ಜೆರುಸಲೇಂ : ಅಮೆರಿಕದ ಬೆಂಬಲದೊಂದಿಗೆ ಈ ಬೇಸಿಗೆಯಲ್ಲಿ ಫ್ಯಾಲೆಸ್ತೀನ್ ಆಕ್ರಮಿತ ವೆಸ್ಟ್ ಬ್ಯಾಂಕ್ (ಪಶ್ಛಿಮ ದಂಡೆ) ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇವಾಂಜೆಲಿಕಲ್ ಕ್ರಿಶ್ಚಿಯನ್ ಬೆಂಬಲಿಗರೊಂದಿಗೆ ಆನ್‌ಲೈನ್ ಸಭೆಯಲ್ಲಿ ಮಾತನಾಡಿದ ನೆತನ್ಯಾಹು, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಪ್ರಾಚ್ಯ ಯೋಜನೆಯು ಇಸ್ರೇಲ್ನ ಹಲವು ವಸಾಹತುಗಳನ್ನು ಮತ್ತು ಜೋರ್ಡಾನ್ ಕಣಿವೆಯನ್ನು ಇಸ್ರೇಲ್ ನಿಯಂತ್ರಣಕ್ಕೆ ಪಡೆಯಲು ಉದ್ದೇಶಿದೆ ಎಂದು ತಿಳಿಸಿದರು.
ಇನ್ನೆರಡು ತಿಂಗಳಲ್ಲಿ ತಿಂಗಳಲ್ಲಿ ಝಿಯೋನಿಸಂ ಇತಿಹಾಸದಲ್ಲಿ ಮತ್ತೊಂದು ಸಂಭ್ರಮಾಚರಣೆ ಮಾಡಲು ನಮಗೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ವೆಸ್ಟ್ ಬ್ಯಾಂಕ್ ಭೂಪ್ರದೇಶವನ್ನು ಇಸ್ರೇಲ್ ಸ್ವಾಧೀನಪಡಿಸಿಕೊಳ್ಳುವುದು ವಿವಾದಾಸ್ಪದವಾಗಿದೆ, ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆಗಳು ವ್ಕಕ್ತವಾಗಿದೆ.