ETV Bharat / international

ಅಮೆರಿಕ ಚುನಾವಣೆ: ಭಾರತೀಯ ಮೂಲದ 10 ಮಂದಿ ಅಮೆರಿಕನ್ನರಿಗೆ ಗೆಲುವು

ಅಮೆರಿಕದಲ್ಲಿ ನಡೆದ ಸ್ಥಳೀಯ ಮತ್ತು ರಾಜ್ಯ ಚುನಾವಣೆಯಲ್ಲಿ ಭಾರತೀಯ ಮೂಲದ ಕನಿಷ್ಠ 10 ಮಂದಿ ಅಮೆರಿಕನ್ನರು ಗೆಲುವು ಸಾಧಿಸಿದ್ದಾರೆ. ಹೆಚ್ಚಿನವರು ಡೆಮೊಕ್ರಟಿಕ್​ ಪಕ್ಷದ ಸದಸ್ಯರಾಗಿದ್ದಾರೆ.

hyderabad-born-ghazala-hashmi-among-10-indian-americans-mostly-democrats-who-won-state-and-local-elections-in-us
ಅಮೆರಿಕ ಚುನಾವಣೆ : ಭಾರತೀಯ ಮೂಲದ 10 ಮಂದಿ ಅಮೆರಿಕನ್ನರಿಗೆ ಗೆಲುವು
author img

By ETV Bharat Karnataka Team

Published : Nov 9, 2023, 10:49 AM IST

ವಾಷಿಂಗ್ಟನ್​(ಅಮೆರಿಕ): ಅಮೆರಿಕದಲ್ಲಿ ನಡೆದ ರಾಜ್ಯ ಮತ್ತು ಸ್ಥಳೀಯ ಚುನಾವಣೆಯಲ್ಲಿ 10 ಮಂದಿ ಭಾರತೀಯ ಮೂಲದ ಅಮೆರಿಕನ್ನರು ಗೆಲುವು ಸಾಧಿಸಿದ್ದಾರೆ. ಗೆದ್ದವರಲ್ಲಿ ಹೆಚ್ಚಿನವರು ಡೆಮೋಕ್ರಟಿಕ್​ ಪಕ್ಷಕ್ಕೆ ಸೇರಿದವರು. ಭಾರತೀಯ ಅಮೆರಿಕನ್​ ಸಮುದಾಯವು ಒಟ್ಟು ಅಮೆರಿಕದ ಜನಸಂಖ್ಯೆಯಲ್ಲಿ ಶೇ.1ರಷ್ಟಿದ್ದು, ಇವರ ಗೆಲುವು ಭಾರತೀಯ ಸಮುದಾಯವು ಅಮೆರಿಕದಲ್ಲಿ ರಾಜಕೀಯ ಸಬಲೀಕರಣ ಹೊಂದುತ್ತಿರುವುದನ್ನು ಸೂಚಿಸುತ್ತದೆ.

ವರ್ಜಿನಿಯಾದಲ್ಲಿ ಹೈದರಾಬಾದ್​ ಮೂಲದ ಘಜಾಲಾ ಹಶ್ಮಿ ಮತ್ತೊಮ್ಮೆ ಸ್ಟೇಟ್​ ಸೆನೆಟ್​ ಆಗಿ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಘಜಾಲಾ ಅವರು ವರ್ಜಿನಿಯಾದಿಂದ ಆಯ್ಕೆಯಾದ ಮೊಟ್ಟ ಮೊದಲ ಭಾರತೀಯ ಅಮೆರಿಕನ್​ ಮಹಿಳೆಯಾಗಿದ್ದು, ವರ್ಜಿನಿಯಾದಿಂದ ಆಯ್ಕೆ ಆದ ಮೊದಲ ಮುಸ್ಲಿಂ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಸುಹಾಸ್​ ಸುಬ್ರಹ್ಮಣ್ಯಂ ಅವರು ವರ್ಜಿನಿಯಾದ ಸ್ಟೇಟ್​ ಸೆನೆಟ್​ ಆಗಿ ಆಯ್ಕೆ ಆಗಿದ್ದಾರೆ. ಇದಕ್ಕೂ ಮೊದಲು 2019 ಮತ್ತು 2021ರಲ್ಲಿ ಸೆನೆಟ್​ ಆಗಿ ಆಯ್ಕೆ ಆಗಿದ್ದರು. ಇವರು ಒಬಾಮಾ ಅವರ ಆಡಳಿತಾವಧಿಯಲ್ಲಿ ಶ್ವೇತ ಭವನದ ಮಾಜಿ ತಂತ್ರಜ್ಞಾನ ನೀತಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ವರ್ಜಿನಿಯಾದಿಂದ ಆಯ್ಕೆಯಾದ ಮೊದಲ ಹಿಂದೂ ಸೆನೆಟ್​ ಇವರಾಗಿದ್ದಾರೆ. ಉದ್ಯಮಿ ಕಣ್ಣನ್​ ಶ್ರೀನಿವಾಸನ್​ ಭಾರತೀಯ ಅಮೆರಿಕನ್​ ಜನರು ಹೆಚ್ಚಿರುವ ಲೌಂಡನ್​ ಕೌಂಟಿ ಕ್ಷೇತ್ರದಿಂದ ಗೆದ್ದಿದ್ದು, ವರ್ಜಿನಿಯಾದಿಂದ ಗೆದ್ದು ಬಂದ ಮೂವರು ಡೆಮೋಕ್ರಟಿಕ್​ ಪಕ್ಷದ ಸದಸ್ಯರಾಗಿದ್ದಾರೆ.

ನ್ಯೂಜೆರ್ಸಿಯಲ್ಲಿ ಡೆಮೋಕ್ರಟಿಕ್​ ಪಕ್ಷದ ವಿನ್ ಗೋಪಾಲ್​ ಮತ್ತು ರಾಜ್ ಮುಖರ್ಜಿ ಅವರು ಗೆಲುವು ಸಾಧಿಸಿ, ಸ್ಟೇಟ್​ ಸೆನೆಟ್​ ಆಗಿ ಆಯ್ಕೆ ಆಗಿದ್ದಾರೆ. ಬಲ್ವಿರ್​ ಸಿಂಗ್​ ನ್ಯೂಜೆರ್ಸಿಯ ಬರ್ಲಿಂಗ್​ ಟನ್​ ಕೌಂಟಿಯಿಂದ ಸ್ಪರ್ಧಿಸಿ ಕಮಿಷನರ್​ ಸ್ಥಾನಕ್ಕೆ ಮರು ಆಯ್ಕೆಯಾಗಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಡೆಮಾಕ್ರಟಿಕ್ ಪಕ್ಷದ ನೀಲ್ ಮಖಿಜಾ ಅವರು ಮಾಂಟ್‌ಗೊಮೆರಿ ಕೌಂಟಿ ಕಮಿಷನರ್‌ ಸ್ಥಾನಕ್ಕೆ ಆಯ್ಕೆಯಾದರು. ಇಂಡಿಯನ್-ಅಮೆರಿಕನ್ ವೈದ್ಯೆ ಡಾ. ಅನಿತಾ ಜೋಶಿ ಅವರು ಇಂಡಿಯಾನಾದ ಕಾರ್ಮೆಲ್ ಸಿಟಿ ಕೌನ್ಸಿಲ್ ಸ್ಥಾನ ಗೆದ್ದರು.

ಅಮೆರಿಕದಲ್ಲಿ ಹುಟ್ಟಿ ಬೆಳೆದ ಭಾರತೀಯ ಮೂಲದ ಪ್ರಿಯ ತಮಿಳರಸನ್ ಓಹಿಯೋದ ಗಹನ್ನಾ ಸಿಟಿ ಅಟಾರ್ನಿ ಚುನಾವಣೆ ಗೆಲುವು ಸಾಧಿಸಿದರು. ಜಿಂಬಾಬ್ವೆಯಿಂದ ವಲಸೆ ಬಂದ ಭಾರತೀಯ ಮೂಲದ ಅರುಣನ್ ಅರುಲಂಪಾಲಂ ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್‌ನ ಮೇಯರ್ ಆಗಿ ಆಯ್ಕೆಯಾದರು. ಬಳಿಕ ಪ್ರಮಾಣವಚನ ಸ್ವೀಕರಿಸಿದ ಅಭ್ಯರ್ಥಿಗಳು ಜನರ ಅಭಿವೃದ್ಧಿಗಾಗಿ, ದೇಶದ ಅಭಿವೃದ್ಧಿಗಾಗಿ ದುಡಿಯುವುದಾಗಿ ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಮಹಿಳೆಯರ ಪರ ನಿಲ್ಲುತ್ತಾರೆ, ಭಾರತದ ಅತ್ಯುತ್ತಮ ನಾಯಕ: ಅಮೆರಿಕದ ಗಾಯಕಿ ಮೇರಿ ಮಿಲ್ಬನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.