ETV Bharat / international

ಕೋವಿಡ್​ ಲಸಿಕೆ ವಿತರಣೆಯಲ್ಲಿ ಅಸಮತೋಲನ: ವಿಶ್ವ ಆರೋಗ್ಯ ಸಂಸ್ಥೆ ವಿಷಾದ - ಟೆಡ್ರೊಸ್ ಸುದ್ದಿಗೋಷ್ಟಿ

ಕಳೆದ ಒಂದೂವರೆ ತಿಂಗಳಿನಲ್ಲಿ 'KOVAX' ಕಾರ್ಯಕ್ರಮದಡಿ 100 ಕ್ಕೂ ಹೆಚ್ಚು ದೇಶಗಳು ಮತ್ತು ಆರ್ಥಿಕತೆಗಳಿಗೆ ಸುಮಾರು 38 ಮಿಲಿಯನ್​ಗೂ ಹೆಚ್ಚಿನ ಪ್ರಮಾಣದ ಡೋಸ್​ಗಳನ್ನು ಪೂರೈಸಲಾಗಿದ್ದು, ಲಸಿಕೆ ವಿತರಣೆಯಲ್ಲಿ ಅಸಮತೋಲನ ಎದ್ದು ಕಾಣುತ್ತಿದೆ ಎಂದು WTO ಡೈರೆಕ್ಟರ್​ ಜನರಲ್​ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

COVID-19 shot distribution
WTO ಡೈರೆಕ್ಟರ್​ ಜನರಲ್​ ಟೆಡ್ರೊಸ್ ಅಧಾನೊಮ್ ಮಾಹಿತಿ
author img

By

Published : Apr 11, 2021, 10:11 AM IST

ಜಿನಿವಾ: ಹಿಂದುಳಿದ ದೇಶಗಳಿಗೆ COVID-19 ಲಸಿಕೆಗಳನ್ನು ವಿತರಿಸುವಲ್ಲಿ "ಆಘಾತಕಾರಿ ಅಸಮತೋಲನ" ಕಂಡು ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

220 ದೇಶಗಳ ಪೈಕಿ ಈಗಾಗಲೇ 194 ದೇಶಗಳು ಲಸಿಕೆ ನೀಡುವುದನ್ನು ಆರಂಭಿಸಿದ್ದು, 26 ದೇಶಗಳು ಇನ್ನೂ ವ್ಯಾಕ್ಸಿನ್​ ಆರಂಭಿಸಿಲ್ಲ. ಇವುಗಳಲ್ಲಿ 7 ದೇಶಗಳಿಗೆ ಲಸಿಕೆ ಪೂರೈಸಲಾಗಿದೆ, 5 ದೇಶಗಳು ಮುಂದಿನ ದಿನಗಳಲ್ಲಿ ವ್ಯಾಕ್ಸಿನ್​ ಸ್ವೀಕರಿಸಲಿವೆ.

WTO ಡೈರೆಕ್ಟರ್​ ಜನರಲ್​ ಟೆಡ್ರೊಸ್ ಅಧಾನೊಮ್ ಮಾಹಿತಿ

ಕೋವಿಡ್​ ವ್ಯಾಕ್ಸಿನೇಷನ್​ ಆರಂಭಿಸದ 14 ದೇಶಗಳು ಇದಕ್ಕೆ ಹಲವು ಕಾರಣಗಳನ್ನು ನೀಡಿವೆ. ಕೆಲವು 'KOVAX' (ಜಗತ್ತಿನ ವಿವಿಧ ದೇಶಗಳಿಗೆ ಕೋವಿಡ್ ಲಸಿಕೆ ವಿತರಣೆ ಮಾಡಲು ವಿಶ್ವಸಂಸ್ಥೆ ಜಾರಿಗೊಳಿಸಿರುವ ಕಾರ್ಯಕ್ರಮ) ಮೂಲಕ ಇನ್ನು ಲಸಿಕೆ ಕೋರಿಲ್ಲ, ಇನ್ನೂ ಕೆಲವು ವ್ಯಾಕ್ಸಿನೇಷನ್​ಗೆ ಇನ್ನೂ ಸಿದ್ಧತೆ ನಡೆಸಿಲ್ಲ. ಮತ್ತೆ ಕೆಲವು ದೇಶಗಳು ಮುಂದಿನ ವಾರ ಅಥವಾ ಮುಂದಿನ ತಿಂಗಳು ಲಸಿಕೆ ಆರಂಭಿಸಿಲಿವೆ ಎಂದು ಟೆಡ್ರೋಸ್​ ಮಾಧ್ಯಮಗೋಷ್ಟಿ ವೇಳೆ ತಿಳಿಸಿದ್ರು. ಕಳೆದ ಆರು ವಾರಗಳಲ್ಲಿ 100 ಕ್ಕೂ ಹೆಚ್ಚು ದೇಶಗಳು ಮತ್ತು ಆರ್ಥಿಕತೆಗಳಿಗೆ KOVAX ಸುಮಾರು 38 ಮಿಲಿಯನ್​ಗೂ ಹೆಚ್ಚಿನ ಪ್ರಮಾಣದ ಡೋಸ್​ಗಳನ್ನು ಪೂರೈಸಿದೆ ಎಂದು ತಿಳಿಸಿದ್ರು.

ಮಾರ್ಚ್ ಅಂತ್ಯದ ವೇಳೆಗೆ KOVAX ಸುಮಾರು 100 ಮಿಲಿಯನ್ ಡೋಸ್‌ಗಳನ್ನು ವಿತರಿಸುವ ನಿರೀಕ್ಷೆಯಿತ್ತು, ಆದರೆ ಲಸಿಕೆ ಪೂರೈಕೆಯಲ್ಲಿ ಗಮನಾರ್ಹ ಇಳಿಕೆಯಿಂದಾಗಿ, ನಾವು ಕೇವಲ 38 ಮಿಲಿಯನ್ ಡೋಸ್‌ಗಳನ್ನು ವಿತರಿಸಲು ಸಾಧ್ಯವಾಯಿತು "ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥರು ಹೇಳಿದರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಗುರಿಯನ್ನು ಸಾಧಿಸುವ ನಿರೀಕ್ಷೆ ಇದೆ ಎಂದು ಹೇಳಿದ್ರು.

ಕೆಲವು ದೇಶಗಳು ಮತ್ತು ಕಂಪನಿಗಳು ತಮ್ಮದೇ ಆದ ರಾಜಕೀಯ ಅಥವಾ ವಾಣಿಜ್ಯ ಕಾರಣಗಳಿಗಾಗಿ ಕೋವಾಕ್ಸ್ ಬದಲು ತಮ್ಮದೇ ಆದ ದ್ವಿಪಕ್ಷೀಯ ಲಸಿಕೆ ನೀಡಲು ಯೋಜಿಸುತ್ತಿರುವುದು ಅರ್ಥವಾಗುವಂತಹದ್ದಾಗಿದೆ ಎಂದು ಟೆಡ್ರೊಸ್ ಹೇಳಿದರು. "ಈ ದ್ವಿಪಕ್ಷೀಯ ವ್ಯವಸ್ಥೆಗಳು ಲಸಿಕೆ ಅಸಮಾನತೆಯ ಜ್ವಾಲೆಗಳನ್ನು ಉಂಟುಮಾಡುವ ಅಪಾಯವನ್ನುಂಟುಮಾಡುತ್ತವೆ. ಇದು ಸಹಭಾಗಿತ್ವದ ಸಮಯ, ಪ್ರೋತ್ಸಾಹವಲ್ಲ. ಪೂರೈಕೆಯ ಕೊರತೆಯು ಲಸಿಕೆ ರಾಷ್ಟ್ರೀಯತೆ ಮತ್ತು ಲಸಿಕೆ ರಾಜತಾಂತ್ರಿಕತೆಗೆ ಕಾರಣವಾಗಿದೆ" ಎಂದು ಅವರು ಹೇಳಿದರು.

ಯುಎಸ್ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಇತ್ತೀಚೆಗೆ ಬಡ ರಾಷ್ಟ್ರಗಳಿಗೆ ಹೆಚ್ಚಿನ ಲಸಿಕೆ ಪ್ರಮಾಣವನ್ನು ದಾನ ಮಾಡುವಂತೆ ಶ್ರೀಮಂತ ರಾಷ್ಟ್ರಗಳಿಗೆ ಕರೆ ನೀಡಿದ್ದು, ಸಹಾಯವಿಲ್ಲದೆ ಹೋದರೆ ಬಡ ಅಥವಾ ಹಿಂದುಳಿದ ರಾಷ್ಟ್ರಗಳು "ಆಳವಾದ ಆರ್ಥಿಕ ದುರಂತ" ವನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.