ETV Bharat / international

ಬ್ರೇಕಪ್ ಸೇಡು.. ಗೆಳತಿಯ ಮುಖದ ಮೇಲೆ ತನ್ನ ಹೆಸರು ಹಚ್ಚೆ ಹಾಕಿ ವಿಕೃತಿ ಮೆರೆದ ಪಾಗಲ್​ಪ್ರೇಮಿ

ತನಗೆ ಬ್ರೇಕಪ್​ ಹೇಳಿದ್ದಕ್ಕೆ ಕೋಪಗೊಂಡ ಪ್ರಿಯಕರನೊಬ್ಬ ತನ್ನ ಪ್ರಿಯತಮೆಯನ್ನು ಅಪಹರಿಸಿ ಮುಖದ ತುಂಬೆಲ್ಲಾ ಟ್ಯಾಟೂ ಹಾಕಿ ವಿಕೃತಿ ಮೆರೆದ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಈ ಕೇಸಲ್ಲಿ ಆತನನ್ನು ಬಂಧಿಸಲಾಗಿದೆ.

author img

By

Published : Jun 5, 2022, 7:44 PM IST

-man-kidnapping
ಬ್ರೇಕಪ್ ಸೇಡು

ಬ್ರೆಸಿಲಿಯಾ(ಬ್ರೆಜಿಲ್)​: ತನ್ನ ಜೊತೆ ಬ್ರೇಕಪ್​ ಮಾಡಿಕೊಂಡಿದ್ದಕ್ಕೆ ಕುಪಿತನಾದ ಪ್ರಿಯಕರ ಮಾಜಿ ಪ್ರೇಯಸಿಯನ್ನು ಅಪಹರಿಸಿ ಮುಖದ ಮೇಲೆ ತನ್ನ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಟ್ಯಾಟೂ(ಹಚ್ಚೆ) ಹಾಕಿ ಮನೋವಿ ವಿಕೃತಿ ಮೆರೆದ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಬಂಧಿಸಲಾಗಿದೆ.

ಏನಿದು ಘಟನೆ: ಬ್ರೆಜಿಲ್‌ನ ಸಾವೊ ಪೌಲೊ ನಿವಾಸಿ ತಯಾನೆ ಕಾಲ್ಡಾಸ್ (18) ಆಕೆಯ ಗೆಳೆಯ ಗೇಬ್ರಿಯಲ್ ಕೊಯೆಲ್ಹೋ (20) 2019 ರಿಂದ ಪರಿಚಯವಾಗಿದ್ದರು. ಅಲ್ಲದೇ, ಡೇಟಿಂಗ್​ ಕೂಡ ನಡೆಸುತ್ತಿದ್ದರು. ಬಳಿಕ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರೂ ದೂರವಾಗಿದ್ದರು.

ಆದರೆ, ಪಾಗಲ್​ಪ್ರೇಮಿ ಗೇಬ್ರಿಯಲ್​ ತನ್ನ ಮಾಜಿ ಪ್ರೇಯಸಿ ತಯಾನೆಯನ್ನು ಬಿಟ್ಟಿರಲಿಲ್ಲ. ಆಗಾಗ ಕಾಲೇಜಿಗೆ ಬಂದು ಕಿರುಕುಳ ನೀಡುತ್ತಿದ್ದನಂತೆ. ಕೆಲ ದಿನಗಳ ಹಿಂದೆ ತಯಾನೆಯನ್ನು ಅಪಹರಿಸಿದ ಗೇಬ್ರಿಯಲ್​ ಆಕೆಯನ್ನು ತನ್ನ ಮನೆಗೆ ಹೊತ್ತೊಯ್ದು ಮುಖದ ಮೇಲೆ ಕಾಣಿಸುವಂತೆ ದೊಡ್ಡದಾಗಿ ತನ್ನ ಹೆಸರನ್ನು ಟ್ಯಾಟೂ(ಹಚ್ಚೆ) ಹಾಕಿದ್ದಾನೆ.

ಟ್ಯಾಟೂ ಕಲಾವಿದನಾಗಿದ್ದ ಗೇಬ್ರಿಯಲ್​ ತನ್ನೊಂದಿಗೆ ಬ್ರೇಕಪ್​ ಮಾಡಿಕೊಂಡ ತಯಾನೆಗೆ ಬುದ್ಧಿ ಕಲಿಸಲು ಈತ ಈ ಉಪಾಯವನ್ನು ಹುಡುಕಿದ್ದಾನೆ. ಮರುದಿನ ತಯಾನಾಳಾ ತಾಯಿ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಗೇಬ್ರಿಯಲ್​ ಮನೆಯಲ್ಲಿ ತಯಾನೆಯನ್ನು ಪತ್ತೆ ಮಾಡಿ ಕರೆದೊಯ್ದಿದ್ದಾರೆ.

ಗೇಬ್ರಿಯಲ್​ನ ಹುಚ್ಚಾಟದಿಂದ ಆಕೆ ಅತಿಯಾಗಿ ಭಯಗೊಂಡಿದ್ದಳಂತೆ. ಗಲ್ಲದಿಂದ ದೊಡ್ಡದಾಗಿ ಟ್ಯಾಟೂ ಹಾಕಿದ್ದಕ್ಕೆ ನೊಂದುಕೊಂಡಿದ್ದಾಳೆ. ತನ್ನನ್ನು ಬಲವಂತವಾಗಿ ಅಪಹರಿಸಿ ಮನೆಗೆ ಕರೆದೊಯ್ದು ಆತ ನನ್ನ ಮುಖವನ್ನು ವಿಕಾರ ಮಾಡಿದ್ದಾನೆ ಎಂದು ಆಕೆ ದೂರಿದ್ದಾಳೆ. ಆದರೆ, ಈಕೆಯ ಅಪವಾದವನ್ನು ಗೇಬ್ರಿಯಲ್​ನ ಮನೆಯವರು ತಳ್ಳಿಹಾಕಿದ್ದಾರೆ. ಹುಡುಗಿಯೇ ಇಷ್ಟಪಟ್ಟು ಟ್ಯಾಟೂ ಹಾಕಿಸಿಕೊಂಡಿದ್ದಾಳೆ ಎಂದಿದ್ದಾರೆ.

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಯುವತಿಯ ಬಗ್ಗೆ ಕನಿಕರ ವ್ಯಕ್ತವಾಗಿದೆ. ಅಲ್ಲದೇ ಹಲವಾರು ಟ್ಯಾಟೂ ಕಲಾವಿದರು ಆಕೆಯ ಮುಖದ ಮೇಲಿನ ಟ್ಯಾಟೂವನ್ನು ಲೇಸರ್​ನಿಂದ ಅಳಿಸಿ ಹಾಕುವುದಾಗಿ ಹೇಳಿದ್ದಾರೆ. ಇದೀಗ ಯುವತಿಯ ಮುಖದ ಮೇಲಿನ ಟ್ಯಾಟೂವನ್ನು ಲೇಸರ್​ ಚಿಕಿತ್ಸೆಯಿಂದ ಅಳಿಸಿ ಹಾಕಲಾಗಿದೆ. ಇದಲ್ಲದೇ, ಪ್ರಿಯಕರನ ಹೆಸರಲ್ಲಿದ್ದ ಇನ್ನೆರಡು ಟ್ಯಾಟೂವನ್ನು ಕೂಡ ಅಳಿಸಲಾಗಿದೆ. ತನ್ನ ಮುಖವನ್ನು ವಿಕಾರ ಮಾಡಿದ್ದಕ್ಕೆ ಮಾಜಿ ಪ್ರಿಯಕರನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ತಯಾನೆ ಒತ್ತಾಯಿಸಿದ್ದಾಳೆ.

ಓದಿ: ಐಷಾರಾಮಿ ಕ್ರೂಸ್​​ ಹಡಗು ಜೂನ್​ 8ರಿಂದ 3 ದಿನಗಳ ಪ್ರಯಾಣ ಆರಂಭ.. ಚೆನ್ನೈ, ಪುದುಚೇರಿಗೆ ಟ್ರಿಪ್​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.