ETV Bharat / international

22 ವರ್ಷಗಳ ಬಳಿಕ ಮೊದಲ ಬಾರಿ ದಕ್ಷಿಣ ಕೊರಿಯಾ ಆರ್ಥಿಕತೆ ಕುಸಿತ

2020ರ ದೇಶದ ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) 2019ಕ್ಕಿಂತ ಶೇ 1 ರಷ್ಟು ಕುಗ್ಗಿದ್ದು, 1998ರ ನಂತರ ಮೊದಲ ಬಾರಿ ದಕ್ಷಿಣ ಕೊರಿಯಾ ಆರ್ಥಿಕತೆಯಲ್ಲಿ ಕುಸಿತ ಕಂಡಿದೆ.

South Korea economy shrank in 2020 for 1st time in 22 years
ದಕ್ಷಿಣ ಕೊರಿಯಾ
author img

By

Published : Mar 4, 2021, 2:45 PM IST

ಸಿಯೋಲ್: ಸೇವಾ ವಲಯದ ಉದ್ಯೋಗಗಳನ್ನು ಕೋವಿಡ್​ ಸಾಂಕ್ರಾಮಿಕ ನಾಶಪಡಿಸಿದ್ದರಿಂದ 22 ವರ್ಷಗಳ ಬಳಿಕ 2020ರಲ್ಲಿ ಮೊದಲ ಬಾರಿಗೆ ದೇಶದ ಆರ್ಥಿಕತೆ ಕುಸಿತವಾಗಿದೆ ಎಂದು ದಕ್ಷಿಣ ಕೊರಿಯಾದ ಕೇಂದ್ರ ಬ್ಯಾಂಕ್ (ಬ್ಯಾಂಕ್ ಆಫ್ ಕೊರಿಯಾ) ಹೇಳಿದೆ.

ಬ್ಯಾಂಕ್ ಆಫ್ ಕೊರಿಯಾ ಗುರುವಾರ ಬಿಡುಗಡೆ ಮಾಡಿದ ಪ್ರಾಥಮಿಕ ಮಾಹಿತಿ ಪ್ರಕಾರ, ಕಳೆದ ವರ್ಷ ದೇಶದ ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) 2019ಕ್ಕಿಂತ ಶೇ 1 ರಷ್ಟು ಕುಗ್ಗಿದೆ. 1998ರ ನಂತರ ಮೊದಲ ಬಾರಿ ದೇಶವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಹೊಸ ವ್ಯಾಪಾರ ನಿಯಮ: ಯುರೋಪಿಯನ್​ ಒಕ್ಕೂಟ, ಬ್ರಿಟನ್​ ಮಧ್ಯೆ ಟ್ರೇಡ್​ ವಾರ್! ​

ತಂತ್ರಜ್ಞಾನ ಪರಿಣತರು ಇಲ್ಲದಿದ್ದರೆ ದೇಶದ ಆರ್ಥಿಕತೆಗೆ ಇನ್ನೂ ಹೊಡೆತ ಬೀಳುತ್ತಿತ್ತು. ಏಕೆಂದರೆ ಸಾಂಕ್ರಾಮಿಕ ರೋಗದ ನಡುವೆಯೇ ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಮನೆಯಲ್ಲಿಯೇ ಕುಳಿತು (ವರ್ಕ್ ಫ್ರಮ್​ ಹೋಂ) ಕೆಲಸ ಮಾಡಿದ್ದಾರೆ. ಇವೆಲ್ಲವೂ ಸಾಧ್ಯವಾಗಿದ್ದು ತಂತ್ರಜ್ಞಾನದ ಮೂಲಕ ಎಂದು ಬ್ಯಾಂಕ್​ ತಿಳಿಸಿದೆ.

ದಕ್ಷಿಣ ಕೊರಿಯಾದಲ್ಲಿ ಈವರೆಗೆ 91,240 ಮಂದಿಗೆ ಕೊರೊನಾ ಸೋಂಕು ಅಂಟಿದ್ದು, 1,619 ಸಾವು ವರದಿಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.