ್ಲಿ ಅದನ್ನು ಪ್ರಸ್ತುತಪಡಿಸುವುದನ್ನು ನೋಡಲು ಸಂತೋಷವಾಗುತ್ತಿದೆ. ಹೀಗೆ ವಿಡಿಯೋಗಳು ಬರುತ್ತಿರಲಿ!' ಎಂದು ಮೋದಿ ಟ್ವೀಟ್ ಮಾಡಿದ್ದರು.
ಜಪಾನಿನ ರಾಯಭಾರಿ ಸುಜುಕಿ ಪುಣೆಯಲ್ಲಿ ಮಹಾರಾಷ್ಟ್ರ ಶೈಲಿಯ ಬೀದಿ ಆಹಾರ ಸೇವಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಕಾರ್ಯಕ್ರಮವೊಂದರ ನಿಮಿತ್ತ ಪುಣೆಗೆ ಬಂದಾಗ ಅವರು ವಡಾ ಪಾವ್ ಮತ್ತು ಮಿಸಲ್ ಪಾವ್ ಸವಿದಿದ್ದರು. ಆದ್ರೆ, ಸ್ವಲ್ಪ ಖಾರ ಹಚ್ಚಿದೆ ಎಂದಿದ್ದರು.
"ನಾನು ಭಾರತದ ಸ್ಟ್ರೀಟ್ ಫುಡ್ ಪ್ರೀತಿಸುತ್ತೇನೆ... ಆದರೆ ದಯವಿಟ್ಟು ಸ್ವಲ್ಪ ಖಾರ ಕಡಿಮೆ!" ಎಂದು ಜಪಾನಿನ ರಾಯಭಾರಿ ಟ್ವೀಟ್ ಮಾಡಿದ್ದರು. ಬಳಿಕ ಟ್ವಿಟರ್ ಪಾಲೋಯಸ್ ಸಲಹೆಯಂತೆ ಪುಣೆಯ ಪ್ರಸಿದ್ಧ ಮಿಸಾಲ್ ಪಾವ್ ಸಹ ಅವರು ರುಚಿಸಿ, ವಿಡಿಯೋ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರು ಸ್ಟ್ರೀಟ್ ಫುಡ್ಗೆ ಮನಸೋತ ವಿದೇಶಾಂಗ ಸಚಿವ ಎಸ್.ಜೈಶಂಕರ್