ಥಾಯ್ಲೆಂಡ್: ಮಕ್ಕಳ ಡೇ ಕೇರ್ ಕೇಂದ್ರದ ಮೇಲೆ ಗುಂಡಿನ ದಾಳಿ ಮಾಡಿ ಕನಿಷ್ಠ 34 ಜನರನ್ನು ಹತ್ಯೆ ಮಾಡಿದ ದಾರುಣ ಘಟನೆ ಥಾಯ್ಲೆಂಡ್ನಲ್ಲಿ ನಡೆದಿದೆ. ಹತ್ಯೆಯಾದವರಲ್ಲಿ ಮಕ್ಕಳು ಮತ್ತು ವಯಸ್ಕರು ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈಶಾನ್ಯ ಥಾಯ್ಲೆಂಡ್ನ ನರ್ಸರಿಯೊಂದರಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 22 ಮಕ್ಕಳು ಸೇರಿ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದೇಶದ ನಾಂಗ್ ಬುವಾ ಲ್ಯಾಂಫು ಪ್ರಾಂತ್ಯದ ನಾ ಕ್ಲಾಂಗ್ ಜಿಲ್ಲೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ.
ಬಂದೂಕುಧಾರಿ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಅಪರಾಧ ಸ್ಥಳದಿಂದ ಪರಾರಿಯಾದ ಶಂಕಿತ ವ್ಯಕ್ತಿ ಗುಂಡು ಹಾರಿಸಿಕೊಂಡಿದ್ದಾನೆ ಎಂದೂ ವರದಿಯಾಗಿದೆ.
ಡೇ ಕೇರ್ ಸೆಂಟರ್ನಲ್ಲಿ ಗುಂಡಿನ ದಾಳಿ ನಡೆಸಿದ ದಾಳಿಕೋರ ಪನ್ಯಾ ಖಮ್ರಾಬ್ ಎನ್ನಲಾಗಿದೆ. ಅಪರಾಧ ಸ್ಥಳದಿಂದ ಪರಾರಿಯಾದ ಶಂಕಿತ ವ್ಯಕ್ತಿ ಗುಂಡು ಹಾರಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. 2021 ರಲ್ಲಿ ಡ್ರಗ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ ಪನ್ಯಾ ಅವರನ್ನು ಪೊಲೀಸ್ ಪಡೆಗಳಿಂದ ವಜಾಗೊಳಿಸಲಾಗಿದೆ ಎಂದು ಸ್ಥಳೀಯ ಪ್ರಕಟಣೆ ತಿಳಿಸಿದೆ
ಇದನ್ನು ಓದಿ:ಕುಡಿದ ಮತ್ತಲ್ಲಿ ಐಪಿಎಸ್ ಅಧಿಕಾರಿಗೇ ನಿಂದಿಸಿದ ವ್ಯಕ್ತಿ: ವಿಡಿಯೋ ನೋಡಿ