ETV Bharat / international

ಅಂತಾರಾಷ್ಟ್ರೀಯ 'ತ್ರಿ' ಮಾರ್ಗವನ್ನೂ ನಿಷೇಧಿಸಿದ ಸೌದಿ ಅರೇಬಿಯಾ - ಸೌದಿ ಅರೇಬಿಯಾ

ರೂಪಾಂತರಿ ಕೊರೊನಾ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಸೌದಿ ಅರೇಬಿಯಾ ಎರಡು ವಾರಗಳ ಕಾಲ ಅಂತಾರಾಷ್ಟ್ರೀಯ ಸಂಚಾರ ನಿಷೇಧ ಜಾರಿಗೆ ತಂದಿದೆ.

Saudi Arabia lifts ban on int'l flights, landa & sea entry
ಅಂತಾರಾಷ್ಟ್ರೀಯ ಸಂಚಾರ ನಿಷೇಧವನ್ನು ಜಾರಿ
author img

By

Published : Jan 3, 2021, 8:33 PM IST

ರಿಯಾದ್: ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧ ಸೇರಿದಂತೆ ಭೂ ಮತ್ತು ಸಮುದ್ರ ಮಾರ್ಗದ ಪ್ರವೇಶವನ್ನು ರದ್ದುಪಡಿಸಿರುವುದಾಗಿ ಸೌದಿ ಅರೇಬಿಯಾ ತಿಳಿಸಿದೆ.

ಹಲವು ದೇಶಗಳಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ಹರಡುವಿಕೆಯ ವಿರುದ್ಧದ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಎರಡು ವಾರಗಳ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಈ ನಿಯಮ ಇಂದು ಬೆಳಿಗ್ಗೆ 11 ಗಂಟೆಯಿಂದ ಜಾರಿಗೆ ಬಂದಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಇಲ್ಲಿನ ನಾಗರಿಕರಲ್ಲದವರು ದೇಶಕ್ಕೆ ಬರುವ ಮುನ್ನ 14 ದಿನ ಹೊರಗಿರಬೇಕು. ಹಾಗೆ ಬರುವ ಮುನ್ನ ಕನಿಷ್ಠ ಒಂದು ಬಾರಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿರಬೇಕು ಎಂದು ಸಚಿವಾಲಯ ತಿಳಿಸಿದೆ. ಹಾಗೆಯೇ ಸೌದಿ ನಾಗರಿಕರು ಆಗಮಿಸಿದ ನಂತರ 14 ದಿನಗಳವರೆಗೆ ಕ್ವಾರಂಟೈನ್​ ಹಾಗೂ ಎರಡು ಕೋವಿಡ್ -19 ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.