ETV Bharat / international

ದಾಳಿಯಿಂದ ಜರ್ಜರಿತಗೊಂಡ ಉಕ್ರೇನ್​ಗೆ 3 ಬಿಲಿಯನ್​ ಡಾಲರ್​ ನೆರವು ಘೋಷಿಸಿದ ವಿಶ್ವಬ್ಯಾಂಕ್​ - 3 ಬಿಲಿಯನ್​ ಡಾಲರ್​ ಹಣಕಾಸು ಸಹಾಯ

ರಷ್ಯಾದ ದಾಳಿಗೆ ಸಿಲುಕಿ ತತ್ತರಿಸುತ್ತಿರುವ ಉಕ್ರೇನ್​ಗೆ ವಿಶ್ವಬ್ಯಾಂಕ್​ ಶೀಘ್ರದಲ್ಲೇ 3 ಬಿಲಿಯನ್​ ಡಾಲರ್​ ಹಣಕಾಸು ನೆರವು ನೀಡಲು ಮುಂದಾಗಿದೆ.

World Bank
ವಿಶ್ವಬ್ಯಾಂಕ್
author img

By

Published : Mar 2, 2022, 11:21 AM IST

ವಾಷಿಂಗ್ಟನ್ (ಅಮೆರಿಕ): ರಷ್ಯಾದ ದಾಳಿಗೆ ಸಿಲುಕಿ ತತ್ತರಿಸುತ್ತಿರುವ ಉಕ್ರೇನ್​ಗೆ ವಿಶ್ವಬ್ಯಾಂಕ್​ ಶೀಘ್ರದಲ್ಲೇ 3 ಬಿಲಿಯನ್​ ಡಾಲರ್​ ಹಣಕಾಸು ನೆರವು ನೀಡಲು ಮುಂದಾಗಿದೆ. ಅಲ್ಲದೇ ಇದನ್ನು ತುರ್ತು ಅಗತ್ಯ ಎಂದು ಪರಿಗಣಿಸಿ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂಬ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್​) ಮನವಿ ಪುರಸ್ಕರಿಸಲಿದೆ.

ವಿಶ್ವ ಬ್ಯಾಂಕ್​ನ ಅಧ್ಯಕ್ಷ ಡೇವಿಡ್​ ಮಾಲ್ಪಾಸ್​ ಮತ್ತು ಐಎಂಎಫ್​ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ಉಕ್ರೇನ್​ಗೆ ಹಣಕಾಸು ಇಷ್ಟು ದೊಡ್ಡ ಪ್ಯಾಕೇಜ್​ ಘೋಷಣೆಯ ಕುರಿತು ಜಂಟಿ ಹೇಳಿಕೆ ನೀಡಿದ್ದಾರೆ. ಉಕ್ರೇನ್‌ನಲ್ಲಿನ ಯುದ್ಧದಿಂದ ಉಂಟಾದ ಮಾನವ ಪ್ರಾಣ ಹಾನಿ ಮತ್ತು ಭೀಕರತೆ ಆತಂಕ ಮೂಡಿಸಿದೆ. ಸಾವಿರಾರು ಪ್ರಾಣಗಳು ಆಹುತಿಯಾಗಿವೆ.

ಹಲವರು ಗಾಯಗೊಂಡಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿ ಪಲಾಯನ ಮಾಡುತ್ತಿದ್ದಾರೆ. ಉಕ್ರೇನ್​ ದಾಳಿಯಿಂದ ಜರ್ಝರಿತವಾಗಿದೆ. ಹೀಗಾಗಿ ವಿಶ್ವಬ್ಯಾಂಕ್​ ಮತ್ತು ಐಎಂಎಫ್​ ಉಕ್ರೇನ್​ ಬೆಂಬಲಕ್ಕೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ.

ಆರ್ಥಿಕ ಸಹಾಯ ಕೋರಿದ್ದ ಉಕ್ರೇನ್​ಗೆ ನೆರವು ನೀಡುವ ಕುರಿತು ಮುಂದಿನ ವಾರದಲ್ಲಿ ಮಂಡಳಿಯ ಸಭೆ ನಡೆಸಲಾಗುವುದು. ಸ್ಟ್ಯಾಂಡ್​ ಬೈ ಅರೇಂಜ್​ಮೆಂಟ್​ ಆಧಾರದ ಮೇಲೆ ಆ ದೇಶಕ್ಕೆ 2.2 ಬಿಲಿಯನ್​ ಹಣಕಾಸು ನೆರವನ್ನು ಶೀಘ್ರವೇ ನೀಡಲಾಗುವುದು. ಜೂನ್ ಅಂತ್ಯದ ವೇಳೆಗೆ ಎಲ್ಲ ನೆರವು ದೇಶಕ್ಕೆ ಸಿಗಲಿದೆ ಎಂದು ಉಭಯ ಸಂಸ್ಥೆಗಳು ತಿಳಿಸಿವೆ.

ಓದಿ: ಮಾತುಕತೆಗೂ ಮುನ್ನ ಬಾಂಬ್​ ಹಾಕೋದನ್ನು ನಿಲ್ಲಿಸಿ.. ರಷ್ಯಾಗೆ ಉಕ್ರೇನ್​ ಅಧ್ಯಕ್ಷರ ತಾಕೀತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.