ETV Bharat / international

ಭಾರತದಿಂದ ಬರುವ ಪ್ರಯಾಣಿಕರಿಗೆ 'ಸ್ಥಳದಲ್ಲೇ ವೀಸಾ ಸೌಲಭ್ಯ' ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಯುಎಇ! - ವೀಸಾ ಆನ್​​ ಅರೈವಲ್​

ಭಾರತದಲ್ಲಿ 3ನೇ ಹಂತದ ಕೊರೊನಾ ವೈರಸ್ ಭೀತಿ ಇರುವ ಬೆನ್ನಲ್ಲೇ ಯುಎಇ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತದಿಂದ ಅಲ್ಲಿಗೆ ಪ್ರಯಾಣ ಬೆಳೆಸಲು ಕೋವಿಡ್ ವರದಿ ಕಡ್ಡಾಯವಾಗಿದೆ.

UAE
UAE
author img

By

Published : Aug 24, 2021, 10:38 PM IST

ದುಬೈ: ಭಾರತದಿಂದ ಬರುವ ಪ್ರಯಾಣಿಕರಿಗೆ ಸ್ಥಳದಲ್ಲೇ ನೀಡಲಾಗುತ್ತಿದ್ದ ವೀಸಾ ಆನ್​ ಅರೈವಲ್(visa-on-arrival)​​ ವೀಸಾ ಸ್ಥಗಿತಗೊಳಿಸಿ ಯುಎಇ ಆದೇಶ ಹೊರಡಿಸಿದೆ. ಇದರ ಜೊತೆಗೆ ಕಳೆದ 14 ದಿನಗಳಲ್ಲಿ ಭಾರತದಿಂದ ಬರುವ ಪ್ರಯಾಣಿಕರಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಏರ್​​ವೇಯ್ಸ್​ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.

ನಮ್ಮ ವೆಬ್​ಸೈಟ್​ ಅಪ್ಡೇಟ್​ ಮಾಡಲು ನಾವು ಇದೀಗ ಪ್ರಯತ್ನಿಸುತ್ತಿದ್ದು, ಅದೇ ಕಾರಣಕ್ಕಾಗಿ ಭಾರತ ಸೇರಿದಂತೆ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಆಫ್ಘಾನಿಸ್ತಾನ ಪ್ರಯಾಣಿಕರಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಅದು ತಿಳಿಸಿದೆ.

  • Saudi Arabia authorities have announced that Indian nationals who have travelled to India after receiving both doses of vaccine in Saudi Arabia will be able to return to the Kingdom directly without need for quarantine in a third country: Indian Embassy in Saudi Arabia pic.twitter.com/A5ti7TMBHP

    — ANI (@ANI) August 24, 2021 " class="align-text-top noRightClick twitterSection" data=" ">

ಇದರ ಜೊತೆಗೆ ಯುಎಇಗೆ ಪ್ರಯಾಣ ಬೆಳೆಸಲು ಕೋವಿಡ್​-19 ನೆಗೆಟಿವ್​ ವರದಿ ಕಡ್ಡಾಯವಾಗಿರಬೇಕು. ಅದು ಕೇವಲ 6 ಗಂಟೆಗೂ( ವಿಮಾನ ಹತ್ತುವುದಕ್ಕೂ ಆರು ಗಂಟೆ) ಹೆಚ್ಚು ಹಳೆಯದಾಗಿರಬಾರದು ಎಂದಿದೆ. ಭಾರತದಲ್ಲಿ ಮೂರನೇ ಹಂತದ ಕೋವಿಡ್ ಅಲೆ ಭೀತಿ ಹಿನ್ನೆಲೆಯಲ್ಲಿ ಈ ರೀತಿಯ ನಿರ್ಧಾರ ಕೈಗೊಂಡಿದೆ ಎಂಬ ಮಾತು ಸಹ ಕೇಳಿ ಬರಲು ಶುರುವಾಗಿವೆ.

70 ವರ್ಷದಲ್ಲಿ ಸೃಷ್ಟಿಸಲಾಗಿದ್ದ ಆಸ್ತಿ ಇದೀಗ ಮಾರಾಟ..ರಾಹುಲ್​ ಹೇಳಿಕೆಗೆ ಸ್ಮೃತಿ ಇರಾನಿ ತಿರುಗೇಟು!

ಭಾರತದಲ್ಲಿ ಎರಡನೇ ಹಂತದ ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಯುಎಇ ಸೇರಿದಂತೆ ಅನೇಕ ದೇಶಗಳು ಭಾರತದಿಂದ ವಿಮಾನ ಹಾರಾಟ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ್ದವು. ಇದೀಗ ಆಗಸ್ಟ್​ 2ರಿಂದ ಯುಎಇಗೆ ಭಾರತದಿಂದ ವಿಮಾನಯಾನ ಹಾರಾಟ ಪುನಾರಂಭಗೊಂಡಿತ್ತು. ಇದರ ಬೆನ್ನಲ್ಲೇ ಅಲ್ಲಿನ ಸರ್ಕಾರ ಈ ರೀತಿಯ ನಿಯಮ ಜಾರಿಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.