ETV Bharat / international

ಉಕ್ರೇನ್​ ಮೇಯರ್ ಬಂಧಿಸಿ, ಹೊಸ ಮೇಯರ್ ನೇಮಿಸಿದ ರಷ್ಯಾ : ಇಸ್ರೇಲ್ ಸಹಾಯ ಕೋರಿದ ಝೆಲೆನ್ಸ್ಕಿ

ಉಕ್ರೇನ್​ನ ಮೆಲಿಟೋಪೋಲ್ ಮೇಯರ್​ ಇವಾನ್ ಫೆಡೋರೊವ್ ಅವರನ್ನು ಬಂಧಿಸಿದ್ದ ರಷ್ಯಾ ಪಡೆಗಳು ಆ ಜಾಗದಲ್ಲಿ ಗಲಿನಾ ಡ್ಯಾನಿಲ್ಚೆಂಕೊ ಎಂಬ ಮತ್ತೊಬ್ಬ ಮೇಯರ್​ನನ್ನು ನೇಮಿಸಿದ್ದು, ಈ ಕುರಿತಂತೆ ಉಕ್ರೇನ್ ಅಧ್ಯಕ್ಷ ಇಸ್ರೇಲ್​ನ ಸಹಾಯವನ್ನು ಯಾಚಿಸಿದ್ದಾರೆ..

Zelenskyy seeks Israel's help for release of Melitopol mayor
ಉಕ್ರೇನ್​ ಮೇಯರ್ ಬಂಧಿಸಿ, ಹೊಸ ಮೇಯರ್ ನೇಮಿಸಿದ ರಷ್ಯಾ: ಇಸ್ರೇಲ್ ಸಹಾಯ ಕೋರಿದ ಝೆಲೆನ್ಸ್ಕಿ
author img

By

Published : Mar 13, 2022, 7:56 AM IST

ಕೀವ್, ಉಕ್ರೇನ್ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಉಕ್ರೇನ್​ನ ಮೆಲಿಟೋಪೋಲ್ ಮೇಯರ್​ ಅನ್ನು ರಷ್ಯಾ ಪಡೆಗಳು ವಶಕ್ಕೆ ಪಡೆದುಕೊಂಡಿವೆ. ಆ ಜಾಗದಲ್ಲಿ ಹೊಸ ಮೇಯರ್​ ಅನ್ನು ರಷ್ಯಾ ನೇಮಿಸಿದೆ.

ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿರುವ ಉಕ್ರೇನ್​ನ ಚುನಾಯಿತ ಮೇಯರ್ ಅನ್ನು ಬಿಡುಗಡೆ ಮಾಡಲು ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ಇಸ್ರೇಲ್ ಸಹಾಯವನ್ನು ಯಾಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಝೆಲೆನ್ಸ್ಕಿ, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರೊಂದಿಗೆ ಮಾತುಕತೆ ಮುಂದುವರೆದಿದೆ. ರಷ್ಯಾದ ಆಕ್ರಮಣಶೀಲತೆ ಮತ್ತು ಶಾಂತಿಯ ಕುರಿತು ನಾವು ಮಾತನಾಡಿದ್ದೇವೆ. ಉಕ್ರೇನ್​​ ನಾಗರಿಕರ ವಿರುದ್ಧದ ದಬ್ಬಾಳಿಕೆಯನ್ನು ನಿಲ್ಲಿಸಬೇಕೆಂದು, ಮೆಲಿಟೋಪೋಲ್​ನ ಮೇಯರ್ ಬಿಡುಗಡೆಗೆ ಈ ವೇಳೆ ಸಹಾಯ ಕೇಳಲಾಯಿತು ಎಂದಿದ್ದಾರೆ.

  • Continued dialogue with 🇮🇱 PM @naftalibennett. We talked about Russian aggression and the prospects for peace talks. We must stop repressions against civilians: asked to assist in the release of captive mayor of Melitopol and local public figures #StopRussia

    — Володимир Зеленський (@ZelenskyyUa) March 12, 2022 " class="align-text-top noRightClick twitterSection" data=" ">

ಶುಕ್ರವಾರವಷ್ಟೇ ಉಕ್ರೇನ್​ನ ಚುನಾಯಿತ ಮೇಯರ್ ಆದ ಇವಾನ್ ಫೆಡೋರೊವ್ ಅವರನ್ನು ಬಂಧಿಸಿದ್ದ ರಷ್ಯಾ ಪಡೆಗಳು, ಆ ಜಾಗದಲ್ಲಿ ಗಲಿನಾ ಡ್ಯಾನಿಲ್ಚೆಂಕೊ ಎಂಬ ಮತ್ತೊಬ್ಬ ಮೇಯರ್​ನನ್ನು ನೇಮಿಸಿವೆ ಎಂದು ಝಪೊರಿಝಿಯಾ ಪ್ರಾದೇಶಿಕ ಆಡಳಿತ ಮಾಹಿತಿ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಉಕ್ರೇನಿಯನ್ ವಿದೇಶಾಂಗ ಸಚಿವಾಲಯವು, ತನ್ನ ಫೇಸ್‌ಬುಕ್ ಖಾತೆಯಲ್ಲಿ ಮೆಲಿಟೊಪೋಲ್ ಮೇಯರ್‌ನ ಬಂಧನವನ್ನು ಯುದ್ಧ ಅಪರಾಧ ಎಂದು ಕರೆದಿದ್ದು, ರಷ್ಯಾ ಪಡೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗಿತ್ತು.

ಇದನ್ನೂ ಓದಿ: Russia Ukraine War : ಅಮೆರಿಕದಿಂದ ಉಕ್ರೇನ್​ಗೆ ಶಸ್ತ್ರಾಸ್ತ್ರಗಳಿಗೆ $200 ಮಿಲಿಯನ್ ನೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.