ಸಿಡ್ನಿ : ನೌಕರರ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡದ ಸಂಸ್ಥೆಗಳಲ್ಲಿ ಕೆಲಸ ಮಾಡುವುದರಿಂದ ಖಿನ್ನತೆಯಿಂದ ಬಳಲುವ ಅಪಾಯ ಪ್ರತಿಶತ ಮೂರು ಪಟ್ಟು ಹೆಚ್ಚಾಗಲಿದೆ ಎಂದು ಅಧ್ಯಯನವೊಂದು ಕಂಡು ಕೊಂಡಿದೆ. ಹೆಚ್ಚು ಸಮಯ ಕೆಲಸ ಮಾಡುವಾಗ ಹೃದಯ ಸಂಬಂಧಿ ಕಾಯಿಲೆಯಿಂದ ಸಾಯುವುದು ಅಥವಾ ಪಾರ್ಶ್ವವಾಯು(stroke) ಉಂಟಾಗುವುದು ಅಪಾಯಕಾರಿ ಅಂಶವಾಗಿದೆ. ಕಳಪೆ ನಿರ್ವಹಣಾ ಕ್ರಮಗಳು ಖಿನ್ನತೆಗೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತವೆ ಎಂದು ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ತಮ್ಮ ಉದ್ಯೋಗಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಲು ವಿಫಲವಾದ ಕಂಪನಿಗಳು, ತನ್ನ ಕಾರ್ಮಿಕರಿಗೆ ಇಲ್ಲಸಲ್ಲದ ಬೇಡಿಕೆಗಳನ್ನು ಮುಂದಿಟ್ಟು ಮಾನಸಿಕ ಕಿರುಕುಳ ನೀಡುವುದು ಮತ್ತು ಅವರಿಗೆ ಸ್ವಾಯತ್ತತೆಯನ್ನು ನೀಡದಿರುವ ಕಂಪನಿಗಳು ತಮ್ಮ ಸಿಬ್ಬಂದಿಯನ್ನು ಖಿನ್ನತೆಯ ಹೆಚ್ಚಿನ ಅಪಾಯಕ್ಕೆ ಸಿಲುಕಿಸುತ್ತಿವೆ ಎಂದು ಪುರಾವೆಗಳು ತೋರಿಸುತ್ತವೆ ಎಂದು ಸಂಶೋಧಕ ಜಡೊವ್ ಹೇಳಿದ್ದಾರೆ.
ಉತ್ಸಾಹಿ ಉದ್ಯೋಗಿಗಳು ಮತ್ತು ಬದ್ಧತೆಯುಳ್ಳ ಕಾರ್ಮಿಕರು ಮೌಲ್ಯಯುತವಾಗಿದ್ದರೂ, ಹೆಚ್ಚು ಸಮಯ ಕೆಲಸ ಮಾಡುವುದು ಅವರ ಖಿನ್ನತೆಗೆ ಕಾರಣವಾಗಬಹುದು, ಇದು ವಿಶ್ವಾದ್ಯಂತ ಅಂದಾಜು 300 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ. ಪುರುಷರು ತಮ್ಮ ಕೆಲಸದ ಮಧ್ಯೆ ಅವರ ಮಾನಸಿಕ ಆರೋಗ್ಯದ ಬಗ್ಗೆ ಕಡಿಮೆ ಗಮನ ಹರಿಸಿದರೆ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ.
ಕಾರ್ಮಿಕರ ಮಾನಸಿಕ ಆರೋಗ್ಯವನ್ನು ಬೆಂಬಲಿಸುವಲ್ಲಿ ಕಂಪನಿಗಳು ವಿಫಲವಾದ ಕಾರಣ ಅವು ನಷ್ಟ ಅನುಭವಿಸಬಹುದು ಮತ್ತು ಕೆಲಸದ ಸ್ಥಳದ ಬೆದರಿಸುವಿಕೆ ಸಹ ಸಂಬಂಧಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕಡಿಮೆ ಮಾನಸಿಕ ಸಾಮಾಜಿಕ ಸುರಕ್ಷತಾ ವಾತಾವರಣ(ಪಿಎಸ್‌ಸಿ),ಭಾವನಾತ್ಮಕ ಬಳಲಿಕೆ. ಇದರ ಪ್ರಮುಖ ಮುನ್ಸೂಚಕ ಎಂದು ಸಂಶೋಧನೆ ಹೇಳಿದೆ. ಪಿಎಸ್‌ಸಿ ಎನ್ನುವುದನ್ನು ಕಾರ್ಮಿಕರ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವ ನಿರ್ವಹಣಾ ಕ್ರಮಗಳು ಮತ್ತು ಸಂವಹನ ಮತ್ತು ಭಾಗವಹಿಸುವಿಕೆ ವ್ಯವಸ್ಥೆಗಳನ್ನು ವಿವರಿಸಲು ಬಳಸಲಾಗುತ್ತದೆ.
ಕೆಲಸದ ಸ್ಥಳದಲ್ಲಿ ನೀಡುವ ಕಿರುಕುಳ ಉದ್ಯೋಗಿಗಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದು ನಾವು ಕಂಡು ಕೊಂಡಿದ್ದೇವೆ. ಒಂದೇ ಘಟಕ ಅಥವಾ ಕಂಪನಿಯಲ್ಲಿರುವ ಪ್ರತಿಯೊಬ್ಬರೂ ಇದರ ಪರಿಣಾಮವಾಗಿ ನಷ್ಟ ಅನುಭವಿಸುವುದು ಸಾಮಾನ್ಯವಾಗುತ್ತದೆ.
ಮಾನಸಿಕ ಕಿರುಕುಳ ಏಕೆ ಸಂಭವಿಸುತ್ತದೆ ಎಂಬುದನ್ನು ಅಧ್ಯಯನವು ತನಿಖೆ ಮಾಡಿದೆ. ಕೆಲವೊಮ್ಮೆ ಒತ್ತಡವು ಮಾನಸಿಕ ಕಿರುಕುಳಕ್ಕೆ ಪ್ರಚೋದಕವಾಗಿದೆ ಮತ್ತು ಕೆಟ್ಟ ಸಂದರ್ಭಗಳಲ್ಲಿ ಇದು ತಂಡದ ಇತರ ಸದಸ್ಯರಿಗೆ 'ಸ್ವೀಕಾರಾರ್ಹ' ಮಟ್ಟದ ಪರಿಣಾಮ ಬೀರುತ್ತದೆ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಆರೋಗ್ಯದ ಬಗ್ಗೆ ಕಂಪನಿಯು ಬದ್ಧತೆಯಿಂದ ಕಿರುಕುಳವನ್ನು ನಿರ್ವಹಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.