ETV Bharat / international

17 ವರ್ಷದ ಪತ್ನಿಯ ತಲೆ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪತಿ; ಇರಾನ್‌ನಲ್ಲಿ ಆಘಾತಕಾರಿ ಘಟನೆ - ಮಧ್ಯಪ್ರಾಚ್ಯದಲ್ಲಿ ಮಹಿಳೆಯರ ಸ್ಥಿತಿಗತಿ

ಇರಾನ್​ನಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಗಳನ್ನು ತಡೆಯಲು ಮದುವೆಗೆ ಕಾನೂನಿನ ವಯಸ್ಸನ್ನು 13ಕ್ಕೆ ನಿಗದಿ ಮಾಡಲಾಗಿದೆ. ಆದರೂ ಕೂಡಾ ಅಲ್ಲಿ ಮಹಿಳೆಯರ ವಿರುದ್ಧದ ಹಿಂಸಾಚಾರ ನಿಲ್ಲುತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

Man cuts his wife's head and displayed in streets at iran
ಪತ್ನಿಯ ತಲೆ ಕಡಿದು ರಸ್ತೆಗಳಲ್ಲಿ ಪ್ರದರ್ಶಿಸಿದ ಪತಿ.. ಬೆಚ್ಚಿ ಬಿದ್ದ ಇರಾನ್
author img

By

Published : Feb 9, 2022, 8:15 AM IST

ಟೆಹರಾನ್(ಇರಾನ್): ಅಪರಾಧಗಳು ಯಾವಾಗಲೂ ಕ್ರೂರವಾಗಿರುತ್ತವೆ. ಕೆಲವೊಮ್ಮೆ ಭೀಕರವಾಗಿರುತ್ತವೆ. ಈ ಅಪರಾಧಗಳಿಗೆ ಮತ್ತಷ್ಟು ವಿಕೃತಿ ಸೇರ್ಪಡೆಯಾದರೆ ಅದು ಅಮಾನವೀಯ ಎನಿಸಿಕೊಳ್ಳುತ್ತದೆ. ಮಧ್ಯಪ್ರಾಚ್ಯದ ರಾಷ್ಟ್ರ ಮತ್ತು ಶಿಯಾ ಮುಸ್ಲಿಮರ ಬಾಹುಳ್ಯದ ಇರಾನ್​ನಲ್ಲಿ ಅಪರಾಧ ಮತ್ತು ವಿಕೃತಿ ಬೆರೆತ ಘಟನೆಯೊಂದು ನಡೆದಿದ್ದು, ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ.

ಹೌದು, ತನಗೆ ದ್ರೋಹ ಎಸಗಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶೀಲ ಶಂಕಿಸಿದ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಅತ್ಯಂತ ಘೋರ ರೀತಿಯಲ್ಲಿ ಕೊಂದಿದ್ದಾನೆ. ಕುಪಿತ ವ್ಯಕ್ತಿ ಆಕೆಯ ಶಿರವನ್ನು ಕತ್ತರಿಸಿ ಬೀದಿಯಲ್ಲಿ ಹಿಡಿದು ಪ್ರದರ್ಶಿಸಿದ್ದಾನೆ. ಇರಾನ್​ನ ನೈರುತ್ಯ ಭಾಗದ ನಗರ ಅಹ್ವಾಜ್ ಎಂಬಲ್ಲಿ ಈ ಘಟನೆ ನಡೆದಿದೆ.

Man cuts his wife's head and displayed in streets at iran
ಪತ್ನಿಯ ತಲೆಯೊಂದಿಗೆ ಪತಿ

ಮೋನಾ ಹೈದರಿ (17) ಕೊಲೆಯಾದ ಯುವತಿ. ಈಕೆಯ ಪತಿ ಮತ್ತು ಸೋದರ ಮಾವ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಇರಾನ್​ನಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿದೆ. ಮಹಿಳಾ ವ್ಯವಹಾರಗಳ ಉಪಾಧ್ಯಕ್ಷೆ ಎನ್ಸೀಹ್ ಖಜಾಲಿ ಅವರು ಸಂಸತ್ತಿನಲ್ಲಿ ಪ್ರಕರಣ ಸಂಬಂಧ ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತು ಅಂಥ ಪ್ರಕರಣಗಳನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • When we get beheaded in Iran, It won’t make headlines for international media. But see how regime’s miss information can make headlines. It was a big lie,we are still banned from entering stadiums but we get killed, flogged, jailed or kicked out from our home every day#LetUsTalk https://t.co/JhABwJgG67 pic.twitter.com/YANUklTbUB

    — Masih Alinejad 🏳️ (@AlinejadMasih) February 6, 2022 " class="align-text-top noRightClick twitterSection" data=" ">

ಇರಾನಿನ ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಆರೋಪಿಯ ವಿರುದ್ಧ ಕಿಡಿಕಾರಿದ್ದು, ರಾಷ್ಟ್ರದಲ್ಲಿ ಕಾನೂನು ಸುಧಾರಣೆಗಳಿಗೆ ಒತ್ತಾಯಿಸಲಾಗಿದೆ. ಮಹಿಳೆಯ ಕೊಲೆಗಾರ ಹೆಮ್ಮೆಯಿಂದ ಆಕೆಯ ತಲೆಯನ್ನು ಬೀದಿಯಲ್ಲಿ ಪ್ರದರ್ಶಿಸಿದ್ದಾನೆ ಎಂದು ಸಜಾಂಡೆಗಿ ದಿನಪತ್ರಿಕೆ ಆತಂಕ ವ್ಯಕ್ತಪಡಿಸಿ ವರದಿ ಮಾಡಿದೆ.

ಇರಾನ್​ನ ಹೆಸರಾಂತ ಸ್ತ್ರೀವಾದಿ ಚಲನಚಿತ್ರ ನಿರ್ಮಾಪಕಿ ತಹ್ಮಿನೆ ಮಿಲಾನಿ ತಮ್ಮ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ​'ಮೋನಾ ಅಜ್ಞಾನಕ್ಕೆ ಬಲಿಯಾಗಿದ್ದಾರೆ. ಈ ಅಪರಾಧಕ್ಕೆ ನಾವೆಲ್ಲರೂ ಜವಾಬ್ದಾರರು' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಗಂಡು ಮಗುವಿಗಾಗಿ ನಕಲಿ ಪೀರನ ಮಾತಿನಂತೆ ತಲೆಗೆ ಮೊಳೆ ಹೊಡೆದುಕೊಂಡ ಗರ್ಭಿಣಿ

ಇರಾನ್​ನಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯಗಳನ್ನು ತಡೆಯಲು ಮದುವೆಗೆ ಕಾನೂನಿನ ವಯಸ್ಸನ್ನು 13ಕ್ಕೆ ನಿಗದಿ ಮಾಡಲಾಗಿದೆ. ಇರಾನ್ ಮಾಧ್ಯಮಗಳ ಪ್ರಕಾರ ಮೋನಿ ಹೈದರಿ 12 ವರ್ಷವಿದ್ದಾಗಲೇ ವಿವಾಹವಾಗಿದ್ದು, ಮೂರು ವರ್ಷದ ಮಗ ಆಕೆಗಿದ್ದಾನೆ.

ಮೇ 2020ರಲ್ಲಿಯೂ ಇಂಥದ್ದೇ ಘಟನೆ ನಡೆದಿದ್ದು, ವ್ಯಕ್ತಿಯೋರ್ವ ತನ್ನ 14 ವರ್ಷ ವಯಸ್ಸಿನ ಮಗಳ ತಲೆ ಕತ್ತರಿಸಿ, ಮರ್ಯಾದೆ ಹತ್ಯೆ ಎಂದು ಹೇಳಿಕೊಂಡಿದ್ದ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ವ್ಯಕ್ತಿಗೆ ಒಂಬತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.