ETV Bharat / international

ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಡೆ : 34 ವಲಸಿಗರು ನಾಪತ್ತೆ

ಯುರೋಪಿಯನ್ ಕರಾವಳಿಗೆ ತೆರಳುತ್ತಿದ್ದ ದೋಣಿಯೊಂದು ಮುಳುಗಡೆಯಾಗಿ 34 ವಲಸಿಗರು ನಾಪತ್ತೆಯಾಗಿರುವ ಘಟನೆ ಟುನೀಶಿಯಾ ಆಗ್ನೇಯ ಕರವಾಳಿಯಲ್ಲಿ ನಡೆದಿದೆ.

34-migrants-missing-as-boat-capsizes-off-tunisias-coast
ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಡೆ : 34 ವಲಸಿಗರು ನಾಪತ್ತೆ
author img

By

Published : Mar 25, 2023, 2:23 PM IST

ಟುನಿಸ್ : ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮುಳುಗಡೆಯಾಗಿರುವ ಘಟನೆ ಟುನೀಶಿಯಾದ ಆಗ್ನೇಯ ಕರಾವಳಿಯಲ್ಲಿ ನಡೆದಿದೆ. ಈ ಅವಘಡದಲ್ಲಿ ಸುಮಾರು 34 ವಲಸಿಗರು ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಉಪ ಸಹಾರನ್ ದೇಶಗಳಿಂದ ಒಟ್ಟು 38 ವಲಸಿಗರನ್ನು ಹೊತ್ತು ಬರುತ್ತಿದ್ದ ದೋಣಿಯೊಂದು ಗುರುವಾರ ಮುಳುಗಡೆಯಾಗಿದೆ. ಮುಳುಗಡೆಯಾದ ದೋಣಿಯು ಟುನೀಶಿಯಾದ ಸ್ಫ್ಯಾಕ್ಸ್ ಪ್ರಾಂತ್ಯದಿಂದ ಯುರೋಪಿಯನ್ ಕರಾವಳಿಗೆ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ನಾಲ್ವರು ವಲಸಿಗರನ್ನು ರಕ್ಷಣೆ ಮಾಡಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ 48 ಗಂಟೆಗಳಲ್ಲಿ ಟುನೇಶಿಯಾದಿಂದ ಇಟಲಿಗೆ ಹೊರಟಿದ್ದ ಸುಮಾರು 56 ದೋಣಿಗಳನ್ನು ತಡೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ. ದೇಶವನ್ನು ತೊರೆಯಲು ಯತ್ನಿಸಿದ್ದ ಸುಮಾರು 3,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಟ್ಯುನಿಷಿಯನ್ ನ್ಯಾಷನಲ್ ಗಾರ್ಡ್‌ನ ಹೌಸೆಮ್ ಜೆಬಾಬ್ಲಿ ಮಾಹಿತಿ ನೀಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಒಟ್ಟು ಐದು ವಲಸಿಗರ ದೋಣಿ ಮುಳುಗಡೆಯಾಗಿದ್ದು, ಇವುಗಳು ಇಟಲಿಯತ್ತ ಸಾಗುತ್ತಿದ್ದವು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಟುನೇಶಿಯಾವು ವಲಸಿಗರಿಗೆ ಯುರೋಪ್‌ಗೆ ತೆರಳಲು ಪ್ರಮುಖ ಸ್ಥಳವಾಗಿ ಮಾರ್ಪಾಡಾಗಿದೆ.

ಯುಎನ್​ ಅಂಕಿ ಅಂಶಗಳ ಪ್ರಕಾರ, ಈ ವರ್ಷ ಇಟಲಿಗೆ ಆಗಮಿಸಿದ 12,000 ವಲಸಿಗರು ಟುನೀಶಿಯಾದಿಂದ ಆಗಮಿಸಿದ್ದಾರೆ ಎಂದು ಹೇಳಿದೆ. ಕಳೆದ ವರ್ಷ 1,300 ವಲಸಿಗರು ಇಲ್ಲಿಂದ ಇಟಲಿಗೆ ಪಲಾಯನ ಮಾಡಿದ್ದರು. ಕಳೆದ ತಿಂಗಳು, ಟುನೇಶಿಯಾದಲ್ಲಿ ವಾಸಿಸುವ ಉಪ ಸಹಾರನ್ ಆಫ್ರಿಕನ್ ವಲಸಿಗರು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ ಎಂದು ಟುನೀಶಿಯಾದ ಅಧ್ಯಕ್ಷ ಕೈಸ್ ಸೈದ್ ಅವರು ಆರೋಪಿಸಿದ್ದರು. ಇವರು ದೇಶಕ್ಕೆ ಅಪಾಯಕಾರಿ ಎಂದು ಹೇಳಿದ್ದರು.

ಕಳೆದ ವರ್ಷವೂ ಸಂಭವಿಸಿತ್ತು ದುರಂತ .. ಕಳೆದ ವರ್ಷ ಆಗಸ್ಟ್​ ನಲ್ಲಿ ದೋಣಿ ದುರಂತ ಸಂಭವಿಸಿದ್ದ ದೋಣಿ ದುರಂತದಲ್ಲಿ 11 ಜನ ಪ್ರಯಾಣಿಕರು ಮೃತಪಟ್ಟಿದ್ದರು. ಈ ಘಟನೆ ಆಗ್ನೇಯ ಟುನಿಶಿಯಾದ ಕೆರ್ಕೆನ್ನಾ ದ್ವೀಪದಲ್ಲಿ ಸಂಭವಿಸಿತ್ತು. ಮೃತರೆಲ್ಲರೂ ವಲಸಿಗರೆಂದು ತಿಳಿದುಬಂದಿತ್ತು.

ಇದನ್ನೂ ಓದಿ : ನೀರಿನ ಬಿಕ್ಕಟ್ಟು.. ಪಾಕಿಸ್ತಾನ ಅಸುರಕ್ಷಿತ ದೇಶ: ಯುಎನ್​ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.