ETV Bharat / international

ಕದನ ವಿರಾಮದ ನಂತರ ಮತ್ತೆ ಯುದ್ಧ ಆರಂಭಿಸುತ್ತೇವೆ; ಇಸ್ರೇಲ್ ಸೇನಾಪಡೆ ಮುಖ್ಯಸ್ಥ

ಮಾನವೀಯ ಕದನ ವಿರಾಮ ಕೊನೆಗೊಂಡ ನಂತರ ಹಮಾಸ್ ವಿರುದ್ಧ ಮತ್ತೆ ಯುದ್ಧ ಆರಂಭಿಸುವುದಾಗಿ ಇಸ್ರೇಲ್ ಹೇಳಿದೆ.

IDF chief: Military will resume fighting 'with determination' at end of current lull

author img

By ETV Bharat Karnataka Team

Published : Nov 26, 2023, 6:43 PM IST

ಟೆಲ್ ಅವೀವ್ : ಗಾಝಾ ಪಟ್ಟಿಯಲ್ಲಿ ಕದನ ವಿರಾಮ ಕೊನೆಗೊಂಡ ಬಳಿಕ ಇಸ್ರೇಲ್ ಸೇನೆ ಹಮಾಸ್ ವಿರುದ್ಧ ಮತ್ತಷ್ಟು ಪ್ರಬಲವಾಗಿ ಹೋರಾಟ ಆರಂಭಿಸಲಿದೆ ಎಂದು ಐಡಿಎಫ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಅವರು ಸೈನಿಕರಿಗೆ ಬರೆದ ಸುದೀರ್ಘ ಪತ್ರದಲ್ಲಿ ತಿಳಿಸಿದ್ದಾರೆ. "ಐಡಿಎಫ್​ ತನ್ನ ಸಿದ್ಧಾಂತಗಳನ್ನು ಪಾಲಿಸುತ್ತ ಅದೇ ಸಮಯದಲ್ಲಿ ನಮ್ಮ ಜನರ ಜೀವಗಳನ್ನು ರಕ್ಷಿಸಲು ತೀವ್ರವಾಗಿ ಹೋರಾಡಲಿದೆ. ಈ ಕದನ ವಿರಾಮದ ಸಮಯದಲ್ಲಿ ಒತ್ತೆಯಾಳಾಗಿರುವ ಮಕ್ಕಳು ಮತ್ತು ತಾಯಂದಿರ ಮೊದಲ ಗುಂಪಿನ ಬಿಡುಗಡೆಗಾಗಿ ನಾವು ಅವಕಾಶ ಮಾಡಿದ್ದೇವೆ" ಎಂದು ಹಾಲೆವಿ ಹೇಳಿದರು.

"ಒತ್ತೆಯಾಳುಗಳ ಬಿಡುಗಡೆಯ ಕದನ ವಿರಾಮ ಅವಧಿ ಮುಗಿದ ನಂತರ ಉಳಿದ ಒತ್ತೆಯಾಳುಗಳ ಬಿಡುಗಡೆ ಮತ್ತು ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನಾವು ದೃಢನಿಶ್ಚಯದಿಂದ ಸಮರ ಕಾರ್ಯಾಚರಣೆ ಮತ್ತೆ ಆರಂಭಿಸಲಿದ್ದೇವೆ" ಎಂಬ ಹಾಲೆವಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

"ಎಲ್ಲ ಒತ್ತೆಯಾಳುಗಳು ಬಿಡುಗಡೆಯಾಗುವವರೆಗೂ ನಾವು ಹೋರಾಡಲು ಬಯಸುತ್ತೇವೆ ಎಂದು ನೀವು ಹೇಳಿದ್ದನ್ನು ನಾನು ಕೇಳಿದ್ದೇನೆ ಹಾಗೂ ನಾವು ಅದನ್ನೇ ಮಾಡಲಿದ್ದೇವೆ!" ಎಂದು ಹಾಲೆವಿ ಸೈನಿಕರನ್ನು ಉದ್ದೇಶಿಸಿ ಹೇಳಿದ್ದಾರೆ.

ಹಮಾಸ್​ನ ಹಿರಿಯ ನಾಯಕರ ಜೀವದ ಭರವಸೆ ನೀಡಲ್ಲ ಎಂದ ಇಸ್ರೇಲ್: ಹಮಾಸ್ ಮತ್ತು ಇಸ್ರೇಲ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಜಾರಿಯಲ್ಲಿರುವ ಮಧ್ಯೆ ಹಿರಿಯ ಹಮಾಸ್ ನಾಯಕರನ್ನು ಹತ್ಯೆಗೈಯುವಂತೆ ಇಸ್ರೇಲ್ ಸರಕಾರ ತನ್ನ ಗುಪ್ತಚರ ಸಂಸ್ಥೆ ಮೊಸ್ಸಾದ್ ಗೆ ಆದೇಶಿಸಿದೆ. ಕದನ ವಿರಾಮದ ಸಮಯದಲ್ಲಿ ಮತ್ತು ನಂತರ ಹಮಾಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಕತಾರ್ ಮತ್ತು ಈಜಿಪ್ಟ್ ಮಧ್ಯವರ್ತಿಗಳಿಗೆ ಯಾವುದೇ ಭರವಸೆ ನೀಡಲಾಗಿಲ್ಲ ಎಂದು ಇಸ್ರೇಲ್ ಸರ್ಕಾರದ ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ.

ಹಮಾಸ್​ನ ಹಿರಿಯ ನಾಯಕರಾದ ಇಸ್ಮಾಯಿಲ್ ಹನಿಯೆಹ್, ಖಾಲಿದ್ ಮಶಾಲ್, ಯಾಹ್ಯಾ ಸಿನ್ವರ್ ಮತ್ತು ಮೊಹಮ್ಮದ್ ದೀಫ್ ಅವರ ಸಾವಿನ ಕ್ಷಣಗಣನೆ ಆರಂಭವಾಗಿದೆ ಮತ್ತು ಅವರು ವಿಶ್ವದ ಯಾವುದೇ ಭಾಗದಲ್ಲಿ ವಾಸಿಸುತ್ತಿದ್ದರೂ ಶೀಘ್ರದಲ್ಲೇ ಅವರನ್ನು ಹುಡುಕಿ ಹತ್ಯೆ ಮಾಡಲಾಗುವುದು ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಶೌರ್ಯಂಟ್ ಮಾಧ್ಯಮಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದಾಗ್ಯೂ, ಈ ನಾಯಕರನ್ನು ತನ್ನ ನೆಲದಲ್ಲಿ ಕೊಲ್ಲಲಾಗುವುದಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕತಾರ್​ಗೆ ಭರವಸೆ ನೀಡಿದ್ದಾರೆ ಎಂದು ಇಸ್ರೇಲ್ ಸರ್ಕಾರದ ಮೂಲಗಳು ಐಎಎನ್ಎಸ್​ಗೆ ತಿಳಿಸಿವೆ.

ಇದನ್ನೂ ಓದಿ : ಇಸ್ರೇಲ್ ಪರ ಗೂಢಚಾರಿಕೆ ಆರೋಪ; ವೆಸ್ಟ್​ಬ್ಯಾಂಕ್​ನಲ್ಲಿ ಇಬ್ಬರು ಶಂಕಿತರ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.