ಸ್ಯಾನ್ ಫ್ರಾನ್ಸಿಸ್ಕೋ : ಅಮೆರಿಕದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಹಾಗೂ ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಆನ್ಲೈನ್ ಸೇವೆಗಳನ್ನು ಒದಗಿಸುತ್ತಿರುವ ಆ್ಯಪಲ್ ಕಂಪನಿ ಇದೀಗ ಬಹುನಿರೀಕ್ಷಿತ ಐಫೋನ್ 15 ಸರಣಿಯ ಸ್ಮಾರ್ಟ್ಫೋನ್ಗಳ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ.
ಸೆಪ್ಟೆಂಬರ್ 12 ರಂದು ನಡೆಯಲಿರುವ ದೊಡ್ಡ ಕಾರ್ಯಕ್ರಮವೊಂದರಲ್ಲಿ ಐಫೋನ್ 15 ಸರಣಿ ಅನಾವರಣಗೊಳ್ಳಲಿದ್ದು, ಇದರಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಫೋನುಗಳು ಇರಲಿದೆ.
ಟೆಕ್ ದೈತ್ಯ ಈವೆಂಟ್‌ನಲ್ಲಿ ಹೊಸ ಆ್ಯಪಲ್ ವಾಚ್‌ಗಳನ್ನು ಸಹ ಘೋಷಿಸುವ ನಿರೀಕ್ಷೆಯಿದೆ. ಕಂಪನಿಯು ಆಯೋಜಿಸಿರುವ ಕಾರ್ಯಕ್ರಮವು ಆ್ಯಪಲ್ ಪಾರ್ಕ್‌ನಿಂದ ನೇರಪ್ರಸಾರ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ, ಆಹ್ವಾನ ಪತ್ರಗಳಲ್ಲಿ ಆ್ಯಪಲ್ ಲೋಗೋ ಬೂದು, ನೀಲಿ ಮತ್ತು ಕಪ್ಪು ಬಣ್ಣಗಳನ್ನು ಒಳಗೊಂಡಿದೆ, ಇದು ಐಫೋನ್ 15 ಪ್ರೊ ತಂಡವು ನೂತನವಾಗಿ ಬಿಡುಗಡೆ ಮಾಡುವ ಐಫೋನ್ 15 ಸರಣಿಯ ಸ್ಮಾರ್ಟ್ಫೋನ್ ಬಣ್ಣ ಎಂದು ಅಂದಾಜಿಸಲಾಗಿದೆ.
ಐಫೋನ್ 15 ಮಾದರಿಗಳು ಸ್ವಲ್ಪ ಬಾಗಿದ ಅಂಚುಗಳೊಂದಿಗೆ ಹೊಸ ವಿನ್ಯಾಸವನ್ನು ಹೊಂದಿರಲಿದೆ. ಆದರೆ, ಕ್ಯಾಮೆರಾ ಬಂಪ್ ದೊಡ್ಡದಾಗಿರುತ್ತದೆ ಮತ್ತು ಡಿಸ್ ಪ್ಲೇ ತೆಳುವಾಗಿರುತ್ತದೆ. ಪ್ರೊ ಮಾದರಿಗಳಿಗಾಗಿ ಆ್ಯಪಲ್ ಹೊಸ ಆಕ್ಷನ್ ಬಟನ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ಈ ಫೋನ್ಗಳು ಮ್ಯೂಟ್, ಎ 17 ಬಯೋನಿಕ್ ಚಿಪ್, ಹೊಸ ಟೈಟಾನಿಯಂ ಫ್ರೇಮ್ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್‌ಗಾಗಿ ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ಉತ್ತಮ ಕ್ಯಾಮರಾಗಳನ್ನು ಹೊಂದಿವೆ.
ಇದನ್ನೂ ಓದಿ : ಆ್ಯಪಲ್ನ ಟಾಪ್ 5 ಮಾರುಕಟ್ಟೆಗಳಲ್ಲಿ ಭಾರತವೂ ಒಂದು.. ಐಫೋನ್ ಮಾರಾಟದಲ್ಲಿ ಜರ್ಮನಿ, ಫ್ರಾನ್ಸ್ ಮೀರಿಸಿದ ಭಾರತ
ಮಾಹಿತಿ ಪ್ರಕಾರ, ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಐಫೋನ್ 15 ಮಾದರಿಗಳು ದೊಡ್ಡ ಬ್ಯಾಟರಿ ಪವರ್ ಅನ್ನು ಹೊಂದಿವೆಯಂತೆ. ಸ್ಟ್ಯಾಂಡರ್ಡ್ ಮಾಡೆಲ್ 3,877mAh ಬ್ಯಾಟರಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಇದು ಐಫೋನ್ 14 ನಲ್ಲಿ ಕಂಡುಬರುವ 3,279mAh ಯುನಿಟ್‌ಗಿಂತ ದೊಡ್ಡ ಅಪ್‌ಗ್ರೇಡ್ ಆಗಿದೆ. ಆ್ಯಪಲ್ ಫಾಸ್ಟ್ ಚಾರ್ಜರ್ ಕೂಡ ನೀಡಬಹುದು ಎಂಬ ಮಾತಿದೆ. ಇದು 35W ವೇಗದ ಚಾರ್ಜಿಂಗ್ನಿಂದ ಕೂಡಿದೆ.
ಇದನ್ನೂ ಓದಿ : ಆ್ಯಪಲ್ ಸಾಮ್ರಾಜ್ಯ ಆರಂಭಿಸಲು ಸಹಾಯ ಮಾಡಿದ ವಿಂಟೇಜ್ ಆ್ಯಪಲ್ ಕಂಪ್ಯೂಟರ್ ಹರಾಜಿಗೆ.. ಬೆಲೆ ಎಷ್ಟು ಗೊತ್ತಾ?
ಆ್ಯಪಲ್ ಸ್ಮಾರ್ಟ್ ವಾಚ್ : ಈ ಬಾರಿ ಹೊಸ ಆ್ಯಪಲ್ ಸ್ಮಾರ್ಟ್ ವಾಚ್‌ಗಗಳನ್ನು ಸಹ ಪರಿಚಯಿಸುವ ಸಾಧ್ಯತೆ ಇದೆ. ಆ್ಯಪಲ್ ವಾಚ್ ಅಲ್ಟ್ರಾದ ಹೊಸ ಆವೃತ್ತಿಯೊಂದಿಗೆ 41- ಮತ್ತು 45-ಮಿಲಿಮೀಟರ್ ಪರದೆಗಳೊಂದಿಗೆ ಹೊಸ ಸರಣಿಯಲ್ಲಿ 9 ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಲಿದೆ ಎಂದು ವರದಿಯಾಗಿದೆ. (ಐಎಎನ್ಎಸ್)
ಇದನ್ನೂ ಓದಿ : ಫೋನ್ ಚಾರ್ಜಿಂಗ್ ಹಾಕಿಟ್ಟು, ಪಕ್ಕ ಮಲಗುವುದು ಅಪಾಯಕಾರಿ: ಆ್ಯಪಲ್ ಎಚ್ಚರಿಕೆ