ETV Bharat / international

ಮಾಜಿ ವಿದೇಶಾಂಗ ಸಚಿವರಿಗೆ ಮಣೆ ಹಾಕಿದ ಜಪಾನ್​..ನೂತನ ಪ್ರಧಾನಿಯಾಗಿ ಕಿಶಿದಾ! - ಜಪಾನ್​ ನೂತನ ಪ್ರಧಾನಿಯಾಗಿ ಕಿಶಿದಾ

ಕೋವಿಡ್ ಹಾಗೂ ಟೋಕಿಯೋ ಒಲಿಂಪಿಕ್ಸ್​​ ವೇಳೆ ಜನರಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಜಪಾನ್​ ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸ ಪಿಎಂ ಆಯ್ಕೆ ಮಾಡಿದ್ದಾರೆ.

Japan pm
Japan pm
author img

By

Published : Oct 4, 2021, 7:13 PM IST

ಟೋಕಿಯೋ(ಜಪಾನ್​​): ಜಪಾನ್​ ಪ್ರಧಾನಿಯಾಗಿದ್ದ ಯೋಶಿಹಿದ್​ ಸುಗಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾರಣ ಇದೀಗ ಹೊಸ ಪ್ರಧಾನಿ ಆಯ್ಕೆ ಮಾಡಲಾಗಿದ್ದು, ಅಲ್ಲಿನ ಮಾಜಿ ವಿದೇಶಾಂಗ ಸಚಿವರಿಗೆ ಮಣೆ ಹಾಕಲಾಗಿದೆ. ಇಂದು ಬೆಳಗ್ಗೆ ಸಂಸತ್​ನಲ್ಲಿ ಆಡಳಿತರೂಢ ಲಿಬರಲ್​ ಡೆಮಾಕ್ರಟಿಕ್​ ಪಾರ್ಟಿ, ಮಾಜಿ ವಿದೇಶಾಂಗ ಸಚಿವರಾಗಿದ್ದ ಫುಮಿಯೋ ಕಿಶಿದಾ ಅವರನ್ನ ಆಯ್ಕೆ ಮಾಡಿದೆ.

ಜಪಾನ್​ ಸಂಸತ್​​ನಲ್ಲಿ ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಆಡಳಿತಾರೂಢ ಲಿಬರಲ್​ ಡೆಮಾಕ್ರಟಿಕ್ ಪಾರ್ಟಿ ಸದಸ್ಯರು ಒಮ್ಮತದಿಂದ ಇವರ ಹೆಸರು ಅಂತಿಮಗೊಳಿಸಿದ್ದಾರೆ. ಈ ಹಿಂದೆ ಜಪಾನ್​ ಪ್ರಧಾನಿಯಾಗಿದ್ದ ಯೋಶಿಹಿದ್​ ಸುಗಾ ಅವರು ಜಪಾನ್​ನಲ್ಲಿ ಕೊರೊನಾ ನಿಯಂತ್ರಣ ಹಾಗೂ ಒಲಿಂಪಿಕ್ಸ್​ ಆಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕೇವಲ ಒಂದೇ ವರ್ಷದಲ್ಲಿ ಅವರು ಪದತ್ಯಾಗ ಮಾಡಿದ್ದಾರೆ.

ಹೊಸ ಪ್ರಧಾನಿಗೆ ಸವಾಲುಗಳ ಮೇಲೆ ಸವಾಲು

ಇದೀಗ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕಿಶಿದಾ ಅವರಿಗೆ ಕೋವಿಡ್​ನಿಂದ ಜರ್ಜರಿತವಾದ ಆರ್ಥಿಕತೆ, ಚೀನಾ ಮತ್ತು ಉತ್ತರ ಕೊರಿಯಾದಿಂದ ಇರುವ ಭದ್ರತೆ ಬೆದರಿಕೆ ಸೇರಿದಂತೆ ಅನೇಕ ಸಮಸ್ಯೆ ಎದುರಿಸಬೇಕಾದ ಅನಿವಾರ್ಯತೆ ಇದೆ. ರಾಜಮನೆತನದಲ್ಲಿ ನಡೆದ ಸಮಾರಂಭದಲ್ಲಿ ಕಿಶಿದಾ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಬರುವ ಶುಕ್ರವಾರ ಸಂಸತ್​​ನಲ್ಲಿ ಭಾಷಣ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿರಿ: ಡೆಲ್ಲಿ ಏರ್​​ಪೋರ್ಟ್​​ನ ಬ್ರಿಡ್ಜ್​ ಕೆಳಗೆ ಸಿಕ್ಕಿಕೊಂಡ ಏರ್​ ಇಂಡಿಯಾ ವಿಮಾನ.. ವಿಡಿಯೋ ನೋಡಿ

ಕಿಶಿದಾ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದ್ದು, ಕೇವಲ ಇಬ್ಬರು ಕ್ಯಾಬಿನೆಟ್​​ ಸದಸ್ಯರನ್ನ ಹೊರತುಪಡಿಸಿ, 13 ಮಂದಿಗೆ ಹೊಸದಾಗಿ ಅವಕಾಶ ನೀಡಲಾಗಿದೆ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಹಿರೊಕಾಜು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.