ETV Bharat / international

ಎಐ ಚಾಲಿತ ಸುಳ್ಳು ಮಾಹಿತಿ ವಿಶ್ವಕ್ಕೆ ಅತಿದೊಡ್ಡ ಅಪಾಯ: ವಿಶ್ವ ಆರ್ಥಿಕ ವೇದಿಕೆ ವರದಿ - ಜಾಗತಿಕ ಆರ್ಥಿಕತೆ

ಎಐ ಚಾಲಿತ ತಪ್ಪು ಮಾಹಿತಿ ಹರಡುವಿಕೆಯಿಂದ ಜಗತ್ತಿನಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ತರಬಹುದು ಎಂದು ವಿಶ್ವ ಆರ್ಥಿಕ ವೇದಿಕೆ ಹೇಳಿದೆ.

AI-powered-misinformation-is-the-world-s-biggest-short-term-threat--

author img

By ETV Bharat Karnataka Team

Published : Jan 11, 2024, 4:25 PM IST

ಲಂಡನ್( ಬ್ರಿಟನ್): ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಾಮರ್ಥ್ಯದಿಂದ ಸೃಷ್ಟಿಸಲಾದ ಸುಳ್ಳು ಮತ್ತು ತಪ್ಪು ದಾರಿಗೆಳೆಯುವ ಮಾಹಿತಿಗಳಿಂದ ಪ್ರಜಾಪ್ರಭುತ್ವ ನಾಶವಾಗುವ ಮತ್ತು ಸಮಾಜವನ್ನು ಧ್ರುವೀಕರಿಸುವ ಸಂಭವನೀಯತೆಗಳು ಜಾಗತಿಕ ಆರ್ಥಿಕತೆಗೆ ತಕ್ಷಣದ ಅಪಾಯವಾಗಿವೆ ಎಂದು ವಿಶ್ವ ಆರ್ಥಿಕ ವೇದಿಕೆ ಬುಧವಾರ ತನ್ನ ವರದಿಯಲ್ಲಿ ತಿಳಿಸಿದೆ.

ತನ್ನ ಇತ್ತೀಚಿನ ಜಾಗತಿಕ ಅಪಾಯಗಳ ವರದಿಯಲ್ಲಿ, ಪರಿಸರ ಅಪಾಯಗಳ ಸರಣಿಯು ದೀರ್ಘಾವಧಿಯಲ್ಲಿ ಅತಿದೊಡ್ಡ ಅಪಾಯಗಳನ್ನು ತರಲಿದೆ ಎಂದು ಸಂಸ್ಥೆ ಹೇಳಿದೆ. ಸ್ವಿಸ್ ಸ್ಕೀ ರೆಸಾರ್ಟ್ ನಗರವಾದ ದಾವೋಸ್​ನಲ್ಲಿ ಸಿಇಒಗಳು ಮತ್ತು ವಿಶ್ವ ನಾಯಕರ ವಾರ್ಷಿಕ ಸಭೆಗೆ ಮುಂಚಿತವಾಗಿ ಈ ವರದಿ ಬಿಡುಗಡೆ ಮಾಡಲಾಗಿದೆ ಮತ್ತು ಸುಮಾರು 1,500 ತಜ್ಞರು, ಉದ್ಯಮದ ಮುಖಂಡರು ಮತ್ತು ನೀತಿ ನಿರೂಪಕರ ಸಮೀಕ್ಷೆಯನ್ನು ಇದು ಆಧರಿಸಿದೆ.

ವರದಿಯು ತಪ್ಪು ಮತ್ತು ಸುಳ್ಳು ಮಾಹಿತಿಯನ್ನು ಮುಂದಿನ ಎರಡು ವರ್ಷಗಳಲ್ಲಿ ಅತ್ಯಂತ ತೀವ್ರವಾದ ಅಪಾಯ ಎಂದು ಪಟ್ಟಿ ಮಾಡಿದೆ. ತಂತ್ರಜ್ಞಾನದ ತ್ವರಿತ ಪ್ರಗತಿಯು ಹೊಸ ಸಮಸ್ಯೆಗಳನ್ನು ಹೇಗೆ ಸೃಷ್ಟಿಸುತ್ತಿದೆ ಅಥವಾ ಅಸ್ತಿತ್ವದಲ್ಲಿರುವವುಗಳನ್ನು ಇನ್ನಷ್ಟು ಹೇಗೆ ಹದಗೆಡಿಸುತ್ತಿದೆ ಎಂಬುದನ್ನು ವರದಿ ಎತ್ತಿ ತೋರಿಸಿದೆ. ಚಾಟ್​ಜಿಪಿಟಿಯಂಥ ಜನರೇಟಿವ್ ಎಐ ಚಾಟ್​ಬಾಟ್​ ತಂತ್ರಜ್ಞಾನದ ಬೆಳವಣಿಗೆಯು ಸಮುದಾಯಗಳನ್ನು ಧ್ರುವೀಕರಿಸುವ ಅಪಾಯ ತಂದೊಡ್ಡಿದೆ. ಇಂಥ ಉನ್ನತ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಪರಿಣಿತರು ಮಾತ್ರವಲ್ಲದೇ ಕೌಶಲ್ಯ ಇಲ್ಲದವರು ಕೂಡ ಬಳಸಿಕೊಳ್ಳಬಹುದಾಗಿದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದಿನ ವಾರ ದಾವೋಸ್ ಸಭೆಗಳಲ್ಲಿ ಎಐ ವಿಷಯವೇ ಪ್ರಮುಖ ಚರ್ಚೆಯ ವಿಷಯವಾಗಲಿದೆ. ಇದರಲ್ಲಿ ಓಪನ್ಎಐ ಸಿಇಒ ಸ್ಯಾಮ್ ಆಲ್ಟ್​ಮನ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಮತ್ತು ಮೆಟಾದ ಮುಖ್ಯ ಎಐ ವಿಜ್ಞಾನಿ ಯಾನ್ ಲೆಕುನ್ ಅವರಂತಹ ಎಐ ಉದ್ಯಮದ ಪ್ರತಿಷ್ಠಿತರು ಭಾಗವಹಿಸುವ ನಿರೀಕ್ಷೆಯಿದೆ.

ಅಮೆರಿಕ, ಬ್ರಿಟನ್, ಇಂಡೋನೇಷ್ಯಾ, ಭಾರತ, ಮೆಕ್ಸಿಕೊ ಮತ್ತು ಪಾಕಿಸ್ತಾನದಂತಹ ದೊಡ್ಡ ಆರ್ಥಿಕತೆಗಳು ಸೇರಿದಂತೆ ಹಲವಾರು ದೇಶಗಳಲ್ಲಿ ಶತಕೋಟಿ ಜನರು ಈ ವರ್ಷ ಮತ್ತು ಮುಂದಿನ ವರ್ಷ ಚುನಾವಣೆ ಎದುರಿಸಲು ಸಜ್ಜಾಗಿರುವ ಮಧ್ಯೆ ಎಐ ಚಾಲಿತ ತಪ್ಪು ಮತ್ತು ಸುಳ್ಳು ಮಾಹಿತಿಗಳು ಅಪಾಯವಾಗಿ ಹೊರಹೊಮ್ಮುತ್ತಿದೆ ಎಂದು ವರದಿ ತಿಳಿಸಿದೆ.

"ಡೀಪ್​ಫೇಕ್​ಗಳನ್ನು ತಯಾರಿಸಲು ಮತ್ತು ದೊಡ್ಡ ಸಮುದಾಯಗಳ ಮೇಲೆ ನಿಜವಾಗಿಯೂ ಪರಿಣಾಮ ಬೀರಲು ನೀವು ಎಐ ಅನ್ನು ಬಳಸಿಕೊಳ್ಳಬಹುದು. ಇದು ನಿಜವಾಗಿಯೂ ತಪ್ಪು ಮಾಹಿತಿಯನ್ನು ಪ್ರಚೋದಿಸುತ್ತದೆ" ಎಂದು ಮಾರ್ಷ್​ನ ಅಪಾಯ ನಿರ್ವಹಣಾ ನಾಯಕಿ ಕ್ಯಾರೊಲಿನಾ ಕ್ಲಿಂಟ್ ಹೇಳಿದರು. "ಸತ್ಯ ಪರಿಶೀಲಿಸುವುದು ಜನರಿಗೆ ಸಾಧ್ಯವಾಗದಿರುವುದು ಸಮಾಜಗಳು ಮತ್ತಷ್ಟು ಧ್ರುವೀಕರಣಗೊಳ್ಳಲು ಕಾರಣವಾಗಬಹುದು. ಚುನಾಯಿತ ಸರ್ಕಾರಗಳ ನ್ಯಾಯಸಮ್ಮತತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಲು ನಕಲಿ ಮಾಹಿತಿಯನ್ನು ಸಹ ಬಳಸಬಹುದು. ಇದರರ್ಥ ಪ್ರಜಾಪ್ರಭುತ್ವ ಪ್ರಕ್ರಿಯೆಗಳು ನಾಶವಾಗಬಹುದು ಮತ್ತು ಇದು ಸಾಮಾಜಿಕ ಧ್ರುವೀಕರಣ ಮತ್ತೂ ಹೆಚ್ಚಾಗಬಹುದು" ಎಂದು ಕ್ಲಿಂಟ್ ತಿಳಿಸಿದರು.

ಇದನ್ನೂ ಓದಿ : ಬಿಟ್​ಕಾಯಿನ್ ಇಟಿಎಫ್​ ಷೇರು ವಹಿವಾಟಿಗೆ ಕೊನೆಗೂ ಅನುಮತಿ ನೀಡಿದ ಯುಎಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.