ETV Bharat / international

ಪುಣ್ಯತಿಥಿ ಕಾರ್ಯಕ್ರಮದ ಮೇಲೆ ದಾಳಿ: 29 ಜನ ಹತ, 61 ಮಂದಿಗೆ ಗಾಯ - ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಐಸಿಸ್ ದಾಳಿ

ಕಾಬೂಲ್​ನಲ್ಲಿ ನಡೆದ ದಾಳಿಯಲ್ಲಿ 29 ಜನ ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ದಾಳಿಯ ಹೊಣೆಯನ್ನು ಐಸಿಸ್ ಉಗ್ರರು ಹೊತ್ತುಕೊಂಡಿದ್ದಾರೆ.

Kabul attack
ಪುಣ್ಯತಿಥಿ ಕಾರ್ಯಕ್ರಮದ ಮೇಲೆ ದಾಳಿ
author img

By

Published : Mar 7, 2020, 6:44 AM IST

ಕಾಬೂಲ್: ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 29 ಜನ ಮೃತಪಟ್ಟು, 61 ಜನ ಗಾಯಗೊಂಡ ಘಟನೆ ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ನಡೆದಿದೆ.

ಹಜಬ್ ಇ ವದತ್ ಪಾರ್ಟಿಯ ನಾಯಕ ಅಬ್ದುಲ್ ಅಲಿ ಮಜಾರಿ ಅವರ ಪುಣ್ಯತಿಥಿ ಸಮಾರಂಭದ ಮೇಲೆ ಉಗ್ರರು ದಾಳಿ ಮಾಡಿದ್ದಾರೆ.

ಗಾಯಾಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಟ್ವೀಟ್ ಮಾಡಿ, ದಾಳಿಯನ್ನು ಖಂಡಿಸಿದ್ದಾರೆ. ಇದು ದೇಶದ ಏಕತೆಯ ಹಾಗೂ ಮಾನವೀಯತೆ ವಿರುದ್ಧದ ದಾಳಿ ಎಂದಿದ್ದಾರೆ.

ಐಸಿಸ್​ ಉಗ್ರ ಸಂಘಟನೆಯ ದಾಳಿ ಹೊಣೆ ಹೊತ್ತುಕೊಂಡಿದೆ ಎಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.