ETV Bharat / international

ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ: ಆಂಧ್ರಪ್ರದೇಶ ಮೂಲದ 6 ಮಂದಿ ದುರ್ಮರಣ - road accident

Accident in US: ಅಮೆರಿಕದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರ ಮೂಲದ 6 ಮಂದಿ ಸಾವನ್ನಪ್ಪಿದ್ದಾರೆ.

accident
ರಸ್ತೆ ಅಪಘಾತ
author img

By PTI

Published : Dec 28, 2023, 12:03 PM IST

ಹೂಸ್ಟನ್ (ಅಮೆರಿಕ) : ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಪಿಕಪ್ ಟ್ರಕ್‌ಗೆ ಮಿನಿ ವ್ಯಾನ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಭಾರತೀಯ ಕುಟುಂಬದ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಟೆಕ್ಸಾಸ್ ಸಾರ್ವಜನಿಕ ಸುರಕ್ಷತಾ ಇಲಾಖೆ (ಡಿಪಿಎಸ್) ನೀಡಿದ ಮಾಹಿತಿ ಪ್ರಕಾರ, ಫೋರ್ಟ್‌ವರ್ತ್ ಬಳಿಯ ಜಾನ್ಸನ್ ಕೌಂಟಿ ಬಳಿ ಮಂಗಳವಾರ ಸಂಜೆ ಈ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ಅಮಲಾಪುರಂ ಪಟ್ಟಣದ ಒಂದೇ ಕುಟುಂಬದ ಏಳು ಜನರು ಮಿನಿ ವ್ಯಾನ್‌ನಲ್ಲಿದ್ದರು. ಅವರಲ್ಲಿ ಒಬ್ಬರಾದ 43 ವರ್ಷದ ಲೋಕೇಶ್ ಪೋತಬತುಲಾ ಎಂಬುವರು ಮಾತ್ರ ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದಾರೆ ಎಂದು ತಿಳಿಸಿದೆ.

ಮೃತಪಟ್ಟವರನ್ನು ಪೋತಬತುಲಾ ಅವರ ಪತ್ನಿ 36 ವರ್ಷದ ನವೀನ ಪೊತಬತುಲಾ, ದಂಪತಿಯ ಮಕ್ಕಳಾದ 9 ವರ್ಷದ ನಿಶಿಧಾ ಪೋತಬತುಲಾ ಮತ್ತು 10 ವರ್ಷದ ಕೃತಿಕ್ ಪೋತಬತುಲಾ ಹಾಗೂ ನವೀನ ಪೋತಬತುಲಾ ತಂದೆ ತಾಯಿಗಳಾದ 60 ವರ್ಷದ ಸೀತಾಮಹಾಲಕ್ಷ್ಮಿ ಪೊನ್ನದ ಮತ್ತು 64 ವರ್ಷದ ನಾಗೇಶ್ವರ ರಾವ್​ ಪೊನ್ನದ ಮತ್ತು ಮಿನಿ ವ್ಯಾನ್‌ ಚಾಲಕ ರುಶಿಲ್ ಬ್ಯಾರಿ (28) ಎಂದು ಗುರುತಿಸಲಾಗಿದೆ.

ದಂಪತಿ L1 ವೀಸಾದಡಿ TCS ನಲ್ಲಿ ಕೆಲಸ ಮಾಡುತ್ತಿದ್ದರು. ಮರಣ ಪ್ರಮಾಣಪತ್ರ ನೀಡಿದ ನಂತರ ಮೃತದೇಹಗಳನ್ನು ಮನೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೂಸ್ಟನ್‌ನಲ್ಲಿರುವ ಭಾರತದ ಕಾನ್ಸುಲೆಟ್ ಜನರಲ್ (ಸಿಜಿ) ತಿಳಿಸಿದ್ದಾರೆ. ಹಾಗೆಯೇ, ಮೃತರು ಮುಮ್ಮಿಡಿವರಂ ಶಾಸಕ ಪಿ ವೆಂಕಟ ಸತೀಶ್ ಕುಮಾರ್ ಅವರ ಸಂಬಂಧಿಕರು ಎಂದು ತಿಳಿದುಬಂದಿದೆ.

ಪ್ರಯಾಣಿಕರ ಬಸ್‌ಗೆ ಬೆಂಕಿ : ಇನ್ನೊಂದೆಡೆ, ನಿನ್ನೆ ರಾತ್ರಿ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಸಹ ರಸ್ತೆ ಅಪಘಾತ ಸಂಭವಿಸಿದೆ. ಗುನಾದಿಂದ ಆರೋನ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 12 ಮಂದಿ ಸಜೀವ ದಹನವಾಗಿದ್ದಾರೆ. ಬಸ್​ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಘಟನೆಯಿಂದ 14 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಮತ್ತು ಜಿಲ್ಲಾಡಳಿತದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತರನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಡಂಪರ್​-ಬಸ್​ ಮಧ್ಯೆ ಡಿಕ್ಕಿ, ಧಗಧಗನೇ ಉರಿದ ವಾಹನಗಳು, 12 ಜನ ಸಜೀವದಹನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.