ದುಬೈ: ಅರಬ್ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸ್ನ ದುಬೈ ಎಕ್ಸ್‌ಪೋ- 2020 ಆರಂಭವಾಗಿದೆ. ಈ ಎಕ್ಸ್ಪೋದಲ್ಲಿನ ಕಟ್ಟಡಗಳ ನಿರ್ಮಾಣದ ವೇಳೆಯಲ್ಲಿ ಹಲವು ಅವಘಡಗಳು ಸಂಭವಿಸಿದ್ದು, ಈ ಕುರಿತು ಅಲ್ಲಿನ ಅಧಿಕಾರಿಗಳು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ದುಬೈ ಹೊರಭಾಗದಲ್ಲಿ ಈ ಎಕ್ಸ್‌ಪೋ ನಡೆಯುತ್ತಿದ್ದು, ಹಲವು ಕಾಮಗಾರಿಗಳ ನಿರ್ಮಾಣದ ವೇಳೆಯಲ್ಲಿ ಅವಘಡಗಳು ನಡೆದು ಒಟ್ಟು ಐವರು ಸಾವನ್ನಪ್ಪಿದ್ದಾರೆ ಎಂದಿದ್ದ ಅಲ್ಲಿನ ಅಧಿಕಾರಿಗಳು ನಂತರ ಮೂವರು ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಗೊಂದಲದ ಹೇಳಿಕೆ ನೀಡಿದ್ದರು. ನಂತರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಇದೊಂದು ತಪ್ಪು ಮಾಹಿತಿ ಎಂದು ಸ್ಪಷ್ಟನೆಯನ್ನೂ ನೀಡಿದ್ದರು.
ದುಬೈ ಎಕ್ಸ್‌ಪೋ ಸೈಟ್ ನಿರ್ಮಾಣಕ್ಕೆ ಸುಮಾರು 7 ಬಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಲಾಗಿದ್ದು, ಇಲ್ಲಿಗೆ ಭೇಟಿ ನೀಡುವವರ ಮೇಲೆ ಮತ್ತು ದುಬೈ ಖ್ಯಾತಿಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಬಾರದು ಎಂದ ಕಾರಣಕ್ಕೆ ಹಲವು ತಿಂಗಳವರೆಗೆ ಅವಘಡಗಳ ಅಂಕಿ ಅಂಶಗಳನ್ನು ನೀಡಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದರು ಎನ್ನಲಾಗಿದೆ.
ಸಾವು-ನೋವುಗಳ ಬಗ್ಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನಿಖರವಲ್ಲದ ಅಂಕಿಅಂಶಗಳನ್ನು ನೀಡುತ್ತಿರುವುದು ಮಾನವ ಹಕ್ಕುಗಳ ಸಂಘಟನೆಗಳಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಆಫ್ರಿಕಾ, ಏಷ್ಯಾಗಳಿಂದ ಕಡಿಮೆ ಸಂಬಳಕ್ಕೆ ದುಬೈಗೆ ಬಂದು ಕೆಲಸ ಮಾಡುವ ಕಾರ್ಮಿಕರ ಕುರಿತು ಬೇಜವಾಬ್ದಾರಿ ಯುಎಇ ಸರ್ಕಾರಕ್ಕೆ ಬೇಜವಾಬ್ದಾರಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿವೆ.
ಶನಿವಾರ ಬೆಳಗ್ಗೆ ಈ ಕುರಿತು ಈ ಕುರಿತು ಸುದ್ದಿಗೋಷ್ಠಿ ನಡೆಸಿದ್ದ ಎಕ್ಸ್‌ಪೋ ವಕ್ತಾರ ಸ್ಕೋನೈಡ್ ಮೆಕ್‌ಗೀಚಿನ್ 'ಎಕ್ಸ್‌ಪೋ ಸ್ಥಳದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ' ಎಂದಿದ್ದರು. ಇದಾದ ನಂತರ ಸಂಜೆ ವೇಳೆ ಎಕ್ಸ್‌ಪೋ ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದಾರೆ, 72 ಮಂದಿಗೆ ಗಾಯವಾಗಿದೆ ಎಂದು ಮೆಕ್‌ಗೀಚಿನ್ ಹೇಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿತ್ತು.
ಈ ರೀತಿ ಹೇಳಿದ ಕೆಲವೇ ಗಂಟೆಗಳಲ್ಲಿ ಮಾಹಿತಿ ನಿಖರವಾಗಿಲ್ಲದ ಕಾರಣಕ್ಕೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಕ್ಷಮಾಪಣೆಯನ್ನು ಕೇಳಲಾಗಿತ್ತು. ಈಗಲೂ ಕೂಡಾ ಎಕ್ಸ್‌ಪೋ ಅಧಿಕಾರಿಗಳು ನಿಖರ ಅಂಕಿ ಅಂಶಗಳನ್ನು ನೀಡಿಲ್ಲ.
ಎಕ್ಸ್‌ಪೋ ಕುರಿತು ಯೂರೋಪಿಯನ್ ಯೂನಿಯನ್ ಆಕ್ರೋಶ ವ್ಯಕ್ತಪಡಿಸಿದೆ. ತನ್ನಲ್ಲಿ ಕೆಲಸ ಮಾಡುವ ಕಾರ್ಮಿಕರ ಸಾವು ನೋವಿನ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಈ ಎಕ್ಸ್ಪೋದಲ್ಲಿ ಯಾವುದೇ ರಾಷ್ಟ್ರಗಳು ಭಾಗವಹಿಸಬಾರದು ಎಂದು ಯೂರೋಪಿಯನ್ ಯೂನಿಯನ್ ಮನವಿ ಮಾಡಿದೆ.
ದುಬೈ ಎಕ್ಸ್‌ಪೋ ಬಗ್ಗೆ..
ದುಬೈ ಎಕ್ಸ್‌ಪೋ-2020 ವಿಶ್ವದ ಅತಿದೊಡ್ಡ ಎಕ್ಸ್‌ಪೋ ಆಗಿದ್ದು, 2020ರಲ್ಲೇ ನಿಗದಿಯಾಗಿತ್ತು. ಆದ್ರೆ, ಕೋವಿಡ್ ಕಾರಣಕ್ಕೆ ಮುಂದೂಡಲಾಗಿತ್ತು. ಈ ಎಕ್ಸ್‌ಪೋ ಸೈಟ್ ಅನ್ನು ಸೃಷ್ಟಿಸುವ ಸಲುವಾಗಿ ಸುಮಾರು 2 ಲಕ್ಷ ಉದ್ಯೋಗಿಗಳು ಸುಮಾರು 240 ಮಿಲಿಯನ್ ಗಂಟೆಗಳ ಕಾಲ ಶ್ರಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ ಅಕ್ಟೋಬರ್ 1ರಿಂದ ಆರಂಭವಾಗಿರುವ ಎಕ್ಸ್‌ಪೋ ಮಾರ್ಚ್ 31 2022ರವರೆಗೆ ಅಂದರೆ 182 ದಿನಗಳ ಕಾಲ ನಡೆಯಲಿದೆ. ರೀಮ್ ಅಲ್ ಹಾಶಿಮಿ ಎಂಬುವವರು ಈ ಎಕ್ಸ್ಪೋದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ: ತಾಲಿಬಾನಿಗಳಿಂದ ಆತ್ಮಾಹುತಿ ಬಾಂಬರ್ಗಳ 'ಮನ್ಸೂರ್ ಸೇನೆ' ಸೃಷ್ಟಿ: ಗಡಿಗಳಲ್ಲಿ ನಿಯೋಜನೆ