ರಾಫಾ (ಗಾಜಾ): ಆಕೆ ಯುದ್ಧದ ನಡುವೆಯೇ ಜನಿಸಿದ್ದಳು. ಅವಳ ಕುಟುಂಬವು ಆಕೆಗೆ ಅಲ್ - ಅಮಿರಾ ಆಯಿಷಾ ಪ್ರಿನ್ಸಸ್ ಆಯಿಶಾ ಎಂದು ಹೆಸರಿಟ್ಟಿದ್ದರು. ಆ ಹೆಣ್ಣು ಮಗು ಮೂರು ವಾರಗಳೂ ಬದುಕಲಿಲ್ಲ. ಹೌದು, 17 ದಿನ ಪೂರೈಸಿದ ಹೆಣ್ಣು ಮಗು ಹಾಗೂ ಆಕೆಯ ಸಹೋದರ ಇಸ್ರೇಲ್ನಿಂದ ನಡೆದ ವೈಮಾನಿಕ ದಾಳಿಯಿಂದ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಮೃತರ ಕುಟುಂಬದ ಸದಸ್ಯರಲ್ಲಿ ತೀವ್ರ ದುಃಖ ಆವರಿಸಿದೆ.
ಮಂಗಳವಾರ ಬೆಳಗಿನ ಜಾವಕ್ಕೂ ಮುನ್ನವೇ ಇಸ್ರೇಲ್ ವೈಮಾನಿಕ ದಾಳಿ ನಡೆಸಿ, ರಾಫಾದಲ್ಲಿ ಈ ಕುಟುಂಬ ವಾಸವಾಗಿದ್ದ ಅಪಾರ್ಟ್ಮೆಂಟ್ ಕಟ್ಟಡವನ್ನು ನೆಲಸಮಗೊಳಿಸಿದೆ. ಕುಟುಂಬದ ಸದಸ್ಯರು ನಿದ್ರಿಸುತ್ತಿದ್ದರು ಎಂದು ಮಗುವಿನ ಅಜ್ಜಿ ಮತ್ತು ಸ್ಫೋಟದಿಂದ ಬದುಕುಳಿದ ಸುಜಾನ್ ಝೋರಾಬ್ ಹೇಳಿದರು. ವೈಮಾನಿಕ ದಾಳಿಯಲ್ಲಿ ಪ್ಯಾಲೆಸ್ಟೈನ್ನ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲಿ ಅಮೀರಾ ಮತ್ತು ಅವರ ಎರಡು ವರ್ಷದ ಸಹೋದರ ಅಹ್ಮದ್ ಸೇರಿದ್ದಾರೆ. ''ಅಮೀರಾ ಜನಿಸಿ ಕೇವಲ 17 ದಿನಗಳು ಮಾತ್ರ ಆಗಿತ್ತು. ಅವಳ ಹೆಸರನ್ನು ಸಹ ಇನ್ನೂ ನೋಂದಾಯಿಸಲಾಗಿಲ್ಲ'' ಎಂದು ಸುಜಾನ್ ಝೋರಾಬ್ ತಿಳಿಸಿದರು.
ತೀವ್ರವಾಗಿ ಗಾಯಗೊಂಡು ರಾಫಾದಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಮೂದ್ ಝೋರಾಬ್ ಅವರು, ತನ್ನ ಇಬ್ಬರು ಮಕ್ಕಳಿಗೆ ವಿದಾಯ ಹೇಳಿದರು. ಮಕ್ಕಳ ಅಗಲಿಕೆಗೆ ಮಹಮೂದ್ ಝೋರಾಬ್ ಅವರ ಹೆಂಡತಿ ಮತ್ತು ತಾಯಿ ತುಂಬಾ ದುಃಖ ಅನುಭವಿಸಿದರು.
ಆರೋಗ್ಯ ಸಚಿವಾಲಯದ ಪ್ರಕಾರ, ಗಾಜಾದಲ್ಲಿ ಪ್ಯಾಲೇಸ್ಟಿನಿಯನ್ ಸಾವಿನ ಸಂಖ್ಯೆ 19 ಸಾವಿರ ದಾಟಿದೆ. ಅದರಲ್ಲಿ ಈ ಕುಟುಂಬದ ದುರಂತವು ಕೂಡಾ ಸೇರಿದೆ. ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಸಾವಿರಾರು ಜನರು ಬಲಿಯಾಗಿದ್ದಾರೆ. ಗಾಜಾ ಪ್ರದೇಶದ ಮೇಲೆ ಎರಡೂವರೆ ತಿಂಗಳುಗಳಿಂದ ಇಸ್ರೇಲ್ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಆಗಾಗ್ಗೆ ಜನ ವಸತಿ ಪ್ರದೇಶಗಳ ಮೇಲೆ ಭೀಕರ ದಾಳಿ ಮಾಡಿ ಸಾವಿರಾರು ಮನೆಗಳನ್ನು ನಾಶಪಡಿಸುತ್ತಿದೆ.
ಅಕ್ಟೋಬರ್ 7 ರಂದು ಯುದ್ಧ ಆರಂಭವಾದಾಗಿನಿಂದ ಗಾಜಾ ಪಟ್ಟಿಯಲ್ಲಿ ಸುಮಾರು 19 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಸುಮಾರು 70 ಪ್ರತಿಶತದಷ್ಟು ಮಹಿಳೆಯರು ಮತ್ತು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತದೆ. ಹಾಗೆಯೇ ಇಸ್ರೇಲ್ನಲ್ಲಿನ ವಿದೇಶಿ ಪ್ರಜೆಗಳು ಸೇರಿದಂತೆ 1,400 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಎರಡು ಆಸ್ಪತ್ರೆಗಳ ಮೇಲೆ ದಾಳಿ: ''ಇಸ್ರೇಲಿ ಸೇನೆಯು ಗಾಜಾದ ಉತ್ತರದಲ್ಲಿ ಕೊನೆಯದಾಗಿ ಕಾರ್ಯನಿರ್ವಹಿಸುತ್ತಿದ್ದ ಎರಡು ಆಸ್ಪತ್ರೆಗಳಲ್ಲಿ ದಾಳಿ ನಡೆಸಿ ಸಿಬ್ಬಂದಿಯನ್ನು ಬಂಧಿಸಿದೆ. ಹಮಾಸ್ನ ಸದಸ್ಯರನ್ನು ಸಂಪೂರ್ಣವಾಗಿ ತೆರವುಗೊಳಿಸಲು ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಈ ದಾಳಿಯು ಗಾಜಾದ ದಕ್ಷಿಣದಲ್ಲಿ ತಿಂಗಳುಗಳವರೆಗೆ ಮುಂದುವರಿಯಲಿದೆ'' ಎಂದು ಎಚ್ಚರಿಸಿದ್ದಾರೆ. ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮಂಗಳವಾರ ಹೇಳಿದ್ದಾರೆ.
ಇದನ್ನೂ ಓದಿ: ಒತ್ತೆಯಾಳು ಬಿಡುಗಡೆಗಾಗಿ ಇಸ್ರೇಲ್-ಹಮಾಸ್ ಮಾತುಕತೆ ವಿಫಲ