ಬ್ರೆಜಿಲ್: ಬ್ರೆಜಿಲ್ನ ಬಾರ್ಸೆಲೋಸ್‌ನಲ್ಲಿ ಮಧ್ಯಮ ಗಾತ್ರದ ವಿಮಾನವೊಂದು ಶನಿವಾರ ಮಧ್ಯಾಹ್ನ (ನಿನ್ನೆ) 3 ಗಂಟೆಯ ಸುಮಾರಿಗೆ ಧರೆಗಪ್ಪಳಿಸಿದೆ. ವಿಮಾನದಲ್ಲಿದ್ದ ಪ್ರಯಾಣಿಕರು, ಸಿಬ್ಬಂದಿ ಸೇರಿದಂತೆ ಒಟ್ಟು 14 ಮಂದಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್ನ ಮಾಧ್ಯಮ ಸಂಸ್ಥೆಗಳು ಈ ಕುರಿತು ವರದಿ ಮಾಡಿವೆ.
ಪೈಲಟ್, ಸಹ ಪೈಲಟ್, ಇಬ್ಬರು ಸಿಬ್ಬಂದಿ ಸೇರಿ ಹದಿನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ದುರ್ಘಟನೆಯಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಬ್ರೆಜಿನ್‌ನ ಸಿವಿಲ್ ಡಿಫೆನ್ಸ್ ಮಾಹಿತಿ ನೀಡಿದೆ.
ನತದೃಷ್ಟ ವಿಮಾನವು ಮನೌಸ್ ಟ್ಯಾಕ್ಸಿ ಏರಿಯೊ ಎಂಬ ಕಂಪನಿಗೆ ಸೇರಿದೆ. ಅಮೆಜಾನ್‌ನ ಅತಿದೊಡ್ಡ ನಗರ ಮನೌಸ್‌ನಿಂದ ಟೇಕ್ ಆಫ್ ಆಗಿತ್ತು. ಮನೌಸ್‌ನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ನಗರದಲ್ಲಿ ಲ್ಯಾಂಡಿಂಗ್ ವೇಳೆ ಪ್ರತಿಕೂಲ ಹವಾಮಾನದಿಂದಾಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಿಮಾನದಲ್ಲಿದ್ದವರೆಲ್ಲ ಮೀನುಗಾರಿಕೆಗೆ ತೆರಳುತ್ತಿದ್ದ ಬ್ರೆಜಿಲ್ ಪ್ರವಾಸಿಗ ಪ್ರಯಾಣಿಕರು ಎಂದು ವರದಿಯಾಗಿದೆ. ಬ್ರೆಜಿಲ್ ವಾಯುಪಡೆ ತನಿಖೆಗೆ ತಜ್ಞರ ತಂಡ ಕಳುಹಿಸಿದೆ. (ಎಎನ್ಐ)
ಇಟಲಿಯಲ್ಲಿ ವಾಯುಪಡೆ ವಿಮಾನ ಪತನ: ಇಟಲಿಯ ಅಕ್ರೋಬ್ಯಾಟಿಕ್ ಏರ್ ಟೀಮ್ ಫ್ರೆಸ್ ಟ್ರಿಕಲೋರಿ ಎಂಬ ವಿಮಾನವು ಶನಿವಾರ ಉತ್ತರದ ಟುರಿನ್ ನಗರದ ಹೊರಭಾಗದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಬಾಲಕಿ ಸಾವನ್ನಪ್ಪಿರುವುದಾಗಿ ಇಟಾಲಿ ಮಾಧ್ಯಮಗಳು ವರದಿ ಮಾಡಿವೆ.
ಕಾರ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳೊಂದಗೆ ಸಂಚರಿಸುತ್ತಿದ್ದರು. ವಾಯುಪಡೆ ವಿಮಾನಗಳು ಏರ್ಶೋಗಾಗಿ ಅಭ್ಯಾಸ ನಡೆಸುತ್ತಿದ್ದಾಗ ಪತನಗೊಂಡಿದೆ. ಈ ವೇಳೆ ವಿಮಾನದ ಬಿಡಿಭಾಗಗಳು ಕಾರಿಗೆ ಅಪ್ಪಳಿಸಿದ್ದು, ಐದು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. 9 ವರ್ಷದ ಮಗು ಮತ್ತು ತಂದೆಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ಅಪಘಾತಕ್ಕೀಡಾಗುವ ಮುನ್ನ ಪೈಲಟ್ ಹೊರ ಜಿಗಿದಿದ್ದಾರೆ ಎಂದು ತಿಳಿದುಬಂದಿದೆ.
1988ರಲ್ಲಿ ಜರ್ಮನಿಯ ರಾಮ್‌ಸ್ಟೈನ್ ಏರ್ ಬೇಸ್‌ನಲ್ಲಿ ಸುಮಾರು ಮೂರು ಲಕ್ಷ ಜನರು ಭಾಗವಹಿಸಿದ್ದ ವೈಮಾನಿಕ ಪ್ರದರ್ಶನದ ವೇಳೆ ಫ್ರೆಕ್ಸ್ ಟ್ರೈಕೊಲೊರಿಯದ ಮೂರು ವಿಮಾನಗಳು ಡಿಕ್ಕಿ ಹೊಡೆದು ನೆಲಕ್ಕಪ್ಪಳಿಸಿದ್ದವು. ಮೂವರು ಪೈಲಟ್‌ಗಳು ಸೇರಿದಂತೆ 70 ಜನರು ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: ಅಮೆರಿಕದಲ್ಲಿ ಏರ್ ಶೋ ವೇಳೆ ವಿಮಾನ ಪತನ: ಪ್ಯಾರಾಚೂಟ್ ಬಳಸಿ ಪ್ರಾಣ ಉಳಿಸಿಕೊಂಡ ಪೈಲಟ್‌ಗಳು!