ದುಬೈ: ಜಾಗತಿಕ ಶಕ್ತಿಗಳ ಜತೆ ಪರಮಾಣು ಒಪ್ಪಂದದ ಬಗ್ಗೆ ವಿಯೆನ್ನಾದಲ್ಲಿ ನಡೆಯುತ್ತಿರುವ ಮಾತುಕತೆಗಳ ಮೇಲೆ ನಟಾನ್ಜ್‌ನಲ್ಲಿ ತನ್ನ ಮುಖ್ಯ ಪರಮಾಣು ತಾಣದ ಮೇಲಿನ ದಾಳಿ ಪರಿಣಾಮ ಬೀರುತ್ತದೆ ಎಂದು ಇರಾನ್‌ನ ವಿದೇಶಾಂಗ ಸಚಿವರು ಎಚ್ಚರಿಸಿದ್ದಾರೆ.
ನಿರ್ಬಂಧ ಅಥವಾ ವಿಧ್ವಂಸಕ ಕ್ರಮಗಳು ಮಾತುಕತೆಗೆ ಒಂದು ಅಸ್ತ್ರವಾಗುವುದಿಲ್ಲ ಎಂಬುದನ್ನು ಅಮೆರಿಕನ್ನರು ತಿಳಿದಿರಬೇಕು. ಈ ಕ್ರಮಗಳು ಅವರಿಗೆ ಪರಿಸ್ಥಿತಿ ಕಷ್ಟಕರವಾಗಿಸುತ್ತದೆ ಎಂಬುದನ್ನು ಸಹ ಅವರು ಅರಿತಿರಬೇಕು ಎಂದು ಮೊಹಮ್ಮದ್ ಜಾವಾದ್ ಜರೀಫ್ ಟೆಹ್ರಾನ್‌ನಲ್ಲಿ ಹೇಳಿದ್ದಾರೆ.
ವಿಯೆನ್ನಾ ಮಾತುಕತೆಯಿಂದ ಹೊರಗುಳಿಯಿರಿ. ಎಲ್ಲಾ ಪರಮಾಣು ಬದ್ಧತೆಗಳನ್ನು ಸ್ಥಗಿತಗೊಳಿಸಿ. ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು. ವಿಧ್ವಂಸಕ ಕೃತ್ಯದ ಹಿಂದಿನ ದೇಶೀಯ ಒಳನುಸುಳುವಿಕೆ ಜಾಲ ಗುರುತಿಸಿ ತೊಡೆದು ಹಾಕಬೇಕು ಎಂದು ಕೇಹಾನ್ ಉಲ್ಲೇಖಿಸಿದೆ.
ಇರಾನ್ ವಿರುದ್ಧದ ಪರಮಾಣು ವಿಧ್ವಂಸಕ ಕೃತ್ಯದ ಮುಖ್ಯ ಪ್ರಚೋದಕನಾಗಿ ಅಮೆರಿಕದ ಪಾತ್ರದ ತೋರಿಸುವ ಸಾಕಷ್ಟು ಪುರಾವೆಗಳಿವೆ. ಇದರ ಹೊರತಾಗಿಯೂ ದುರದೃಷ್ಟವಶಾತ್, ಕೆಲವು ರಾಜಕಾರಣಿಗಳು ಅಮೆರಿಕದ ಜವಾಬ್ದಾರಿ ಶುದ್ಧೀಕರಿಸುವ ಮೂಲಕ (ನೆರವು) ಇರಾನ್ ಜನರ ವಿರುದ್ಧ ವಾಷಿಂಗ್ಟನ್ ಮಾಡಿದ ಅಪರಾಧಗಳನ್ನು ಮರೆಯುತ್ತಿದ್ದಾರೆ ಎಂದು ಪತ್ರಿಕೆ ಕೇಹಾನ್ ಮಂಗಳವಾರದ ಆವೃತ್ತಿಯಲ್ಲಿ ತಿಳಿಸಿದೆ.