ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ನಲ್ಲಿ ಇಂದು ಯಾವುದೇ ಕೋವಿಡ್-19 ಕೇಸ್ ಕಾಣಿಸಿಕೊಂಡಿಲ್ಲ. ಮಾರ್ಚ್ ತಿಂಗಳಿಂದ ಈ ದೇಶದಲ್ಲಿಯೂ ಕೋವಿಡ್ ಆರ್ಭಟ ಜೋರಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಅಲ್ಲಿ ಕೊರೊನಾ ಸೋಂಕಿತ ಪ್ರಕರಣ ಕಾಣಿಸಿಕೊಂಡಿಲ್ಲ.
ಅಲ್ಲಿನ ಆರೋಗ್ಯ ಸಚಿವ ಆಶ್ಲೇ ಬ್ಲೂಮ್ಫೀಲ್ಡ್ ಪ್ರತಿಕ್ರಿಯಿಸಿ, ಇದು ನಿಜಕ್ಕೂ ಸಂಭ್ರಮಪಡುವ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಸೋಂಕು ಹರಡದಂತೆ ನಾವು ಎಚ್ಚರಿಕೆ ವಹಿಸುತ್ತೇವೆ ಎಂದು ವಿಶ್ವಾಸದಿಂದ ನುಡಿದಿದ್ದಾರೆ.
ದೇಶದಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಗಡಿಭಾಗವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದ ನ್ಯೂಜಿಲ್ಯಾಂಡ್, ಲಾಕ್ಡೌನ್ ಹೇರಿತ್ತು. ಕಳೆದ ವಾರ ಕೆಲ ನಿಯಮಗಳೊಂದಿಗೆ ಕರ್ಫ್ಯೂ ಸಡಿಲಿಸಿತ್ತು. ಆದರೂ ಇಲ್ಲಿಯವರೆಗೆ ಶಾಲಾ,ಕಾಲೇಜುಗಳು ಆರಂಭವಾಗಿಲ್ಲ.
ನ್ಯೂಜಿಲ್ಯಾಂಡ್ನಲ್ಲಿ 1,500 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 20 ಜನರು ಸಾವನ್ನಪ್ಪಿದ್ದಾರೆ.