ETV Bharat / international

ಹಳದಿ ಸಮುದ್ರದ ಬಲೆಯಲ್ಲಿ ಸಿಲುಕಿದ ಚೀನಾದ ಪರಮಾಣು ಜಲಾಂತರ್ಗಾಮಿ: 55 ಚೀನಾದ ಜನ ಸಾವು.. ಯುಕೆ ವರದಿ

author img

By ETV Bharat Karnataka Team

Published : Oct 4, 2023, 1:00 PM IST

ಹಳದಿ ಸಮುದ್ರದಲ್ಲಿ ಹಾಕಲಾಗಿದ್ದ ಬಲೆಯಲ್ಲಿ ಚೀನಾದ ಜಲಾಂತರ್ಗಾಮಿ ಹಡಗು ಸಿಲುಕಿದ ಪರಿಣಾಮ, ಚೀನಾದ 55 ನಾವಿಕರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬ್ರಿಟಿಷ್ ಗುಪ್ತಚರ ಸಂಸ್ಥೆಗಳು ರಹಸ್ಯ ವರದಿಗಳನ್ನು ಸಿದ್ಧಪಡಿಸಿವೆ ಎಂದು ಡೈಲಿ ಮೇಲ್ ನಿಯತಕಾಲಿಕ ತಿಳಿಸಿದೆ.

55 Chinese sailors feared dead
ಹಳದಿ ಸಮುದ್ರದ ಬಲೆಯಲ್ಲಿ ಸಿಲುಕಿದ ಚೀನಾದ ಪರಮಾಣು ಜಲಾಂತರ್ಗಾಮಿ: 55 ಚೀನಾದ ಜನ ಸಾವು..

ವಾಷಿಂಗ್ಟನ್: ಚೀನಾ ಸಮೀಪದ ಹಳದಿ ಸಮುದ್ರದಲ್ಲಿ ಭಾರಿ ಪರಮಾಣು ಅಪಘಾತ ಸಂಭವಿಸಿದೆ. ಬಲೆಯಲ್ಲಿ ಸಿಲುಕಿ ಅಪಘಾತಕ್ಕೊಳಗಾದ ಚೀನಾದ ಪರಮಾಣು ಜಲಾಂತರ್ಗಾಮಿ ನೌಕೆಯಲ್ಲಿದ್ದ 55 ಜನರು ಮೃತಪಟ್ಟಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳು ವಿವರವಾಗಿ ಲೇಖನಗಳನ್ನು ಪ್ರಕಟಿಸಿವೆ. ಚೀನಾದ ಮೌನದಿಂದ ಪರಮಾಣು ಸೋರಿಕೆ ಸಂಭವಿಸಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ, ಚೀನಾ ಮಾಹಿತಿ ಬಹಿರಂಗಪಡಿಸಿಲ್ಲ.

ಚೀನಾದ ಪರಮಾಣು ಚಾಲಿತ ಜಲಾಂತರ್ಗಾಮಿ '093-417' ಆಂಕರ್ ಮತ್ತು ಸರಪಳಿಯಲ್ಲಿ ಸಿಲುಕಿದ್ದರಿಂದ ಆಗಸ್ಟ್ 21 ರಂದು ಅಪಘಾತ ಒಳಗಾಗಿದೆ. ನೌಕೆಯಲ್ಲಿ ಆಮ್ಲಜನಕದ ಕೊರತೆಯಾಗಿದ್ದರಿಂದ ಈ ಅವಘಡದಲ್ಲಿ 55 ನಾವಿಕರು ಪ್ರಾಣ ಕಳೆದುಕೊಂಡಿದ್ದಾರೆ. ಆಗಸ್ಟ್‌ನಲ್ಲಿಯೇ ಈ ದುರ್ಘಟನೆ ಸಂಭವಿಸಿದ್ದರೂ ಚೀನಾ ಈವರೆಗೂ ಬಾಯಿಬಿಟ್ಟಿಲ್ಲ. ಇತ್ತೀಚೆಗಷ್ಟೇ 'ಡೈಲಿ ಮೇಲ್' ಬ್ರಿಟನ್‌ನ ಗುಪ್ತಚರ ಸಂಸ್ಥೆಗಳ ವರದಿಗಳನ್ನು ಆಧರಿಸಿ ಲೇಖನವೊಂದನ್ನು ಪ್ರಕಟಿಸಿತ್ತು. ಇದರ ಜೊತೆಗೆ, ಆಗಸ್ಟ್​ನಲ್ಲಿ, ಅಮೆರಿಕನ್ ನೌಕಾ ತಜ್ಞರು ಈ ಜಲಾಂತರ್ಗಾಮಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದರು. ಆ ಸಮಯದಲ್ಲಿ, ತೈವಾನ್ ಮತ್ತು ಚೀನಾ ಎರಡೂ ಈ ವಿಚಾರವನ್ನು ತಿರಸ್ಕರಿಸಿದವು. ಆದರೆ, ಇತ್ತೀಚೆಗೆ ಬ್ರಿಟಿಷ್ ಜಲಾಂತರ್ಗಾಮಿ ನೌಕೆಗಳೂ ಈ ಅಪಾಯವನ್ನು ದೃಢಪಡಿಸಿವೆ.

ಆರು ಗಂಟೆವೆರೆಗೆ ಆಮ್ಲಜನಕದ ಕೊರತೆ: ಆಗಸ್ಟ್ 21 ರಂದು ಬೆಳಗ್ಗೆ 8.21 ಕ್ಕೆ, ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿಯ ಪರಮಾಣು ಚಾಲಿತ ಜಲಾಂತರ್ಗಾಮಿ '093-417' ಚೀನಾದ ಶಾಂಡೋಂಗ್ ಪ್ರಾಂತ್ಯದ ಹಳದಿ ಸಮುದ್ರದಲ್ಲಿ ಮುಳುಗಿತು. ಈ ಅತ್ಯಾಧುನಿಕ ಜಲಾಂತರ್ಗಾಮಿ 350 ಅಡಿಗೂ ಹೆಚ್ಚು ಉದ್ದವಿದೆ. ಜಲಾಂತರ್ಗಾಮಿ ನೌಕೆಯಲ್ಲಿನ ಬ್ಯಾಟರಿಗಳು ಶಕ್ತಿಯನ್ನು ಕಳೆದುಕೊಂಡಿದ್ದವು. ಇದರಿಂದ ಅದರಲ್ಲಿರುವ ಏರ್ ಪ್ಯೂರಿಫೈಯರ್ ಮತ್ತು ಏರ್ ಟ್ರೀಟ್ ಮೆಂಟ್ ವ್ಯವಸ್ಥೆಗಳು ಕೆಲಸ ಮಾಡುವುದನ್ನು ನಿಲ್ಲಿಸಿರಬಹುದು ಎನ್ನುತ್ತಾರೆ ಬ್ರಿಟನ್ ತಜ್ಞರು. ಏರ್​ಪ್ಯೂರಿಫೈಯರ್ ಸ್ಥಗಿತಗೊಂಡಿದ್ದರಿಂದ ಗಾಳಿಯು ಕಲುಷಿತಗೊಂಡು ಹೈಪೋಕ್ಸಿಯಾ ಎಂಬ ಸ್ಥಿತಿ ತಲೆದೋರಿತು. ಇದನ್ನು ದುರಸ್ತಿ ಮಾಡಲು ಸುಮಾರು ಆರು ಗಂಟೆಗಳು ಬೇಕಾಯಿತು ಎಂದು ಬ್ರಿಟಿಷ್ ವರದಿಗಳು ಹೇಳುತ್ತವೆ.

'ಚೈನ್ ಮತ್ತು ಆಂಕರ್ ಟ್ರ್ಯಾಪ್'ನಲ್ಲಿ ಲಾಕ್​ ಆಗಿದ್ದ ಚೀನಾ ಜಲಾಂತರ್ಗಾಮಿ: ಈ ವೇಳೆ ಆಮ್ಲಜನಕದ 55 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಕ್ಯಾಪ್ಟನ್​, 21 ಅಧಿಕಾರಿಗಳು, 7 ಕೆಡೆಟ್‌ ಅಧಿಕಾರಿಗಳು, 9 ಸಣ್ಣ ಅಧಿಕಾರಿಗಳು ಮತ್ತು 17 ನಾವಿಕರು ಸೇರಿದ್ದಾರೆ. ಸಾವನ್ನಪ್ಪಿದವರಲ್ಲಿ ಜಲಾಂತರ್ಗಾಮಿ ಕ್ಯಾಪ್ಟನ್ ಕರ್ನಲ್ ಶು ಯೋಂಗ್ ಪೆಂಗ್ ಸೇರಿದ್ದಾರೆ. ಪಶ್ಚಿಮದ ಹಡಗುಗಳಿಗೆ ಹಾಕಿದ ಬಲೆಯಲ್ಲಿ ಸಿಕ್ಕಿಬಿದ್ದ. ಕಿಂಗ್ಡಾವೊ ನೌಕಾ ನೆಲೆಯು ಜಲಾಂತರ್ಗಾಮಿ ಅಪಘಾತದ ಸ್ಥಳದ ಸಮೀಪದಲ್ಲಿದೆ. ಅಮೆರಿಕನ್ ಮತ್ತು ಬ್ರಿಟಿಷ್ ಜಲಾಂತರ್ಗಾಮಿ ನೌಕೆಗಳು ಇಲ್ಲಿಗೆ ಬರುವುದನ್ನು ತಡೆಯಲು ಹಳದಿ ಸಮುದ್ರದಲ್ಲಿ ಡ್ರಾಗನ್ ಸ್ಥಾಪಿಸಿದ 'ಚೈನ್ ಮತ್ತು ಆಂಕರ್ ಟ್ರ್ಯಾಪ್'ನಲ್ಲಿ ಅದರ ಜಲಾಂತರ್ಗಾಮಿ ಸಿಕ್ಕಿಬಿದ್ದಿದೆ ಎಂದು ಡೈಲಿ ಮೇಲ್ ವರದಿ ಹೇಳಿದೆ.

ಬೀಜಿಂಗ್ ನೌಕಾಪಡೆಯು ಇದೇ ರೀತಿಯ ಬಲೆಗಳನ್ನು ಬಳಸುತ್ತದೆ. ಮತ್ತೊಂದೆಡೆ, ಈ ಘಟನೆ ನಡೆದಿದೆ ಎಂದು ನಂಬಲು ಬಲವಾದ ಕಾರಣಗಳಿವೆ ಎಂದು ಬ್ರಿಟಿಷ್ ನೇವಿ ವಿವರಿಸಿದೆ. ತುರ್ತು ಸಂದರ್ಭಗಳಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳಲು ಮತ್ತು ಆಮ್ಲಜನಕವನ್ನು ಉತ್ಪಾದಿಸಲು ಚೀನಾದ ಜಲಾಂತರ್ಗಾಮಿಗಳು ಕಿಟ್‌ಗಳನ್ನು ಹೊಂದಿಲ್ಲದಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಘಟನೆ ನಡೆದಿಲ್ಲ ಎಂದ ಚೀನಾ: ಈ ಘಟನೆಯ ನಂತರ, ಪಾಶ್ಚಿಮಾತ್ಯ ದೇಶಗಳ ಅನೇಕ ಪತ್ರಿಕೆಗಳಲ್ಲಿ ವರದಿಗಳು ಬಂದಿವೆ. ಆ ಸಮಯದಲ್ಲಿ, ಚೀನಾ ಮತ್ತು ತೈವಾನ್ ಅಧಿಕಾರಿಗಳು ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ನಿರಾಕರಿಸಿದರು. ಚೀನಾದ ನೌಕಾಪಡೆಯು ಪರಮಾಣು ಚಾಲಿತ ಜಲಾಂತರ್ಗಾಮಿ ಹಡಗಿನ ಅಪಘಾತ ಅನುಭವಿಸಿದೆ ಎಂದು ಅಮೆರಿಕದ ನೌಕಾ ತಜ್ಞ ಎಚ್‌ಐ ಸುಟ್ಟನ್ ಆಗಸ್ಟ್ 22 ರಂದು ಶಂಕೆ ವ್ಯಕ್ತಪಡಿಸಿದ್ದರು.

ಅದೇ ಸಮಯದಲ್ಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬ್ರಿಕ್ಸ್ ಸಭೆಗಳಲ್ಲಿ ಭಾಗವಹಿಸಿದ್ದರು. ಅವರು ಥಟ್ಟನೆ ಭಾಷಣದಿಂದ ಹಿಂದೆ ಸರಿದಿದ್ದರು. ಈ ಕ್ರಮದಲ್ಲಿ ಚೀನಾದ ವಾಣಿಜ್ಯ ಸಚಿವ ವಾಂಗ್ ವಾಕಿಂಗ್ ಅಧ್ಯಕ್ಷರ ಭಾಷಣದ ಪಠ್ಯವನ್ನು ಸಮ್ಮೇಳನದಲ್ಲಿ ಓದಿರುವ ವಿಚಾರ ಚರ್ಚೆಗೆ ಗ್ರಾಸವಾಯಿತು. ಈ ಜಲಾಂತರ್ಗಾಮಿ ಅಪಘಾತದ ವಿವರಗಳು ಬೆಳಕಿಗೆ ಬಂದ ನಂತರ ಕ್ಸಿ ಜಿನ್‌ಪಿಂಗ್ ಭಾಷಣದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿದವೆ.

ಇದನ್ನೂ ಓದಿ: ಭೀಕರ ಬಸ್ ಅಪಘಾತ: 21 ಮಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.