ETV Bharat / international

ಪೂರ್ವ ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ : 13 ತಾಲಿಬಾನಿ​ಗಳ ಹತ್ಯೆ

ಪೂರ್ವ ಅಫ್ಘಾನಿಸ್ತಾನದಲ್ಲಿ ಸೇನಾ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ತಾಲಿಬಾನ್ ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ.

airstrike in Eastern Afghanistan
ಪೂರ್ವ ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ
author img

By

Published : Jan 4, 2021, 5:39 PM IST

ಕಾಬೂಲ್ : ಅಫ್ಘಾನಿಸ್ತಾನದ ನಂಗರ್​ಹರ್​ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 13 ತಾಲಿಬಾನ್ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪ್ರಾಂತೀಯ ಪತ್ರಿಕಾ ಕಚೇರಿ ತಿಳಿಸಿದೆ.

ಹತ್ಯೆಯಾದ ಭಯೋತ್ಪಾದಕರ ಪೈಕಿ, ಇತ್ತೀಚೆಗೆ ಯುಎಸ್ ಮಧ್ಯಸ್ಥಿಕೆಯಲ್ಲಿ ನಡೆದ ಅಫ್ಘಾನ್ ಸರ್ಕಾರ ಮತ್ತು ತಾಲಿಬಾನ್​ ಶಾಂತಿ ಒಪ್ಪಂದದಲ್ಲಿ ಬಿಡುಗಡೆಯಾದವನೂ ಸೇರಿದ್ದಾನೆ ಎಂದು ಅಫ್ಘಾನ್ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ ಖಚಿತಪಡಿಸಿದೆ.

ಓದಿ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ತಿರಂಗಾ ಧ್ವಜ!

ಕಳೆದ ಫೆಬ್ರವರಿಯಲ್ಲಿ, ಕತಾರ್​ ರಾಜಧಾನಿ ದೋಹಾದಲ್ಲಿ ತಾಲಿಬಾನ್ ಮತ್ತು ಅಫ್ಘಾನ್ ಸರ್ಕಾರ ನಡುವೆ ಶಾಂತಿ ಒಪ್ಪಂದ ನಡೆದಿತ್ತು. ಅಮೆರಿಕ​ ಅದರ ಮಧ್ಯಸ್ಥಿಕೆ ವಹಿಸಿತ್ತು. ಶಾಂತಿ ಒಪ್ಪಂದದಲ್ಲಿ ಎರಡೂ ಕಡೆಯ ಬಂಧಿತರನ್ನು ಬಿಡುಗಡೆ ಮಾಡುವ ಬಗ್ಗೆ ಮಾತುಕತೆಯಾಗಿತ್ತು, ಕಾಬೂಲ್​​ನಿಂದ 5 ಸಾವಿರ ತಾಲಿಬಾನಿಗಳು ಮತ್ತು ತಾಲಿಬಾನಿಗಳ ವಶದಲ್ಲಿರುವ 1 ಸಾವಿರ ಸರ್ಕಾರಿ ಸಿಬ್ಬಂದಿಯನ್ನು ಬಿಡುಗಡೆ ಮಾಡುವುದಾಗಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.