ETV Bharat / international

ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಲಿದ್ದಾರೆ ಅಜಯ್ ಬಂಗಾ

ವಿಶ್ವಬ್ಯಾಂಕ್​ನ ಮುಂದಿನ ಮುಖ್ಯಸ್ಥರಾಗುವುಕ್ಕೆ ಭಾರತೀಯ-ಅಮೆರಿಕನ್ (ಸಿಖ್-ಅಮೆರಿಕನ್) ಮೂಲದ ಉದ್ಯಮಿ ಅಜಯ್ ಬಂಗಾ ತಯಾರಾಗಿದ್ದಾರೆ.

Ajay Banga
ಅಜಯ್ ಬಂಗಾ
author img

By

Published : Mar 31, 2023, 11:50 AM IST

ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಮೂಲದ ಉದ್ಯಮಿ ಅಜಯ್ ಬಂಗಾ ಅವರು ಅವಿರೋಧವಾಗಿ ವಿಶ್ವಬ್ಯಾಂಕ್‌ನ ಮುಂದಿನ ಅಧ್ಯಕ್ಷರಾಗಲಿದ್ದಾರೆ. ಈಗಾಗಲೇ ನಾಮನಿರ್ದೇಶನದ ಅವಧಿ ಮುಕ್ತಾಯವಾಗಿದ್ದು, ಜಗತ್ತಿನ ಯಾವುದೇ ದೇಶವೂ ಈವರೆಗೆ ಪ್ರತಿಷ್ಠಿತ ಹುದ್ದೆಗೆ ಪರ್ಯಾಯ ಅಭ್ಯರ್ಥಿಯನ್ನು ಪ್ರಸ್ತಾಪಿಸಿಲ್ಲ. ಕಳೆದ ಫೆಬ್ರವರಿಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ವಿಶ್ವ ಬ್ಯಾಂಕ್ ಅನ್ನು ಮುನ್ನಡೆಸಲು ಬಂಗಾ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

ನೂತನ ಅಧ್ಯಕ್ಷರ ನಾಮನಿರ್ದೇಶನಕ್ಕೆ ಸಂಬಂಧಿಸಿದಂತಹ ಪ್ರಕ್ರಿಯೆ ಕುರಿತಾದ ಕೆಲಸವನ್ನು ವಿಶ್ವ ಬ್ಯಾಂಕ್ ಆಡಳಿತ ಮಂಡಳಿಯು ನಿನ್ನೆ(ಗುರುವಾರ) ಮುಕ್ತಾಯಗೊಳಿಸಿದೆ. ಮೇ ತಿಂಗಳ ಆರಂಭದಲ್ಲಿ ಹೊಸ ನಾಯಕ ಹೆಸರನ್ನು ಘೋಷಿಸುವ ಹಿನ್ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆಯ ಮುಂದಿನ ಹಂತಗಳನ್ನು ಗುರುವಾರ ಪ್ರಕಟಿಸುವ ನಿರೀಕ್ಷೆಯಿದೆ. ಈವರೆಗೂ ಅಜಯ್ ಬಂಗಾ (63) ಅವರ ಹೆಸರನ್ನು ಹೊರತುಪಡಿಸಿ ಬೇರೆ ಪರ್ಯಾಯ ನಾಯಕರ ಹೆಸರು ಕೇಳಿ ಬಂದಿಲ್ಲ. ಪ್ರಸ್ತುತ ಬಂಗಾ ಅವರು ಹೂಡಿಕೆ ಸಂಸ್ಥೆ ಜನರಲ್ ಅಟ್ಲಾಂಟಿಕ್‌ನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಸ್ಟರ್‌ ಕಾರ್ಡ್‌ನ ಮಾಜಿ ಸಿಇಒ ಆಗಿಯೂ ಕೂಡ ಇವರು ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ : ವಿಶ್ವಬ್ಯಾಂಕ್​​​ನಿಂದ ರೈಲ್ವೆ ಇಲಾಖೆ ₹12,000 ಕೋಟಿ ಸಾಲ ಪಡೆದಿದೆ: ಅಶ್ವಿನಿ ವೈಷ್ಣವ್​

"ಮುಂದಿನ ಕೆಲವು ತಿಂಗಳುಗಳಲ್ಲಿ ವಿಶ್ವ ಬ್ಯಾಂಕ್​ನಲ್ಲಿ ಪ್ರಮುಖ ಪರಿವರ್ತನೆಯನ್ನು ನೀವು ನೋಡುತ್ತೀರಿ. ಜೋ ಬೈಡನ್ ಅವರು ಅಜಯ್ ಬಂಗಾ ಅವರನ್ನು ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ. ಭಾರತೀಯ-ಅಮೆರಿಕನ್ (ಸಿಖ್-ಅಮೆರಿಕನ್) ಮೂಲದವರಾದ ಬಂಗಾ ಅವರೇ ಅಧ್ಯಕ್ಷರಾಗಿ ಚುನಾಯಿತರಾಗುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವೆ. 21 ನೇ ಶತಮಾನದ ಸವಾಲುಗಳನ್ನು ಉತ್ತಮವಾಗಿ ಎದುರಿಸಲು ಮತ್ತು ಸಂಸ್ಥೆಯನ್ನು ವಿಕಸನಗೊಳಿಸಲು ಅಜಯ್ ತಯಾರಾಗಿದ್ದಾರೆ. ಬ್ಯಾಂಕ್ ಅಭಿವೃದ್ಧಿ ಗುರಿಗಳನ್ನು ತಲುಪಲು ಸೂಕ್ತ ಯೋಜನೆ ರೂಪಿಸುತ್ತಾರೆ" ಎಂದು ಯುಎಸ್ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಹೇಳಿದರು.

ಇದನ್ನೂ ಓದಿ : ವಿಶ್ವಬ್ಯಾಂಕ್‌ನ ಮಾನವ ಬಂಡವಾಳ ಸೂಚ್ಯಂಕ; ಭಾರತಕ್ಕೆ 116ನೇ ಸ್ಥಾನ

ವಿಶ್ವಬ್ಯಾಂಕ್‌ನ ಹಾಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್‌ ಮಾಲ್ಪಾಸ್‌ ಅವರು ತಮ್ಮ ಅಧಿಕಾರಾವಧಿಗಿಂತ ಸುಮಾರು ಒಂದು ವರ್ಷ ಮುಂಚಿತವಾಗಿಯೇ ತಮ್ಮ ಸ್ಥಾನ ತೊರೆಯುವುದಾಗಿ ಘೋಷಣೆ ಮಾಡಿರುವ ಕಾರಣ ಅವರ ಸ್ಥಾನಕ್ಕೆ ಉದ್ಯಮಿ ಅಜಯ್‌ ಬಂಗಾ ಬರುವ ನಿರೀಕ್ಷೆಯಿದೆ. ಜೂನ್‌ ತಿಂಗಳಿನಲ್ಲಿ ಡೇವಿಡ್ ಮಾಲ್ಪಾಸ್ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಹವಾಮಾನ ಬದಲಾವಣೆ ಕುರಿತು ಅವರು ಹೊಂದಿದ್ದ ನಿಲುವಿನ ಕಾರಣದಿಂದಾಗಿಯೇ ಡೇವಿಡ್ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಉದ್ಯಮಿ ಸ್ನೇಹಿ ಭಾರತ: ಟಾಪ್​ 50 ರತ್ತ ಸಾಗಲು ಮೋದಿಗೆ ವಿಶ್ವ ಬ್ಯಾಂಕ್​ ಟಿಪ್ಸ್​

ಕಳೆದ ವಾರ ಅಜಯ್‌ ಅವರನ್ನು ಬೆಂಬಲಿಸುವ ಬಗ್ಗೆ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಅರ್ಹತೆಯ ಆಧಾರದ ಮೇಲೆ ಇತರೆ ಸಂಭಾವ್ಯ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಹೇಳಿದೆ. ಆದಾಗ್ಯೂ, ಭಾರತ ಸೇರಿದಂತೆ ಪ್ರಪಂಚಾದ್ಯಂತದ ಪ್ರಮುಖ ದೇಶಗಳು ಬಂಗಾ ಅವರಿಗೆ ಅಗಾಧ ಬೆಂಬಲ ನೀಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.