ETV Bharat / international

ಬಂಪರ್​​ ಆಫರ್​: ಈ ಪಟ್ಟಣದಲ್ಲಿ ಕೇವಲ 87 ರೂಪಾಯಿಗೆ ಸಿಗುತ್ತೆ ಮನೆ! - 87 ರೂಪಾಯಿಗೆ ಮನೆ ಮಾರಾಟ

ವಾಸ ಮಾಡಲು ಸ್ವಂತಃ ಮನೆ ಖರೀದಿ ಮಾಡಬೇಕೆಂಬುವವರಿಗೆ ಇಲ್ಲೊಂದು ಗುಡ್​ನ್ಯೂಸ್​. ಕೇವಲ 87 ರೂಪಾಯಿ ನೀಡಿ ನಿವಾಸ ಖರೀದಿ ಮಾಡುವ ಸುವರ್ಣವಕಾಶ ಒದಗಿ ಬಂದಿದೆ.

house
house
author img

By

Published : Aug 24, 2021, 8:20 PM IST

ಬಿಸಾಕಿಯಾ(ರೋಮ್​): ಸುಂದರವಾದ ಮನೆ ಖರೀದಿ ಮಾಡಬೇಕಾದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲೇಬೇಕು. ಆದರೆ, ಇಲ್ಲೊಂದು ನಗರದಲ್ಲಿ ಯಾರು ಕೂಡ ಊಹೇ ಮಾಡದ ಅತಿ ಕಡಿಮೆ ಬೆಲೆಗೆ ಮನೆಗಳು ಲಭ್ಯವಾಗುತ್ತಿವೆ. ಇಲ್ಲಿ ಕೇವಲ 87 ರೂಪಾಯಿ(1 ಯುರೋ) ನೀಡಿ ಮನೆ ಖರೀದಿ ಮಾಡಬಹುದಾಗಿದೆ.

ನಾವು ಹೇಳುತ್ತಿರುವ ಸ್ಟೋರಿ ರೋಮ್​ನ ಬಿಸಾಕಿಯಾ ಪ್ರದೇಶದ್ದು. ಇಲ್ಲಿ ಕೇವಲ 87 ರೂಪಾಯಿಗೆ ಮನೆಗಳ ಮಾರಾಟ ಮಾಡಲಾಗುತ್ತಿದೆಯಂತೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಮೇಯರ್​ ಕ್ಲಾಡಿಯೋ ಸ್ಪೆರ್ಡುಟಿ ಮಾಹಿತಿ ಹಂಚಿಕೊಂಡಿದ್ದಾರೆ. ಆಗಸ್ಟ್​​ 28ರಂದು ಐದು ಮನೆಗಳ ಮಾರಾಟ ಸಹ ಮಾಡಲಾಗಿದ್ದು, ಬರುವ ದಿನಗಳಲ್ಲಿ ಮತ್ತಷ್ಟು ಮನೆ ಮಾರಾಟ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಯಾವ ಕಾರಣಕ್ಕಾಗಿ ಇಷ್ಟೊಂದು ಕಡಿಮೆ ಬೆಲೆಗೆ ಮನೆ ಮಾರಾಟ?

ರೋಮ್​​ನ ಬಿಸಾಕಿಯಾ ಪ್ರದೇಶದಲ್ಲಿ ಸದ್ಯ ಯಾವುದೇ ಜನರು ವಾಸ ಮಾಡುತ್ತಿಲ್ಲ. ಹೀಗಾಗಿ ಅಲ್ಲಿನ ಶೇ. 90ರಷ್ಟು ಮನೆಗಳು ಹಾಳಾಗಿದ್ದು, ಇದೀಗ ಇಲ್ಲಿ ಜನವಸತಿ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅದೇ ಕಾರಣಕ್ಕಾಗಿ ನೂತನ ವಿನ್ಯಾಸದೊಂದಿಗೆ ಮನೆಗಳ ನಿರ್ಮಾಣ ಮಾಡಿ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಮನೆ ದುರಸ್ತಿಗೋಸ್ಕರ ಖರೀದಿದಾರರು 5,000 ಯುರೋ ಹಣ ನೀಡಬೇಕಾಗಿದೆ.

ಇದನ್ನೂ ಓದಿರಿ: ಒಬ್ಬರನ್ನೊಬ್ಬರು ರಕ್ಷಣೆ ಮಾಡಲು ಹೋಗಿ ಪ್ರಾಣ ಬಿಟ್ಟ ಐವರು ಬಾಲಕಿಯರು!

ರೋಮ್​ನಿಂದ ಸುಮಾರು 70 ಕಿಲೋ ಮೀಟರ್​ ದೂರದಲ್ಲಿ ಈ ಪ್ರದೇಶವಿದ್ದು, 1980ರಲ್ಲಿ ಭೂಕಂಪನದಿಂದಾಗಿ ಈ ಪ್ರದೇಶ ಸಂಪೂರ್ಣವಾಗಿ ಹಾಳಾಗಿತ್ತು. ಇದಾದ ಬಳಿಕ ಇಲ್ಲಿನ ಜನರು ವಲಸೆ ಹೋಗಿ ಬೇರೆ ಪ್ರದೇಶಗಳಲ್ಲಿ ವಾಸ ಮಾಡಲು ಶುರು ಮಾಡಿದ್ದರು. ಹೀಗಾಗಿ ಈ ಪಟ್ಟಣ ಖಾಲಿ ಬಿದ್ದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.