ETV Bharat / international

ಆಫ್ಘನ್​ನಲ್ಲಿ ತಾಲಿಬಾನ್ ಜಯ: ಭಯೋತ್ಪಾದಕ ಸಂಘಟನೆಗಳಿಗೆ ಮತ್ತಷ್ಟು ಬಲ - ಅಫ್ಘಾನ್​​ನಲ್ಲಿ ತಾಲಿಬಾನ್ ಆಡಳಿತದ ಪರಿಣಾಮ

ಕೆಲವು ವರ್ಷಗಳ ಹಿಂದೆ ಪರಸ್ಪರ ಶತ್ರುಗಳಾಗಿದ್ದ ಐಸಿಸ್, ತಾಲಿಬಾನ್ ಮತ್ತು ಆಲ್​ಖೈದಾ ನಾಯಕರು ಹಳೆಯ ಸಂಘರ್ಷವನ್ನು ಮುಂದುವರೆಸದೇ ಒಟ್ಟಾಗಿ, ಶತ್ರು ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗೈಡೊ ಸ್ಟೈನ್‌ಬರ್ಗ್ ಹೇಳಿದ್ದಾರೆ.

Taliban victory could be a boost for extremists in Middle East
ಆಫ್ಘನ್​ನಲ್ಲಿ ತಾಲಿಬಾನ್ ಜಯ: ಭಯೋತ್ಪಾದಕ ಸಂಘಟನೆಗಳಿಗೆ ಮತ್ತಷ್ಟು ಬಲ
author img

By

Published : Aug 20, 2021, 4:50 AM IST

ಕಾಬೂಲ್, ಅಫ್ಘಾನಿಸ್ತಾನ: ತಾಲಿಬಾನ್ ಆಫ್ಘಾನಿಸ್ತಾವನ್ನು ವಶಕ್ಕೆ ಪಡೆದಿರುವುದು ಮಧ್ಯಪ್ರಾಚ್ಯದ ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಮತ್ತಷ್ಟು ಧೈರ್ಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಯೋತ್ಪಾದಕ ಸಂಘಟನೆಗಳಲ್ಲಿ ಈ ಬೆಳವಣಿಗೆಯಿಂದ ಹೊಸ ಒಕ್ಕೂಟಗಳು ಸೃಷ್ಟಿಯಾಗಲಿದ್ದು, ವಿವಿಧ ದೇಶಗಳ ಮೇಲೆ ಭಯೋತ್ಪಾದಕ ದಾಳಿಯ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂಬ ಅಂತಾರಾಷ್ಟ್ರೀಯ ರಾಜಕಾರಣದ ವಿಶ್ಲೇಷಣೆಯೊಂದು ನಡೆಯುತ್ತಿದೆ.

ಇಸ್ಲಾಮಿಕ್ ಸ್ಟೇಟ್ಸ್​​, ಅಲ್-ಖೈದಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಇತರ ಸಣ್ಣ ಭಯೋತ್ಪಾದಕ ಸಂಘಟನೆಗಳು ಬಲಗೊಳ್ಳುತ್ತವೆ ಎಂದು ಭಯೋತ್ಪಾದನಾ ತಜ್ಞ ಮತ್ತು ಸಂಶೋಧಕ ಗೈಡೊ ಸ್ಟೈನ್‌ಬರ್ಗ್ ಆತಂಕ ವ್ಯಕ್ತಪಡಿಸಿದ್ದಾರೆ.

ತಾಲಿಬಾನಿಗಳು ಈಗ ಅಮೆರಿಕನ್ನು ಸೋಲಿಸಿದ್ದು, ಜಿಹಾದಿಗಳು, ಸಲಫಿಸ್ಟರು ಮತ್ತು ಇತರ ಗುಂಪುಗಳೂ ಕೂಡಾ ಅಮೆರಿಕರನ್ನು ಸೋಲಿಸಬಹುದು ಎಂಬ ಮನೋಭಾವನೆ ಭಯೋತ್ಪಾದನಾ ಸಂಘಟನೆಗಳಲ್ಲಿ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಪರಸ್ಪರ ಶತ್ರುಗಳಾಗಿದ್ದ ಐಸಿಸ್, ತಾಲಿಬಾನ್ ಮತ್ತು ಆಲ್​ಖೈದಾ ನಾಯಕರು ಹಳೆಯ ಸಂಘರ್ಷವನ್ನು ಮುಂದುವರೆಸದೇ ಒಟ್ಟಾಗಿ, ಶತ್ರು ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗೈಡೊ ಸ್ಟೈನ್‌ಬರ್ಗ್ ಹೇಳಿದ್ದಾರೆ.

ಈಗಾಗಲೇ ಯೆಮನ್‌ನಲ್ಲಿ ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ಸ್​ ನಡುವೆ ಯಾವುದೇ ಹೋರಾಟ ನಡೆಯದಂತೆ ರಾಜಿ ಮಾಡಿಕೊಳ್ಳಲಾಗಿದೆ. ಬಿನ್ ಲಾಡೆನ್ ಹತ್ಯೆಯ ನಂತರ ಅಲ್​ಖೈದಾ ನಿಷ್ಕ್ರಿಯವಾದಂತೆ ಜನರಿಗೆ ಅನ್ನಿಸುತ್ತದೆ.

ಆದರೆ ಹಲವಾರು ದಾಖಲೆಗಳು ಮತ್ತು ತನಿಖೆಯ ಪ್ರಕಾರ ಅಲ್​ಖೈದಾ ತಾಲಿಬಾನ್ ಅನ್ನು ಬೆಂಬಲಿಸುತ್ತಿದೆ. ಮುಂದಿನ ದಿನಗಳಲ್ಲಿ ತಾಲಿಬಾನ್ ಐಸಿಸ್​ನೊಂದಿಗೆ ಒಪ್ಪಂದ ಮಾಡಿಕೊಂಡರೂ ಅಚ್ಚರಿ ಪಡಬೇಕಿಲ್ಲ ಎಂದು ಭಯೋತ್ಪಾದನಾ ಸಂಶೋಧಕ ಜಸ್ಸಿಮ್ ಮಹಮದ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅರ್ಜಿಗಳಿರುವ ಭಾಷೆಯಲ್ಲೇ ಉತ್ತರಿಸಿ, ಹಿಂದಿಯಲ್ಲಿ ಅಲ್ಲ: ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಚಾಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.