ETV Bharat / international

ಏಕಾಏಕಿ ಜನರ ಮೇಲೆ ಗುಂಡಿನ ದಾಳಿ... ಪೊಲೀಸ್​ ಅಧಿಕಾರಿ ಸೇರಿ ಐವರು ಸಾವು! - ಅಮೆರಿಕದಲ್ಲಿ ಗುಂಡಿನ ದಾಳಿಯ ಘಟನೆ

ಅಮೆರಿಕದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿ ಬಂದಿದೆ. ಉತ್ತರ ಕೆರೊಲಿನಾದಲ್ಲಿ ಕೊಲೆಗಡುಕನೊಬ್ಬ ಬಂದೂಕಿನಿಂದ ಅಟ್ಟಹಾಸ ಮೆರೆದಿದ್ದಾನೆ. ಈ ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಐವರು ಮೃತಪಟ್ಟಿದ್ದಾರೆ.

killed by shooter in Raleigh  off duty police officer killed in Raleigh  North Carolina shooting  North Carolina mayor on shooting  Carolina shooter suspect contained  killed by North Carolina shooter  ಅಮೆರಿಕದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು  ಏಕಾಏಕಿ ಜನರ ಮೇಲೆ ಗುಂಡಿನ ದಾಳಿ  ಪೊಲೀಸ್​ ಅಧಿಕಾರಿ ಸೇರಿ ಐವರು ಸಾವು  ಅಮೆರಿಕದಲ್ಲಿ ಗುಂಡಿನ ದಾಳಿಯ ಘಟನೆ  ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸೇರಿದಂತೆ ಐದು ಜನರು ಮೃತ
ಏಕಾಏಕಿ ಜನರ ಮೇಲೆ ಗುಂಡಿನ ದಾಳಿ
author img

By

Published : Oct 14, 2022, 9:49 AM IST

ಉತ್ತರ ಕೆರೊಲಿನಾ, ಅಮೆರಿಕ: ಅಮೆರಿಕದಲ್ಲಿ ಗುಂಡಿನ ದಾಳಿಯ ಘಟನೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್​ ಅಧಿಕಾರಿ ಸೇರಿ ಐವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ದಕ್ಷಿಣ ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸೇರಿದಂತೆ ಐದು ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮೇಯರ್ ತಿಳಿಸಿದರು.

ಮೇಯರ್ ಮೇರಿ-ಆನ್ ಬಾಲ್ಡ್ವಿನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ರೇಲಿ ನಗರಕ್ಕೆ ದುಃಖದ ಸುದ್ದಿ ಮತ್ತು ದುಃಖದ ದಿನವಾಗಿದೆ. ನಿನ್ನೆ ಸಂಜೆ 5 ಗಂಟೆಯ ನಂತರ ಹಲವಾರು ಜನರ ಮೇಲೆ ಗುಂಡಿನ ದಾಳಿ ನಡೆದಿದ್ದು, ಐದು ಜನರು ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬರು ಆಫ್ ಡ್ಯೂಟಿ ರೇಲಿ ಪೊಲೀಸ್ ಅಧಿಕಾರಿಯೂ ಸಾವನ್ನಪ್ಪಿದ್ದಾರೆ ಎಂದು ಮೇಯರ್​ ತಿಳಿಸಿದರು.

ಶಂಕಿತನನ್ನು ವಶಕ್ಕೆ ತೆಗೆದುಕೊಂಡ ಕೂಡಲೇ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ. ಗಾಯಗೊಂಡವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗನ್ ಫೈರಿಂಗ್ ಒಂದು ಪ್ರಮುಖ ಸಮಸ್ಯೆಯಾಗಿದ್ದು, 2021 ರಲ್ಲಿ ಸುಮಾರು 49,000 ಜನರು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಈ ಅಂಕಿ ಅಂಶ ಪ್ರಕಾರ ಪ್ರತಿದಿನ 130 ಕ್ಕೂ ಹೆಚ್ಚು ಜನರು ಗುಂಡಿನ ದಾಳಿಯಲ್ಲಿ ಮೃತಪಡುತ್ತಿದ್ದಾರೆ. ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿ ಕಂಡು ಬಂದಿವೆ.

ಓದಿ: ಬಿಜೆಪಿ ಮುಖಂಡನ ಮನೆಗೆ ನುಗ್ಗಿ ಗುಂಡಿನ ದಾಳಿ, ಪತ್ನಿ ಸಾವು.. ಯುಪಿ ಪೊಲೀಸರ ವಿರುದ್ಧ ಕೊಲೆ ಕೇಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.