ETV Bharat / international

A TIMELINE: ಡ್ರೋನ್​​ ದಾಳಿಯಲ್ಲಿ ಹತನಾದ ಉಗ್ರ ಜವಾಹಿರಿ ಮತ್ತು ಅಲ್ ಕೈದಾ ನಂಟು - ಹಿಜಾಬ್ ಹುಡುಗಿ

ಅಲ್ ಜವಾಹಿರಿ ಈ ವರ್ಷದ ಏಪ್ರಿಲ್‌ನಲ್ಲಿ 9 ನಿಮಿಷಗಳ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಫ್ರಾನ್ಸ್, ಈಜಿಪ್ಟ್ ಮತ್ತು ಹಾಲೆಂಡ್ ಇಸ್ಲಾಂ ವಿರೋಧಿ ರಾಷ್ಟ್ರಗಳು ಎಂದು ಆರೋಪಿಸಿದ್ದ. ಇದೇ ವಿಡಿಯೋದಲ್ಲಿ ಭಾರತದಲ್ಲಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ.

A TIMELINE: Terrorist Zawahiri and Al Qaeda link who praised hijab woman
ಹಿಜಾಬ್ ಯುವತಿಯನ್ನು ಶ್ಲಾಘಿಸಿದ್ದ ಉಗ್ರ ಜವಾಹಿರಿ ಮತ್ತು ಅಲ್ ಕೈದಾ ನಂಟು
author img

By

Published : Aug 2, 2022, 10:40 AM IST

Updated : Aug 2, 2022, 10:51 AM IST

ನವದೆಹಲಿ: ಅಲ್ ಕೈದಾ ಉಗ್ರವಾದಿ ಸಂಘಟನೆಯ ಮುಖ್ಯಸ್ಥ ಅಯಮಾನ್ ಅಲ್ ಜವಾಹಿರಿಯನ್ನು ಅಮೆರಿಕ ಡ್ರೋನ್ ದಾಳಿ ನಡೆಸಿ ಕೊಂದು ಹಾಕಿದೆ. ಅಫ್ಘಾನಿಸ್ತಾನದಲ್ಲಿ ಸಿಐಎ ಡ್ರೋನ್ ಕಾರ್ಯಾಚರಣೆ ನಡೆಸಿ ಜವಾಹಿರಿಯನ್ನು ಮಟ್ಟಹಾಕಿದೆ ಎಂದು ವರದಿಗಳು ತಿಳಿಸಿವೆ. ಈಜಿಪ್ಟ್​ನಲ್ಲಿ ಜನಿಸಿ 11 ವರ್ಷಗಳ ಕಾಲ ಅಲ್ ಕೈದಾ ಉಗ್ರವಾದಿ ಸಂಘಟನೆಯ ನಾಯಕನಾಗಿದ್ದ, ಸರ್ಜನ್​ನಿಂದ ಉಗ್ರವಾದಿಯಾಗುವ ತನಕ ಆತನ ಜೀವನ ಹೇಗಿತ್ತು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

  • ಅಲ್ ಜವಾಹಿರಿ 19 ಜೂನ್ 1951 ರಂದು ಶ್ರೀಮಂತ ಈಜಿಪ್ಟ್ ಕುಟುಂಬದಲ್ಲಿ ಜನಿಸಿದ. 14 ನೇ ವಯಸ್ಸಿನಲ್ಲಿ ಈತ ಮುಸ್ಲಿಂ ಬ್ರದರ್‌ಹುಡ್‌ ಸಂಘಟನೆಯ ಸದಸ್ಯನಾದ. ಅರೇಬಿಕ್ ಮತ್ತು ಫ್ರೆಂಚ್ ಮಾತನಾಡಬಲ್ಲವನಾಗಿದ್ದ ಜವಾಹಿರಿ, ವೈದ್ಯಕೀಯ ಅಧ್ಯಯನ ಮಾಡಿದ್ದು, ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕನಾಗಿದ್ದ.
  • 1978 ರಲ್ಲಿ ಕೈರೋದಲ್ಲಿ ನಡೆದ ಅಲ್ ಜವಾಹಿರಿಯ ವಿವಾಹ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕೈರೋ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದ ಅಜಾ ನೊವಾರಿ ಅವಳನ್ನು ಈತ ವಿವಾಹವಾಗಿದ್ದ. ಆಗ ಈಜಿಪ್ಟ್ ಉದಾರವಾದಿ ದೇಶವಾಗಿತ್ತು. ಆದರೆ ಅಲ್ ಜವಾಹಿರಿಯ ಮದುವೆಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ಛಾಯಾಗ್ರಾಹಕರು ಮತ್ತು ಸಂಗೀತಗಾರರಿಗೆ ವಿವಾಹ ಸಮಾರಂಭದಲ್ಲಿ ಪ್ರವೇಶವಿರಲಿಲ್ಲ. ನಗು ಮತ್ತು ಹಾಸ್ಯವನ್ನು ಸಹ ನಿಷೇಧಿಸಲಾಗಿತ್ತು.
  • ಜವಾಹಿರಿ ಈಜಿಪ್ಟ್ ಇಸ್ಲಾಮಿಕ್ ಜಿಹಾದ್ (EIJ) ಎಂಬ ಸಂಘಟನೆಯೊಂದನ್ನು ಹುಟ್ಟುಹಾಕಿದ. ಇದು 1970 ರ ದಶಕದಲ್ಲಿ ಈಜಿಪ್ಟ್‌ನಲ್ಲಿ ಜಾತ್ಯತೀತ ಆಡಳಿತವನ್ನು ವಿರೋಧಿಸುವ ಉಗ್ರಗಾಮಿ ಸಂಘಟನೆಯಾಗಿತ್ತು. ಈಜಿಪ್ಟ್‌ನಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವುದು ಇದರ ಗುರಿಯಾಗಿತ್ತು.
  • 1981 ರಲ್ಲಿ ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾದತ್ ಅವರ ಹತ್ಯೆಯ ನಂತರ ಬಂಧಿಸಲ್ಪಟ್ಟ ಮತ್ತು ಚಿತ್ರಹಿಂಸೆಗೊಳಗಾದ ನೂರಾರು ಜನರಲ್ಲಿ ಜವಾಹಿರಿ ಕೂಡ ಸೇರಿದ್ದ. ಮೂರು ವರ್ಷಗಳ ಜೈಲುವಾಸದ ನಂತರ ಈತ ದೇಶ ತೊರೆದು ಸೌದಿ ಅರೇಬಿಯಾಕ್ಕೆ ತೆರಳಿದ.
  • ಸೌದಿಗೆ ಬಂದ ನಂತರ ವೈದ್ಯಕೀಯ ವಿಭಾಗದಲ್ಲಿ ಅಭ್ಯಾಸ ಆರಂಭಿಸಿದ. ನಂತರ ಸೌದಿಯಲ್ಲಿ ಈತ ಅಲ್ - ಕೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅವನನ್ನು ಭೇಟಿಯಾದ.
  • 1985 ರಲ್ಲಿ, ಲಾಡೆನ್ ಅಲ್ ಕೈದಾ ಸಂಘಟನೆಯನ್ನು ಬೆಳೆಸುವ ಉದ್ದೇಶದಿಂದ ಪಾಕಿಸ್ತಾನದ ಪೇಶಾವರ್‌ಗೆ ಹೋದ. ಈ ಸಮಯದಲ್ಲಿ ಅಲ್ ಜವಾಹಿರಿ ಕೂಡ ಪೇಶಾವರದಲ್ಲಿದ್ದ. ಇಲ್ಲಿಂದ ಇಬ್ಬರು ಉಗ್ರರ ಸಂಬಂಧ ಗಟ್ಟಿಯಾಗತೊಡಗಿತು.
  • ಇದರ ನಂತರ, 2001 ರಲ್ಲಿ, ಅಲ್-ಜವಾಹಿರಿಯು ಈಜಿಪ್ಟ್ ಇಸ್ಲಾಮಿಕ್ ಜಿಹಾದ್ ಅನ್ನು ಅಲ್-ಕೈದಾದೊಂದಿಗೆ ವಿಲೀನಗೊಳಿಸಿದನು. ಇದಾದ ನಂತರ ಇಬ್ಬರೂ ಭಯೋತ್ಪಾದಕರು ಒಟ್ಟಾಗಿ ಜಗತ್ತನ್ನು ನಡುಗಿಸಲು ಸಂಚು ರೂಪಿಸಿದರು.
  • ಸೆಪ್ಟೆಂಬರ್ 11 ರ ದಾಳಿಯ ನಂತರ 2001 ರ ಕೊನೆಯಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಅಮೆರಿಕ ಪಡೆಗಳು ಕಿತ್ತೆಸೆದಾಗ ಬಿನ್ ಲಾಡೆನ್ ಮತ್ತು ಜವಾಹಿರಿ ಇಬ್ಬರೂ ತಪ್ಪಿಸಿಕೊಂಡರು.
  • ನಂತರ 2011ರಲ್ಲಿ ಲಾಡೆನ್‌ನನ್ನು ಅಮೆರಿಕ ಸೇನೆ ಪಾಕಿಸ್ತಾನದಲ್ಲಿ ಹತ್ಯೆ ಮಾಡಿತ್ತು.
  • ಅಮೆರಿಕ ದಾಳಿಯಲ್ಲಿ ಒಸಾಮಾ ಬಿನ್ ಲಾಡೆನ್ ಸತ್ತ ನಂತರ ಜವಾಹಿರಿ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ. 2011 ರಲ್ಲಿ ಈತ ಅಲ್-ಕೈದಾ ಮುಖ್ಯಸ್ಥನಾದ.
  • ಅಲ್ ಜವಾಹಿರಿ ಈ ವರ್ಷದ ಏಪ್ರಿಲ್‌ನಲ್ಲಿ 9 ನಿಮಿಷಗಳ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಫ್ರಾನ್ಸ್, ಈಜಿಪ್ಟ್ ಮತ್ತು ಹಾಲೆಂಡ್ ಇಸ್ಲಾಂ ವಿರೋಧಿ ರಾಷ್ಟ್ರಗಳು ಎಂದು ಆರೋಪಿಸಿದ್ದ.
  • ಇದನ್ನು ಓದಿ:ಅಮೆರಿಕ ಡ್ರೋನ್ ದಾಳಿ: ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಹತ್ಯೆ

Last Updated : Aug 2, 2022, 10:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.