ETV Bharat / international

ಥಾಯ್ಲೆಂಡ್‌: ಒಂದೇ ವಾರದಲ್ಲಿ ಆಸ್ಪತ್ರೆ ಸೇರಿದ 2 ಲಕ್ಷಕ್ಕೂ ಅಧಿಕ ಜನ!

author img

By

Published : Mar 13, 2023, 10:16 AM IST

ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ವಾಯು ಗುಣಮಟ್ಟ ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿದೆ.

Thailand air pollution increased  Thailand air pollution  13 lakh people are sick  13 lakh people are sick over air pollution  ಬ್ಯಾಂಕಾಕ್​ನಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿತ  ಥಾಯ್ಲೆಂಡ್ ಆರೋಗ್ಯ ಇಲಾಖೆ ಎಚ್ಚರಿಕೆ  ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್  2 ಲಕ್ಷ ಮಂದಿ ಆಸ್ಪತ್ರೆಗೆ  ರಾಜಧಾನಿ ಬ್ಯಾಂಕಾಕ್‌ನ ಸ್ಥಿತಿ ತುಂಬಾ ಹದಗೆಟ್ಟಿದೆ  ಥೈಲ್ಯಾಂಡ್‌ನಲ್ಲಿ ವಾಯು ಮಾಲಿನ್ಯದ ಬೆದರಿಕೆ  ಸಾರ್ವಜನಿಕ ಆರೋಗ್ಯ ಸಚಿವಾಲಯ  ಆಸ್ಪತ್ರೆ ಪಾಲಾದ 2 ಲಕ್ಷಕ್ಕೂ ಅಧಿಕ ಜನ  ವಾಯು ಮಾಲಿನ್ಯ ಎಫೆಕ್ಟ್​
ವಾಯು ಮಾಲಿನ್ಯ ಎಫೆಕ್ಟ್​

ಬ್ಯಾಂಕಾಕ್​: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ವಿಪರೀತ ವಾಯುಮಾಲಿನ್ಯದಿಂದಾಗಿ ಒಂದೇ ವಾರದಲ್ಲಿ 2 ಲಕ್ಷ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿನದಿಂದ ದಿನಕ್ಕೆ ರಾಜಧಾನಿಯ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಜನರು ಜೀವಹಾನಿಕಾರಕ ಹೊಗೆಯಿಂದಲೇ ಬದುಕು ಸಾಗಿಸುತ್ತಿದ್ದಾರೆ. 10 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಬ್ಯಾಂಕಾಕ್ ಕೈಗಾರಿಕಾ ಹೊರಸೂಸುವಿಕೆ, ವಾಹನಗಳ ಹೊಗೆ ಮತ್ತು ಕೃಷಿ ಕ್ಷೇತ್ರಗಳಲ್ಲಿನ ಬೆಳೆ ಸುಡುವಿಕೆಯಿಂದ ಬಳಲುತ್ತಿದೆ.

3 ತಿಂಗಳಲ್ಲಿ 13 ಲಕ್ಷ ಮಂದಿ ಅಸ್ವಸ್ಥ: ಸಾರ್ವಜನಿಕ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ವಾಯು ಮಾಲಿನ್ಯದಿಂದಾಗಿ 1.3 ದಶಲಕ್ಷಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಪೈಕಿ ಕಳೆದೊಂದು ವಾರದಲ್ಲಿ 2 ಲಕ್ಷ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾರ್ವಜನಿಕ ಆರೋಗ್ಯ ಸಚಿವಾಲಯದ ವೈದ್ಯ ಕ್ರಿಯಾಂಗ್‌ಕ್ರೈ ನಾಮ್‌ಥೈಸಾಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, ಮಕ್ಕಳು ಮತ್ತು ಗರ್ಭಿಣಿಯರು ಮನೆಯಿಂದ ಹೊರಬರದಂತೆ ಸಲಹೆ ನೀಡಿದ್ದಾರೆ. ಜನರು ಎನ್-95 ಮಾಸ್ಕ್ ಧರಿಸುವಂತೆಯೂ ಹೇಳಿದ್ದಾರೆ.

ಮನೆಯಿಂದಲೇ ಕೆಲಸ ಮಾಡಿ: ಕೆಲವು ವರದಿಗಳ ಪ್ರಕಾರ, ಥಾಯ್ಲೆಂಡ್‌ನಲ್ಲಿ ವಾಯುಮಾಲಿನ್ಯ ಎಷ್ಟು ಗಂಭೀರವಾಗಿದೆ ಎಂದರೆ ಜನವರಿಯಿಂದ ಮನೆಯಿಂದಲೇ ಕೆಲಸ ಮಾಡಲು ಬ್ಯಾಂಕಾಕ್ ಅಧಿಕಾರಿಗಳು ಸಿಬ್ಬಂದಿಗೆ ಸೂಚಿಸಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ, ವಾಹನಗಳಿಂದ ಹೊರಬರುವ ಮಿತಿ ಮೀರಿದ ಹೊಗೆಯನ್ನು ಮೇಲ್ವಿಚಾರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೇ, ಮಕ್ಕಳಿಗಾಗಿ ನಡೆಸುತ್ತಿರುವ ನಗರದ ನರ್ಸರಿಗಳಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿವೆ.

ಅಪಾಯ ಮುಗಿದಿಲ್ಲ: ವಾಯು ಮಾಲಿನ್ಯದ ಅಪಾಯ ಮುಗಿದಿಲ್ಲ ಎನ್ನುತ್ತಾರೆ ಬ್ಯಾಂಕಾಕ್ ಅಧಿಕಾರಿಗಳು. ಮುಂಬರುವ ದಿನಗಳಲ್ಲಿ ಜನರನ್ನು ಮನೆಗಳಲ್ಲೇ ಇರಿಸಲು ಕಠಿಣ ನಿರ್ಬಂಧಗಳನ್ನು ವಿಧಿಸಬೇಕಾಗಬಹುದಾಗಿದೆ. ಬುಧವಾರ ಬ್ಯಾಂಕಾಕ್‌ನ 50 ಜಿಲ್ಲೆಗಳಲ್ಲಿ ಅತ್ಯಂತ ಅಪಾಯಕಾರಿ PM2.5 ಕಣಗಳು ಅಸುರಕ್ಷಿತ ಮಟ್ಟವನ್ನು ಸೂಚಿಸುತ್ತಿವೆ ಎಂದು ಸಾರ್ವಜನಿಕ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ಮೂರು ದಿನಗಳಿಂದ ಬ್ಯಾಂಕಾಕ್‌ನ ಬಹುತೇಕ ಭಾಗಗಳಲ್ಲಿ PM2.5 ಮಟ್ಟವು ಸುರಕ್ಷಿತ ಮಿತಿಗಿಂತ ಹೆಚ್ಚಿದೆ ಎಂದು ಮಾಲಿನ್ಯ ನಿಯಂತ್ರಣ ಇಲಾಖೆ ತಿಳಿಸಿದೆ. ಮಾಲಿನ್ಯ ನಿಯಂತ್ರಣ ಮೇಲ್ವಿಚಾರಣಾ ಸಂಸ್ಥೆ IQAir ಬ್ಯಾಂಕಾಕ್ ಅನ್ನು ವಿಶ್ವದ ಮೂರನೇ ಅತ್ಯಂತ ಕಲುಷಿತ ನಗರವೆಂದು ಪರಿಗಣಿಸಿದೆ.

PM 2.5 ಭೀತಿ: PM 2.5 ಮಾಲಿನ್ಯ ಉಂಟುಮಾಡುವ ಅತ್ಯಂತ ಸೂಕ್ಷ್ಮ ಕಣಗಳಾಗಿವೆ. ಇದು ರಕ್ತದೊಂದಿಗೆ ಬೆರೆಯುವ ಮೂಲಕ ರೋಗಗಳ ಅಪಾಯ ಹೆಚ್ಚಿಸುತ್ತದೆ. ಗಾಳಿಯಲ್ಲಿರುವ ಪಾರ್ಟಿಕ್ಯುಲೇಟ್ ಮ್ಯಾಟರ್ (PM) ಮಾನವ ಶ್ವಾಸಕೋಶಗಳಿಗೆ ವಿಷಕ್ಕಿಂತ ಹೆಚ್ಚು ಅಪಾಯ ಮಾಡುತ್ತವೆ. ಅವುಗಳ ಗಾತ್ರ 2.5 ಮೈಕ್ರೊಮೀಟರ್ ಅಥವಾ ಅದಕ್ಕಿಂತ ಕಡಿಮೆ. ಇವುಗಳಿಂದ ಅಕಾಲಿಕ ಮರಣವೂ ಸಂಭವಿಸಬಹುದು. WHO ಪ್ರಕಾರ, PM 2.5 ಗಾಳಿಯಲ್ಲಿ ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳಿಗಿಂತ ಹೆಚ್ಚು ಇರಬಾರದು. ಪ್ರಸ್ತುತ ಥಾಯ್ಲೆಂಡ್‌ನಲ್ಲಿನ ಕಣಗಳ ಪ್ರಮಾಣವು ಕಡಿಮೆಯಾಗಿದೆ. ಆದರೆ ಇದು ಅಪಾಯಕಾರಿ ಎನ್ನುತ್ತಾರೆ.

ಇದನ್ನೂ ಓದಿ: ಟೈರ್​ ಕಣಗಳಿಂದಲೂ ಮಾಲಿನ್ಯ: ಇದೆಷ್ಟು ಅಪಾಯಕಾರಿ ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.