ರಿಯಾದ್ : ಸೌದಿ ಅರೇಬಿಯಾದ ಕ್ರೌನ್ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಕೊರೊನಾ ಲಸಿಕೆ ಪಡೆದಿದ್ದಾರೆ.
ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ಗಿಂತ ಮೊದಲೇ ದೇಶದ ವಿವಿಧ ನಾಯಕರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದು, ಈಗ ಮೊಹಮ್ಮದ್ ಅವರು ಲಸಿಕೆ ಪಡೆಯುವ ಮೂಲಕ ತಮ್ಮ ರಾಜ್ಯದ ಜನತೆಗೆ ಧೈರ್ಯ ತುಂಬಿಸಲು ಮುಂದಾಗಿದ್ದಾರೆ.
ಕಳೆದ ವಾರ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲಸಿಕೆ ಪಡೆದಿದ್ದರು. ಇದನ್ನು ದೂರದರ್ಶನದ ಮೂಲಕ ಟಿಲಿಕಾಸ್ಟ್ ಮಾಡಲಾಗಿತ್ತು. ಈ ವಾರದ ಆರಂಭದಲ್ಲಿ ಯುಎಸ್ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಕೊರೊನಾ ವೈರಸ್ ಲಸಿಕೆಯ ಮೊದಲ ಪ್ರಮಾಣವನ್ನು ಸ್ವೀಕರಿಸಿದ್ದರು.
ಸೌದಿ ಅರೇಬಿಯಾದ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಲಸಿಕೆ ಪಡೆದಿದ್ದು ಸಂತಸದ ವಿಚಾರ. ಕೊರೊನಾ ಲಸಿಕೆ ಬಗ್ಗೆ ವಿಜ್ಞಾನಿಗಳೊಂದಿಗೆ ರಾಜ ಉತ್ಸಾಹದಿಂದ ನಿರಂತರವಾಗಿ ಪ್ರತಿಯೊಂದು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಮೂಲಕ ಅಲ್ಲಿನ ಜನರಿಗೆ ವ್ಯಾಕ್ಸಿನ್ ನೀಡುವ ಮೊದಲು ತಾವೇ ತೆಗೆದುಕೊಂಡು ಜನರಲ್ಲಿ ನಂಬಿಕೆ ಹುಟ್ಟಿಸಿದ್ದಾರೆ ಎಂದದ್ದಾರೆ. ಅಷ್ಟೇ ಅಲ್ಲ, ಅಲ್ಲಿನ ನಾಗರಿಕರಿಗೆ ಲಸಿಕೆಗಳನ್ನು ನೀಡುವಲ್ಲಿ ಅವರು ತೋರಿಸುತ್ತಿರುವ ಉತ್ಸಾಹ ಮತ್ತು ಲಸಿಕೆ ಕುರಿತು ನಿರಂತರ ತಜ್ಞರೊಂದಿಗೆ ಸಂಪರ್ಕದಲ್ಲಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಫೈಸರ್ ಮತ್ತು ಬಯೋಟೆಕ್ ಕಂಪನಿ ಸಿದ್ಧಪಡಿಸಿರುವ ಕೋವಿಡ್ ಲಸಿಕೆ ಒಂದು ತಿಂಗಳಲ್ಲಿ ಸೌದಿಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.