ಕಠ್ಮಂಡು(ನೇಪಾಳ): ಸೋಮವಾರ ಮುಂಜಾನೆ ನೇಪಾಳದಲ್ಲಿ 4.1 ರ ತೀವ್ರತೆಯ ಭೂಕಂಪನ ಸಂಭವಿಸಿದೆ. ಇಲ್ಲಿನ ನಾಗರ್‌ಕೋಟ್‌ನಿಂದ 21 ಕಿಮೀ ದೂರದಲ್ಲಿ ಘಟನೆ ನಡೆದಿದೆ. ಭೂಕಂಪನದ ಕೇಂದ್ರವು 10.0 ಕಿಮೀ ಆಳದಲ್ಲಿದೆ ಮತ್ತು 27.907 ° ಉತ್ತರ ಅಕ್ಷಾಂಶ ಮತ್ತು 85.573 ° ಡಿಗ್ರಿ ಪೂರ್ವ ರೇಖಾಂಶದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಏಪ್ರಿಲ್ 25, 2015 ರಂದು ರಾಜಧಾನಿ ಕಠ್ಮಂಡು ಮತ್ತು ಪೋಖರಾ ನಗರದ ನಡುವೆ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಈ ಘಟನೆ 8,964 ಜನರ ಸಾವಿಗೆ ಕಾರಣವಾಗಿದ್ದು, 22,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ: ಕೊಡಗು, ಸುಳ್ಯದಲ್ಲಿ ಮತ್ತೆ ಭೂಕಂಪನ: ಭಾರೀ ಶಬ್ದದೊಂದಿಗೆ ನಡುಗಿದ ಭೂಮಿ - ವಿಡಿಯೋ