ಟೆಹರಾನ್(ಇರಾನ್): ಮುಂಬರುವ ದಿನಗಳಲ್ಲಿ ಇರಾನಿನ ಮೇಲೆ ಬಾಂಬ್ ದಾಳಿ ನಡೆಸಿದರೆ ದುಬೈ ಹಾಗೂ ಹೈಫಾ ನಗರಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ದುಬೈಗೆ ಎಚ್ಚರಿಕೆ ನೀಡಿದೆ.
ಒಂದು ವೇಳೆ, ನಮ್ಮ ದೇಶದ ಮೇಲೆ ಬಾಂಬ್ ಸಿಡಿಸಿದರೆ, ಯುಎಇನ ಎರಡು ನಗರಗಳನ್ನ ನಾವು ಈಗಾಗಲೆ ಗುರಿಯಾಗಿಸಿಕೊಂಡಿದ್ದೇವೆ ಹಾಗೂ ಆ ನಗರಗಳ ಮೇಲೆ ದಾಳಿ ನಡೆಸುವುದು ಶತ ಸಿದ್ಧ ಎಂದು ಇರಾನ್ ಎಚ್ಚರಿಕೆ ನೀಡಿದೆ.
ಇಂದು ಬೆಳಗ್ಗೆ ಇರಾಕ್ನಲ್ಲಿರುವ ಅಮೆರಿಕ ಸೇನೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್, ಇದು ತನ್ನ ನಾಯಕ ಸುಲೈಮಾನಿ ಹತ್ಯೆಯ ಪ್ರತೀಕಾರ ಎಂದು ಹೇಳಿಕೆ ನೀಡಿದ್ದು, ಇಷ್ಟಕ್ಕೂ ಅಮೆರಿಕ ಸ್ಪಂದಿಸದಿದ್ದಲ್ಲಿ ಅಮೆರಿಕದ ನಗರಗಳಿಗೆ ಕ್ಷಿಪಣಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.