ETV Bharat / international

ಅಮೆರಿಕ, ಮಿತ್ರ ರಾಷ್ಟ್ರಗಳಿಂದ ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧ - ರಷ್ಯಾ ಮೇಲೆ ನಿರ್ಬಂಧ

ಆಯ್ದ ರಷ್ಯಾ ಬ್ಯಾಂಕ್​ಗಳನ್ನು ಸ್ವಿಫ್ಟ್​ನಿಂದ ಹೊರ ಹಾಕುವುದಾಗಿ ನಿರ್ಧರಿಸಿದ್ದೇವೆ. ಇದರಿಂದ ಈ ಬ್ಯಾಂಕ್​ಗಳು ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರ ಸಂಪರ್ಕ ಕಡಿದುಕೊಳ್ಳಲಿವೆ ಎಂದು ಯುರೋಪಿಯನ್ ಕಮಿಷನ್, ಫ್ರಾನ್ಸ್, ಜರ್ಮನಿ, ಇಟಲಿ, ಯುಕೆ, ಕೆನಡಾ ಮತ್ತು ಅಮೆರಿಕ ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ.

remove Russian banks from Swift
remove Russian banks from Swift
author img

By

Published : Feb 27, 2022, 9:54 AM IST

ವಾಷಿಂಗ್ಟನ್: ಉಕ್ರೇನ್ ಮೇಲಿನ ಯುದ್ಧ ಖಂಡಿಸಿ ರಷ್ಯಾ ಮೇಲಿನ ನಿರ್ಬಂಧಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಇದೀಗ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾ ಬ್ಯಾಂಕ್​ಗಳನ್ನು ಸ್ವಿಫ್ಟ್ (SWIFT ಅಂದ್ರೆ ಸೊಸೈಟಿ ಆಫ್ ವರ್ಲ್ಡ್​ವೈಡ್ ಇಂಟರ್​ಬ್ಯಾಂಕ್ ಫೈನಾನ್ಶಿಯಲ್ ಟೆಲಿಕಮ್ಯುನಿಕೇಷನ್) ವ್ಯವಸ್ಥೆಯಿಂದ ಹೊರಹಾಕುವುದಾಗಿ ಘೋಷಿಸಿವೆ. ಸ್ವಿಫ್ಟ್ ಮೆಸೇಜಿಂಗ್ ರಷ್ಯಾದ ಪ್ರಮುಖ ಆದಾಯ ಮೂಲಗಳಲ್ಲಿ ಒಂದು.

ಆಯ್ದ ರಷ್ಯಾ ಬ್ಯಾಂಕ್​ಗಳನ್ನು ಸ್ವಿಫ್ಟ್​ನಿಂದ ಹೊರ ಹಾಕುವುದಾಗಿ ನಿರ್ಧರಿಸಿದ್ದೇವೆ. ಇದರಿಂದ ಈ ಬ್ಯಾಂಕ್​ಗಳು ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರ ಸಂಪರ್ಕ ಕಡಿದುಕೊಳ್ಳಲಿವೆ ಎಂದು ಯುರೋಪ್ ಕಮಿಷನ್, ಫ್ರಾನ್ಸ್, ಜರ್ಮನಿ, ಇಟಲಿ, ಯುಕೆ, ಕೆನಡಾ ಮತ್ತು ಅಮೆರಿಕ ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ.

ರಷ್ಯಾ ಬ್ಯಾಂಕುಗಳ ವ್ಯವಹಾರ ಮತ್ತು ಆಸ್ತಿಯನ್ನು ಫ್ರೀಜ್ ಮಾಡುತ್ತೇವೆ. ಈ ಮೂಲಕ ರಷ್ಯಾದ ಕೇಂದ್ರ ಬ್ಯಾಂಕುಗಳನ್ನು ದುರ್ಬಲಗೊಳಿಸಲು ಒಪ್ಪಿಕೊಂಡಿದ್ದೇವೆ. ಹಾಗೆಯೇ ಯುಕ್ರೇನ್​ನಲ್ಲಿನ ರಷ್ಯಾದ ಯುದ್ಧಕ್ಕೆ ಸಹಾಯ ಮಾಡುವ ವ್ಯಕ್ತಿ ಮತ್ತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. ಹಾಗೆಯೇ ರಷ್ಯಾದ ಸಿರಿವಂತರಿಗೆ ಕೊಡುತ್ತಿದ್ದ ಗೋಲ್ಡನ್ ಪಾಸ್​ಪೋರ್ಟ್ ಮೇಲೂ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಯುರೋಪ್ ಕಮಿಷನ್​ನ ಅಧ್ಯಕ್ಷ ಉರ್ಸುಲಾ ವನ್ ಡರ್ ಲೆಯೆನ್ ಹೇಳಿದ್ದಾರೆ.

ಸ್ವಿಫ್ಟ್ ಮೂಲಕ ಜಗತ್ತಿನ ಯಾವುದೇ ಬ್ಯಾಂಕ್​ ಜೊತೆಗೂ ವ್ಯವಹಾರ ಮಾಡಬಹುದು. ಸ್ವಿಫ್ಟ್​ನಿಂದ ಕೂಡ ರಷ್ಯಾಗೆ ಉತ್ತಮ ಆದಾಯ ಸಿಗುತ್ತಿದೆ.

ಇದನ್ನೂ ಓದಿ: ಉಕ್ರೇನ್‌ನ ಗ್ಯಾಸ್‌ ಪೈಪ್‌ಲೈನ್‌ ಸ್ಫೋಟಿಸಿದ ರಷ್ಯಾ; ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾದ ಜರ್ಮನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.