ಕೀವ್: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಸಾವಿರಾರು ನಾಗರಿಕರು ಬಲಿಯಾಗುತ್ತಿದ್ದಾರೆ. ಆದರೆ ಇತ್ತಿಚೇಗೆ ನಾಗರಿಕರು ಆಶ್ರಯ ಪಡೆದಿದ್ದ ಮರಿಯುಪೋಲ್ ಶಾಲೆಯ ಮೇಲೆ ರಷ್ಯಾದ ಬಾಂಬ್ ದಾಳಿ ಮಾಡಿತ್ತು. ಈ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಖಂಡಿಸಿದ್ದಾರೆ.
ಸೋಮವಾರ ಮುಂಜಾನೆ ವಿಡಿಯೋ ಭಾಷಣದಲ್ಲಿ ಮಾತನಾಡಿದ ಝೆಲೆನ್ಸ್ಕಿ, ಅಜೋವ್ ಬಂದರು ನಗರದಲ್ಲಿನ ಕಲಾ ಶಾಲೆಯಲ್ಲಿ ಸುಮಾರು 400 ನಾಗರಿಕರು ಆಶ್ರಯ ಪಡೆಯುತ್ತಿದ್ದರು. ಆದರೆ, ಈ ಶಾಲೆಯ ಮೇಲೆ ರಷ್ಯಾದ ಬಾಂಬ್ ದಾಳಿ ನಡೆಸಿರುವುದು ಅಮಾನವೀಯವಾಗಿದೆ ಎಂದು ಹೇಳಿದರು.
ಓದಿ: ಕೆಲಸ ಮುಗಿಸಿ ಮಧ್ಯರಾತ್ರಿ10 ಕಿ.ಮೀ ಓಡುತ್ತಲೇ ಮನೆ ಸೇರುವ ಯುವಕ: ಯಾಕೆ ಗೊತ್ತಾ?
ಶಾಲೆ ಕಟ್ಟಡ ನೆಲಕ್ಕುರುಳಿದ್ದು, ಅದರ ಅವಶೇಷಗಳಡಿ ಎಷ್ಟು ಮಂದಿ ಬದುಕುಳಿದಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಬಾಂಬ್ ದಾಳಿ ನಡೆಸಿ ನೂರಾರು ಅಮಾಯಕರ ಬಲಿ ತೆಗೆದುಕೊಂಡಿರುವ ಪೈಲಟ್ ಅನ್ನು ನಾವು ಖಂಡಿತವಾಗಿಯೂ ಹೊಡೆದುರುಳಿಸುತ್ತೇವೆ ಎಂದು ಝೆಲೆನ್ಸ್ಕಿ ತಮ್ಮ ನೋವು ಹೊರ ಹಾಕಿದ್ದಾರೆ.
ಭಾನುವಾರ ವಿಡಿಯೋ ಲಿಂಕ್ ಮೂಲಕ ಇಸ್ರೇಲ್ ಸಂಸತ್ತಿನ ಸದಸ್ಯರೊಂದಿಗೆ ಮಾತನಾಡಿದ ಝೆಲೆನ್ಸ್ಕಿ, ರಷ್ಯಾದೊಂದಿಗೆ ಮಾತುಕತೆಗಳನ್ನು ನಡೆಸಲು ಮಧ್ಯವರ್ತಿ ವಹಿಸಿದ್ದ ಇಸ್ರೇಲ್ಗೆ ಧನ್ಯವಾದಗಳು. ಇಸ್ರೇಲ್ ಪ್ರಧಾನ ಮಂತ್ರಿ ನಫ್ತಾಲಿ ಬೆನೆಟ್ ಅವರು ರಷ್ಯಾದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುವ ಮೂಲಕ ನಮಗೆ ಸಹಾಯ ಮಾಡುವ ಪ್ರಯತ್ನದ ಬಗ್ಗೆ ಎಂದು ಶ್ಲಾಘಿಸಿದರು. ಆದ್ದರಿಂದ ನಾವು ಬೇಗ ಅಥವಾ ನಂತರ ರಷ್ಯಾದೊಂದಿಗೆ ಮಾತುಕತೆ ಪ್ರಾರಂಭಿಸುತ್ತೇವೆ. ಸಾಧ್ಯವಾದರೆ ಜೆರುಸಲೆಮ್ನಲ್ಲಿ ಶಾಂತಿ ಕಂಡುಕೊಳ್ಳಲು ಇದು ಸರಿಯಾದ ಸ್ಥಳವಾಗಿದೆ ಎಂದೂ ಝೆಲೆನ್ಸ್ಕಿ ತಿಳಿಸಿದ್ದಾರೆ.
ಓದಿ: ಉಕ್ರೇನ್ನಿಂದ ನವೀನ್ ಮೃತದೇಹ ತಾಯ್ನಾಡಿಗೆ... ಮೋದಿಗೆ ಧನ್ಯವಾದ ಸಲ್ಲಿಸಿದ ಸಿಎಂ ಬೊಮ್ಮಾಯಿ
ಗ್ರೂಪ್ ಆಫ್ ಸೆವೆನ್ ಮತ್ತು NATO ನ ಈ ವಾರದ ಶೃಂಗಸಭೆಯಲ್ಲಿ ಉಕ್ರೇನ್‌ಗೆ ಬೆಂಬಲ ನೀಡುವುದರ ಬಗ್ಗೆ ಚರ್ಚಿಸಲು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ಗೆ ಭಾನುವಾರ ಕರೆ ಮಾಡಿದ್ದೇನೆ ಎಂದು ಉಕ್ರೇನಿಯನ್ ಅಧ್ಯಕ್ಷರು ಹೇಳಿದರು.
ಮರಿಯುಪೋಲ್‌ನಿಂದ ಸುಮಾರು 4,000 ಸೇರಿದಂತೆ 7,295 ಉಕ್ರೇನಿಯನ್ನರನ್ನು ಭಾನುವಾರದಂದು ಯುದ್ಧ ಭೂಮಿಯಿಂದ ಸ್ಥಳಾಂತರಿಸಲಾಗಿದೆ. ರಷ್ಯಾದ ಆಕ್ರಮಣದ ವಿರುದ್ಧ ಪ್ರತಿಭಟಿಸಲು ದಕ್ಷಿಣದ ನಗರವಾದ ಖೆರ್ಸನ್‌ನಲ್ಲಿ ಜನರು ಬೀದಿಗಿಳಿದು ಧೈರ್ಯವನ್ನು ತೋರಿಸಿದ್ದಕ್ಕಾಗಿ, ಆಕ್ರಮಣಕಾರರ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದ್ದಕ್ಕಾಗಿ ದೇಶದ ನಾಗರಿಕರನ್ನು ಝೆಲೆನ್ಸ್ಕಿ ಶ್ಲಾಘಿಸಿದ್ದಾರೆ.
ಉಕ್ರೇನ್ ದೇಶವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ಪಡೆದುಕೊಳ್ಳಲು ಮುಂದಾಗಿರುವ ರಷ್ಯಾ, ಖಾರ್ಕಿವ್, ಕೀವ್, ಸುಮಿ ಸೇರಿದಂತೆ ಪ್ರಮುಖ ನಗರಗಳ ಮೇಲೆ ಶೆಲ್, ಬಾಂಬ್ ದಾಳಿ ಮುಂದುವರಿಸಿದೆ.