ETV Bharat / international

ಆಸ್ಟ್ರೇಲಿಯಾದ ದೇವಸ್ಥಾನದ ಮೇಲೆ ಖಲಿಸ್ತಾನ್ ಬೆಂಬಲಿಗರ ದಾಳಿ: ತಿಂಗಳಲ್ಲಿ ನಾಲ್ಕನೇ ಕೃತ್ಯ! - ಬ್ರಿಸ್ಬೇನ್‌ನ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ

ಆಸ್ಟ್ರೇಲಿಯಾದಲ್ಲಿ ಮತ್ತೊಂದು ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಲಾಗಿದೆ. ಖಲಿಸ್ತಾನ್ ಉಗ್ರವಾದಿಗಳ ಬೆಂಬಲಿಗರು ದೇವಸ್ಥಾನದ ಗೋಡೆಗಳ ಮೇಲೆ ಹಿಂದೂ ವಿರೋಧಿ ಬರಹಗಳನ್ನು ಬರೆದಿದ್ದಾರೆ.

Another Hindu temple vandalised by pro Khalistan supporters in Australia

author img

By

Published : Mar 5, 2023, 5:03 PM IST

ಮೆಲ್ಬೋರ್ನ್ : ಬ್ರಿಸ್ಬೇನ್‌ನಲ್ಲಿರುವ ಪ್ರಮುಖ ಹಿಂದೂ ದೇವಾಲಯವೊಂದರ ಮೇಲೆ ಶನಿವಾರ ಖಲಿಸ್ತಾನ್ ಪರ ಬೆಂಬಲಿಗರು ದಾಳಿ ನಡೆಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯದಲ್ಲಿ ಹಿಂದೂ ದೇವಾಲಯಗಳ ಧ್ವಂಸ ಸರಣಿ ಮುಂದುವರೆದಿದೆ. ಬ್ರಿಸ್ಬೇನ್‌ನ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಪುರೋಹಿತರು ಮತ್ತು ಭಕ್ತರು ಇಂದು ಬೆಳಗ್ಗೆ ಕರೆ ಮಾಡಿ ನಮ್ಮ ದೇವಾಲಯದ ಗೋಡೆಗಳನ್ನು ಧ್ವಂಸ ಮಾಡಿರುವ ಬಗ್ಗೆ ನನಗೆ ಮಾಹಿತಿ ನೀಡಿದರು ಎಂದು ದೇವಾಲಯದ ಅಧ್ಯಕ್ಷ ಸತೀಂದರ್ ಶುಕ್ಲಾ ಹೇಳಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ನಾವು ಕ್ವೀನ್ಸ್‌ಲ್ಯಾಂಡ್ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರು ದೇವಾಲಯ ಮತ್ತು ಭಕ್ತರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸತೀಂದರ್ ಶುಕ್ಲಾ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದೂ ಮಾನವ ಹಕ್ಕುಗಳ ಸಂಸ್ಥೆಯ ನಿರ್ದೇಶಕಿ ಸಾರಾ ಗೇಟ್ಸ್, ಇತ್ತೀಚಿನ ದ್ವೇಷ ಕೃತ್ಯವು ಆಸ್ಟ್ರೇಲಿಯಾದ ಹಿಂದೂಗಳನ್ನು ಭಯಭೀತಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಈ ದ್ವೇಷ ಕೃತ್ಯವು ಸಿಖ್ಸ್​ ಫಾರ್ ಜಸ್ಟಿಸ್ ಸಂಘಟನೆಯ ಭಯೋತ್ಪಾದಕ ದಾಳಿಯಾಗಿದೆ. ಈ ಸಂಘಟನೆ ಆಸ್ಟ್ರೇಲಿಯಾದ ಹಿಂದೂಗಳನ್ನು ಭಯಭೀತಗೊಳಿಸಲು ಪ್ರಯತ್ನಿಸುತ್ತಿದೆ. ಅಪಪ್ರಚಾರ, ಕಾನೂನುಬಾಹಿರ ಕ್ರಮಗಳು ಮತ್ತು ಸೈಬರ್‌ ಅಪರಾಧಗಳ ಮೂಲಕ ಸಿಖ್ಸ್​ ಫಾರ್ ಜಸ್ಟಿಸ್ ಸಂಘಟನೆಯು ಭಯ ಮತ್ತು ಬೆದರಿಕೆ ಹಾಕಲು ಪ್ರಯತ್ನಿಸುತ್ತಿದೆ ಎಂದು ಗೇಟ್ಸ್ ಹೇಳಿದರು. ದೇವಾಲಯದ ಮೇಲಿನ ದಾಳಿಯ ನಂತರ ಹಿಂದೂ ಸಮುದಾಯದ ಹೋರಾಟದ ಚಿತ್ರವನ್ನು ಗೇಟ್ಸ್ ಟ್ವೀಟ್ ಮಾಡಿದ್ದಾರೆ. ದೇವಸ್ಥಾನ ಸಮಿತಿ ಹಾಗೂ ಹಿಂದೂ ಸಮುದಾಯದ ಸದಸ್ಯರು ಗೋಡೆ ಮೇಲೆ ಬರೆಯಲಾದ ಹಿಂದೂ ವಿರೋಧಿ ದ್ವೇಷ ಬರಹಗಳನ್ನು ಸ್ವಚ್ಛಗೊಳಿಸಿದರು.

ಖಲಿಸ್ತಾನ್ ಬೆಂಬಲಿಗರು ಆಸ್ಟ್ರೇಲಿಯನ್ ಹಿಂದೂ ಸಮುದಾಯವನ್ನು ಭಯಭೀತಗೊಳಿಸುತ್ತಿದ್ದಾರೆ ಮತ್ತು ನಮ್ಮ ಧರ್ಮವನ್ನು ಆಚರಿಸಲು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಕೆಟ್ಟ ಅನುಭವವಾಗುವಂತೆ ಮಾಡುತ್ತಿದ್ದಾರೆ ಎಂದು ದೀರ್ಘಕಾಲದಿಂದ ನಗರದಲ್ಲಿ ವಾಸಿಸುತ್ತಿರುವ ನಿವಾಸಿಯೊಬ್ಬರು ಹೇಳಿದರು. ಆಸ್ಟ್ರೇಲಿಯಾದಲ್ಲಿ ಎರಡು ತಿಂಗಳ ಅವಧಿಯಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ ಧ್ವಂಸ ಘಟನೆಯ ನಾಲ್ಕನೇ ಘಟನೆ ಇದಾಗಿದೆ. ಜನವರಿ 23 ರಂದು, ಮೆಲ್ಬೋರ್ನ್‌ನ ಆಲ್ಬರ್ಟ್ ಪಾರ್ಕ್‌ನಲ್ಲಿರುವ ಪವಿತ್ರ ಇಸ್ಕಾನ್ ದೇವಾಲಯದ ಗೋಡೆಗಳ ಮೇಲೆ ಹಿಂದೂಸ್ತಾನ್ ಮುರ್ದಾಬಾದ್ ಎಂದು ಬರೆದು ಧ್ವಂಸಕೃತ್ಯ ಎಸಗಲಾಗಿತ್ತು.

ಜನವರಿ 16 ರಂದು ವಿಕ್ಟೋರಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಐತಿಹಾಸಿಕ ಶ್ರೀ ಶಿವ ವಿಷ್ಣು ದೇವಾಲಯವನ್ನು ಇದೇ ರೀತಿಯಲ್ಲಿ ಧ್ವಂಸಗೊಳಿಸಲಾಗಿತ್ತು. ಜನವರಿ 12 ರಂದು ಮೆಲ್ಬೋರ್ನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದ ಗೋಡೆಯ ಮೇಲೆ ಭಾರತ ವಿರೋಧಿ ಬರಹ ಬರೆಯಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ಧ್ವಂಸವನ್ನು ಭಾರತ ಪದೇ ಪದೆ ಖಂಡಿಸಿದೆ ಮತ್ತು ಆಸ್ಟ್ರೇಲಿಯಾ ಸರ್ಕಾರದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದೆ. ಕಳೆದ ತಿಂಗಳು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರನ್ನು ಭೇಟಿ ಮಾಡಿ, ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಗಳ ಬಗ್ಗೆ ಕ್ರಮಕೈಗೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದರು.

ಇದನ್ನೂ ಓದಿ: ಬಹಮನಿ ಕೋಟೆಯಲ್ಲಿ ದೇವಸ್ಥಾನ ಪತ್ತೆ: ಸೋಮೇಶ್ವರನ ದೇವಸ್ಥಾನ ಅಭಿವೃದ್ಧಿ ಪಡಿಸಲು ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.