ETV Bharat / international

ಟರ್ಕಿಯಲ್ಲಿ ಭೀಕರ ಪ್ರವಾಹ, ಭೂಕುಸಿತ: ಸಾವಿನ ಸಂಖ್ಯೆ 62ಕ್ಕೆ ಏರಿಕೆ - ಟರ್ಕಿಯ ಕಪ್ಪು ಸಮುದ್ರ

ಟರ್ಕಿಯ ಕಸ್ತಮೋನು, ಸಿನೋಪ್‌ ಮತ್ತು ಬಾರ್ಟಿನ್ ಪ್ರಾಂತ್ಯಗಳಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದಾಗಿ 62 ಮಂದಿ ಮೃತಪಟ್ಟಿದ್ದಾರೆ.

death toll rises to 62 in Turkey Floods, landslides
ಟರ್ಕಿಯಲ್ಲಿ ಭೀಕರ ಪ್ರವಾಹ - ಭೂಕುಸಿತ
author img

By

Published : Aug 16, 2021, 1:40 PM IST

ಅಂಕಾರಾ (ಟರ್ಕಿ): ಟರ್ಕಿಯ ಕಪ್ಪು ಸಮುದ್ರದ ಪ್ರಾಂತ್ಯಗಳಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 62ಕ್ಕೆ ಏರಿಕೆಯಾಗಿದ್ದು, 70ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಟರ್ಕಿಯಲ್ಲಿ ಭೀಕರ ಪ್ರವಾಹ - ಭೂಕುಸಿತ

ಕಸ್ತಮೋನು, ಸಿನೋಪ್‌ ಮತ್ತು ಬಾರ್ಟಿನ್ ಪ್ರಾಂತ್ಯಗಳ ಜನರನ್ನು ಹೆಲಿಕಾಪ್ಟರ್, ಹಡಗು, ಬೋಟ್​ಗಳು ಹಾಗೂ ಇತರ ವಾಹನಗಳ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸಾವಿರಾರು ಮನೆಗಳು, 454 ಬೃಹತ್​ ಕಟ್ಟಡಗಳು, ಹಲವಾರು ಸೇತುವೆಗಳು ನೆಲಸಮವಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ಅನೇಕರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟರ್ಕಿಯ ಆಂತರಿಕ ವ್ಯವಹಾರಗಳ ಸಚಿವ ಸುಲೇಮಾನ್ ಸೊಯ್ಲು ಹೇಳಿದ್ದಾರೆ.

ಇದನ್ನೂ ಓದಿ: ಕಾಬೂಲ್‌ ಏರ್‌ಪೋರ್ಟ್‌ನಲ್ಲಿ ಗುಂಡಿನ ದಾಳಿಗೆ ಮೂವರು ಬಲಿ: ಪ್ರಾಣ ರಕ್ಷಿಸಿಕೊಳ್ಳಲು ಅಫ್ಘನ್ನರ ಪರದಾಟ

ರಸ್ತೆ, ವಿದ್ಯುತ್ ಸಂಪರ್ಕ ಕಡಿತಗೊಂಡ ಗ್ರಾಮಗಳಿಗೆ ಹೆಲಿಕಾಪ್ಟರ್ ಮೂಲಕ ಆಹಾರ ಪೂರೈಸಲಾಗುತ್ತಿದೆ. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆಯ 8,000ಕ್ಕೂ ಹೆಚ್ಚು ಸಿಬ್ಬಂದಿ ಹಗಲು-ರಾತ್ರಿಯೆನ್ನದೇ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಟರ್ಕಿಯಲ್ಲಿ ಸಂಭವಿಸಿರುವ ಜೀವ ಮತ್ತು ಆಸ್ತಿ ಹಾನಿಗೆ ವಿಶ್ವಸಂಸ್ಥೆಯ ಪ್ರಧಾನಿ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಟರ್ಕಿ ಗಣರಾಜ್ಯದ ಸರ್ಕಾರ ಮತ್ತು ಅಲ್ಲಿನ ಜನರ ಬೆಂಬಲಕ್ಕೆ ವಿಶ್ವಸಂಸ್ಥೆ ನಿಲ್ಲುವುದಾಗಿ ಅಭಯ ನೀಡಿದ್ದಾರೆ. ಟರ್ಕಿ ಸಹಾಯಕ್ಕೆ ಬಂದಿರುವ ಇಸ್ರೇಲ್ ತನ್ನ ರಕ್ಷಣಾ ಪಡೆಯನ್ನು ಕಳುಹಿಸಿರುವುದಾಗಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.