ETV Bharat / international

ಗಾಜಾ ಮೇಲೆ ಇಸ್ರೇಲ್​ ಡೆಡ್ಲಿ ಅಟ್ಯಾಕ್​: 13 ಮಹಡಿ ದೂರದರ್ಶನ ಕಟ್ಟಡ ನೆಲಸಮ

author img

By

Published : May 15, 2021, 7:16 PM IST

ಗಾಜಾ ಮೇಲಿನ ವೈಮಾನಿಕ ದಾಳಿ ಮತ್ತಷ್ಟು ತೀವ್ರಗೊಳಿಸಿರುವ ಇಸ್ರೇಲ್​ ಇದೀಗ ಅಲ್ಲಿನ ದೂರದರ್ಶನ ಕಟ್ಟಡದ ಮೇಲೆ ದಾಳಿ ನಡೆಸಿದೆ.

Israeli military
Israeli military

ಗಾಜಾ: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್​ ನಡುವಿನ ಯುದ್ಧದ ಪರಿಸ್ಥಿತಿ ಮುಂದುವರೆದಿದ್ದು, ಇದೀಗ ಅಲ್ಲಿನ ಸುದ್ದಿವಾಹಿನಿ ಗುರಿಯಾಗಿಸಿಕೊಂಡು ನಡೆದಿರುವ ವೈಮಾನಿಕ ದಾಳಿಯಲ್ಲಿ 13 ಅಂತಸ್ತಿನ ಕಟ್ಟಡ ಸಂಪೂರ್ಣವಾಗಿ ನೆಲಸಮವಾಗಿದೆ.

ಕತಾರ್​ ಮೂಲದ ಅಲ್​-ಜಜೀರಾ ದೂರದರ್ಶನ ಮತ್ತು ಅಮೆರಿಕದ ಸುದ್ದಿ ಸಂಸ್ಥೆಯ 13 ಮಹಡಿ ಕಟ್ಟಡ ಸಂಪೂರ್ಣವಾಗಿ ನೆಲಸಮವಾಗಿದ್ದು, ಇದರಲ್ಲಿ ಅನೇಕ ಅನೇಕ ಅಂತಾರಾಷ್ಟ್ರೀಯ ಪತ್ರಿಕಾ ಕಚೇರಿಗಳಿದ್ದವು ಎಂದು ತಿಳಿದು ಬಂದಿದೆ.

Israeli military
ಗಾಜಾ ಮೇಲೆ ಇಸ್ರೇಲ್​ ವೈಮಾನಿಕ ದಾಳಿ

ಇದಕ್ಕೆ ಸಂಬಂಧಿಸಿದಂತೆ ಅಲ್​ ಜಜೀರಾ ಟ್ವೀಟ್ ಮೂಲಕ ಮಾಹಿತಿ ಸಹ ಹಂಚಿಕೊಂಡಿದೆ. ದಾಳಿ ಮಾಡುವುದಕ್ಕೂ ಒಂದು ಗಂಟೆ ಮುಂಚಿತವಾಗಿ ಎಚ್ಚರಿಕೆ ಸಹ ನೀಡಲಾಗಿತ್ತು ಎಂದು ಇಸ್ರೇಲ್ ಗುಪ್ತಚರ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ರೋವರ್ ಇಳಿಸಿದ ಚೀನಾ

ಸೋಮವಾರದಿಂದ ಗಾಜಾದ ಮೇಲೆ ಇಸ್ರೇಲ್​ ನಿರಂತರವಾಗಿ ವಾಯು ದಾಳಿ ನಡೆಸುತ್ತಿದ್ದು, ಇದರಲ್ಲಿ 39 ಮಕ್ಕಳು ಸೇರಿ 139 ಜನರು ಸಾವನ್ನಪ್ಪಿದ್ದಾರೆ. ಇದರ ಮಧ್ಯೆ ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.