ಅಬುಧಾಬಿ: ತನ್ನ ಗಂಡನ ಫೋನ್‌ಗಳಲ್ಲಿ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಮತ್ತು ಆತನ ಖಾಸಗಿತನಕ್ಕೆ ಧಕ್ಕೆ ತಂದಿದ್ದಕ್ಕಾಗಿ ಅರಬ್ ಮಹಿಳೆಯೊಬ್ಬರಿಗೆ 1 ಲಕ್ಷ ರೂ. ದಂಡ ಪಾವತಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೋರ್ಟ್ ಆದೇಶಿಸಿದೆ.
ನನ್ನ ವೈಯಕ್ತಿಕ ಫೋಟೋಗಳನ್ನು ರಹಸ್ಯವಾಗಿ ನನ್ನ ಮೊಬೈಲ್ನಿಂದ ಕದ್ದು, ಕುಟುಂಬಸ್ಥರಿಗೆ ಕಳುಹಿಸಿಕೊಟ್ಟಿದ್ದಾಳೆ. ಇದರಿಂದ ನನ್ನ ಪ್ರತಿಷ್ಠೆಗೆ ಧಕ್ಕೆಯಾಗಿದೆ, ಉದ್ಯೋಗವನ್ನು ಕಳೆದುಕೊಂಡಿದ್ದೇನೆ. ಅಲ್ಲದೇ ಮಾನಸಿಕವಾಗಿ ಕುಗ್ಗಿದ್ದೇನೆ ಎಂದು ಆರೋಪಿಸಿ ಪರಿಹಾರ ಒದಗಿಸಿಕೊಡುವಂತೆ ಕೋರಿ ಪತಿಯು ಸಂಯುಕ್ತ ಅರಬ್ ಸಂಸ್ಥಾನದ (ಯುನೈಟೆಡ್ ಅರಬ್ ಎಮಿರೇಟ್ಸ್ - ಯುಎಇ) ರಸ್ ಅಲ್ ಖೈಮಾದಲ್ಲಿನ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ಇದನ್ನೂ ಓದಿ: ಬಾಂಗ್ಲಾ ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ಪತ್ತೆಗಾಗಿ ಕೇರಳಕ್ಕೆ ತೆರಳಿದ ಸ್ಪೆಷಲ್ ಟೀಂ
ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್, ಆರ್ಥಿಕ ಪರಿಹಾರ ಪಡೆಯಲು ಸಂತ್ರಸ್ತ ಪತಿಯು ಅರ್ಹ ಎಂದು ಅಭಿಪ್ರಾಯಪಟ್ಟಿದ್ದು, ಆತನಿಗೆ ಒಂದು ಲಕ್ಷ ರೂ. ನೀಡುವಂತೆ ಪತ್ನಿಗೆ ಸೂಚಿಸಿದೆ. ಮಹಿಳೆಯ ಪರ ವಕೀಲರು, ಆತ ಹೆಂಡತಿ ಹಾಗೂ ಮಗಳನ್ನು ಮನೆಯಿಂದ ಹೊರಹಾಕಿದ್ದನು ಎಂದು ಆರೋಪಿಸಿದರೂ ಸಾಕ್ಷ್ಯಾಧಾರಗಳಿಲ್ಲದ ಕಾರಣ ಇದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಂಡಿಲ್ಲ.